ಆಹಾರ ಗುಣಮಟ್ಟ ತಪಾಸಣೆ ಎಸ್ಒಪಿ ಶೀಘ್ರ; ಯು.ಟಿ.ಖಾದರ್
True Media Kannada:ನೀಡುವ ಆಹಾರ ಮತ್ತು ಔಷಧದ ಕುರಿತು ಜನರಿಗೆ ಖಾತರಿ ಇರಬೇಕು. ಅದು ಎಷ್ಟು ಹಳೆಯದು, ಅದರಲ್ಲಿರುವ ಅಂಶಗಳು ಯಾವುವು ಎಂಬ ಪೂರ್ಣ ಮಾಹಿತಿ ಜನರಿಗೆ ತಿಳಿದಿರಬೇಕು ಎಂದು ಪ್ರತಿಪಾದಿಸುತ್ತಾರೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ.ಖಾದರ್. ಅವರ ಸೂಚನೆ ಮೇರೆಗೆ ಬೆಂಗಳೂರಿನ ಸ್ಟಾರ್ ಹೋಟೆಲ್ಗಳು, ಔಷಧ ತಯಾರಿ ಹಾಗೂ ದಾಸ್ತಾನು ಸಂಸ್ಥೆಗಳ ಮೇಲೆ ಅಧಿಕಾರಿಗಳು ದಿಢೀರ್ ದಾಳಿ ನಡೆಸುತ್ತಿದ್ದಾರೆ. ಈ ವೇಳೆ ಆಹಾರ ಸುರಕ್ಷತೆ ಹಾಗೂ ಔಷಧದ ಸುರಕ್ಷತೆ ಕುರಿತು ಆತಂಕ ಮೂಡಿಸುವ ಅಂಶಗಳು ಬೆಳಕಿಗೆ ಬಂದಿವೆ. ಜನರು ಸೇವಿಸುವ ಆಹಾರ ಹಾಗೂ ಔಷಧಗಳ ಸುರಕ್ಷತೆ ಕಾಪಾಡುವ ಉದ್ದೇಶದಿಂದ ವ್ಯವಸ್ಥೆಯನ್ನು ಸುಧಾರಿಸುವ ಬಗ್ಗೆ ಅವರು ‘ಪ್ರಜಾವಾಣಿ’ ಜೊತೆ ಹಂಚಿಕೊಂಡ ಅಭಿಪ್ರಾಯಗಳ ಪ್ರಮುಖ ಅಂಶಗಳು ಇಲ್ಲಿವೆ.
ಆರೋಗ್ಯಕ್ಕೆ ಸಮಸ್ತ ಕಾರಣಿಕೊಡುವುದೇ ಸೇವಿಸುವ ಆಹಾರದಿಂದ. ಆರೋಗ್ಯ ಕಾಪಾಡುವಲ್ಲಿ ಆಹಾರ ಹಾಗೂ ಔಷಧದ ಪಾತ್ರ ಮುಖ್ಯವಾದುದು. ಆಹಾರ ಮತ್ತು ಔಷಧ ಗುಣಮಟ್ಟ ಕಾಪಾಡುವ ವ್ಯವಸ್ಥೆಯಲ್ಲಿನ ಲೋಪ ನನ್ನನ್ನು ತೀವ್ರವಾಗಿ ಕಾಡುತ್ತದೆ.
ಅಮೆರಿಕದ ಶಿಕಾಗೋಗೆ ಈಚೆಗೆ ಪ್ರವಾಸ ಕೈಗೊಂಡಿದ್ದೆ. ಆಗ ಅಲ್ಲಿನ ಒಂದು ರೆಸ್ಟೋರೆಂಟ್ಗೆ ಭೇಟಿ ನೀಡಿದ್ದೆ. ಅದರ ಮಾಲೀಕನ ಜೊತೆ ಹರಟುತ್ತಿದ್ದಾಗ, ಆತ ಬರ್ಗರ್ ಚೈನ್ ವ್ಯವಹಾರವನ್ನೂ ನಡೆಸುತ್ತಿರುವುದು ಗೊತ್ತಾಯಿತು. ಅದರ ಬಗ್ಗೆ ಮತ್ತಷ್ಟು ಮಾಹಿತಿ ಪಡೆಯುವ ಕುತೂಹಲದಿಂದ, ‘ಚಿಕನ್ ಅನ್ನು ಎಷ್ಟು ಸಮಯದವರೆಗೆ ಇಡಲಾಗುತ್ತದೆ’ ಎಂದು ಕೇಳಿದೆ.
ಆತ, ‘ಒಂದೊಂದು ದೇಶದಲ್ಲಿ ಒಂದೊಂದು ರೀತಿಯ ಕಾನೂನು ಇರುತ್ತದೆ. ಸಾಮಾನ್ಯವಾಗಿ ಚಿಕನ್ ಅನ್ನು ಒಂದು ವರ್ಷಧವರೆಗೂ ಇಡುತ್ತಾರೆ. ನಮಗೆ ಪ್ರತ್ಯೇಕವಾದ ಬನ್ಗಳು ಇಂಗ್ಲೆಂಡ್, ಕೆನಡಾದಂತಹ ದೇಶಗಳಿಂದ ಬರುತ್ತವೆ. ಅವುಗಳನ್ನು ಎಷ್ಟು ತಿಂಗಳವರೆಗೆ ಇಡುತ್ತಾರೆ’ ಎಂದು ಆತ ಹೇಳಿದ್ದನ್ನು ಕೇಳಿ ಆಶ್ಚರ್ಯವಾಯಿತು.
ಬಹುಕಾಲ ದಾಸ್ತಾನು ಮಾಡಿದ ಆಹಾರ ಇಲ್ಲಿ ಇರಬೇಕಿದೆ ಎಂಬುದನ್ನು ಗಮನಿಸಿದಾಗ, ಅವರು ಎಷ್ಟು ಹಳೆಯದು ಎಂಬ ಮಾಹಿತಿಯನ್ನು ಗ್ರಾಹಕರಿಗೆ ತಿಳಿಯಬೇಕು. ರಾಜ್ಯದಲ್ಲಿರುವ ಈ ವ್ಯವಸ್ಥೆ ಬಗ್ಗೆಯೂ ಜನರಿಗೆ ತಿಳಿಯಬೇಕು ಎಂಬ ಉದ್ದೇಶದಿಂದ ಇಲ್ಲಿ ಹೋಟೆಲ್ಗಳಲ್ಲಿ ಪರಿಶೀಲನೆ ನಡೆಸಬೇಕು.
