Saturday, 17 Oct 2026
Breaking
ಎಸ್‌ಎಸ್‌ಕೆ ಸಮಾಜದ ದಸರಾ ಆಚರಣೆ ಅತ್ಯಂತ ವಿಶೇಷ ವಾಗಿದ್ದು ಭಕ್ತಿ, ಶ್ರದ್ಧೆ ಇತರಿಗೆ ಮಾರ್ಗದರ್ಶಿ ; ಶಾಸಕ ಹರೀಶ್  ಕನ್ನಡ ಸಾಹಿತ್ಯದಲ್ಲಿ ವೈಚಾರಿಕ, ಸಾಂಸ್ಕೃತಿಕ ಹಾಗೂ ಸಾಮಾಜಿಕ ಮೌಲ್ಯಗಳ ಸಮನ್ವಯವಿದೆ ; ಡಾ. ಎ.ಬಿ. ರಾಮಚಂದ್ರಪ್ಪ ಶಿಕ್ಷಣ ಸಂಸ್ಥೆ, ರಿಯಲ್ ಎಸ್ಟೇಟ್ ವ್ಯವಹಾರವಿಲ್ಲ ; ಸೇವೆ ಮಾಡುವ ಉದ್ದೇಶದಿಂದ ಚುನಾವಣೆಗೆ ಸ್ಪರ್ಧೆ: ಶಶಿ ಹುಲಿಕುಂಟೆ ಮಠ ಹರಿಹರ ಗಣೇಶೋತ್ಸವದ ಇತಿಹಾಸದಲ್ಲಿ ಹೊಸ ಅಧ್ಯಾಯ ; ಐತಿಹಾಸಿಕ ರಾಜಭೀದಿ ಉತ್ಸವಕ್ಕೆ ಹರಿಹರದಲ್ಲಿ ಮುನ್ನುಡಿ ದಾವಣಗೆರೆ ‘ಆರೋಗ್ಯ ಸಂಜೀವಿ’ ಕಾಯ್ದೆಹೊಳ್ಳಿ ; ನಿಜದ ಬಿಸಿಲವೃತ್ತ” ಜಿಲ್ಲಾ ಮಟ್ಟದ ಶಟಲ್ ಬ್ಯಾಡ್ಮಿಂಟನ್‌ನಲ್ಲಿ ಇಂದಿರಾಗಾಂಧಿ ವಸತಿ ಶಾಲೆ ವಿದ್ಯಾರ್ಥಿಗಳ ಸಾಧನೆ ಸಾಲ ಮರುಪಾವತಿಸುವಂತೆ ಗ್ರಾಹಕರಿಗೆ ಮನವಿ
Menu
ಆರೋಗ್ಯ

ಹರಿಹರ-ಪಶು ಆಸ್ಪತ್ರೆ ನೂತನ ಕಟ್ಟಡ ಉದ್ಘಾಟನೆ

September 8, 2026 1 month ago 1 min read

ಹರಿಹರ True Media Kannada: ಮೂಕ ಪ್ರಾಣಿಗಳಿಗೆ ಚಿಕಿತ್ಸೆ ನೀಡುವ ಪಶು ಆಸ್ಪತ್ರೆಗಳೂ ಕೂಡ ಕಾಲಕ್ಕೆ ತಕ್ಕಂತೆ ಆಧುನಿಕರಣಗೊಳ್ಳಬೇಕೆಂದು
ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಹೇಳಿದರು. ನಗರದಲ್ಲಿ ಮಂಗಳವಾರ ಪಶು ಆಸ್ಪತ್ರೆ ನೂತನ ಕಟ್ಟಡ ಉದ್ಘಾಟಿಸಿ ಮಾತನಾಡಿದ ಅವರು, ಮನುಷ್ಯರ
ಆಸ್ಪತ್ರೆಗಳಲ್ಲಿರುವಂತೆ ಎಕ್ಸ್ ರೇ, ಎಂ.ಆರ್.ಐ ಸ್ಕ್ಯಾನರ್ ನಂತಹ ಆಧುನಿಕ ಚಿಕಿತ್ಸಾ ಉಪಕರಣಗಳನ್ನು ಪಶು ಆಸ್ಪತ್ರೆಗಳಲ್ಲೂ
ಅಳವಡಿಸಬೇಕು, ಪಶುಗಳಿಗೂ ಆಧುನಿಕ ತಂತ್ರಜ್ಞಾನದ ಉಪಯೋಗ ಸಿಗಬೇಕು, ಆ ಮೂಲಕ ರೈತರ ಬದುಕು ಹಸನಾಗಬೇಕೆಂದರು.
ರಾಜ್ಯ ಸರ್ಕಾರವು ಪಶು ಆಸ್ಪತ್ರೆಗಳ ಅಭಿವೃದ್ಧಿಗೆ ಆಧ್ಯತೆ ನೀಡುತ್ತಿದೆ, ಜಿಲ್ಲೆಯಲ್ಲಿ ನಬಾರ್ಡ್ ಆರ್ ಐಡಿಎಫ್
ಯೋಜನೆಯಡಿ 17 ಪಶು ಆಸ್ಪತ್ರೆಗಳ ಕಟ್ಟಡ ನಿರ್ಮಾಣ ಮಾಡಲಾಗುತ್ತಿದೆ, ಹರಿಹರದ ಆಸ್ಪತ್ರೆಯನ್ನು ರೂ.50 ಲಕ್ಷ ವೆಚ್ಚದಲ್ಲಿ
ನಿರ್ಮಿಸಲಾಗಿದೆ ಎಂದರು. ಅವರು ಸೆಟೆದರೆ, ನಾವೂ ಸೆಟೆಯುತ್ತೇವೆ: ಈ ಕಾರ್ಯಕ್ರಮದ ಅಧ್ಯಕ್ಷತೆವಹಿಸಬೇಕಿದ್ದ ಶಾಸಕ ಹರೀಶ್ ಅವರು ಬಂದಿಲ್ಲ,
ಜಿಲ್ಲಾ ಉಸ್ತುವಾರಿ ಸಚಿವರನ್ನು ಕರೆದುಕೊಂಡು ಸಾಗಬೇಕು, ಅವರು ದೂರ ಇರುತ್ತಾರೆ, ನಮ್ಮ ಬಳಿ ಬಂದರೆ ಹರಿಹರ ತಾಲ್ಲೂಕಿಗೆ
ಅಗತ್ಯ ಇರುವ ಹಲವು ಯೋಜನೆಗಳನ್ನು ಜಾರಿ ಮಾಡಬಹುದು, ಅವರು ಸೆಟೆದರೆ, ನಾವೂ ಕೂಡ ಸೆಟೆಯುತ್ತೇವೆ, ಚುನಾವಣೆ
ಬಂದಾಗ ರಾಜಕೀಯ ಮಾಡಲಿ, ಉಳಿದ ಅವಧಿಯಲ್ಲೂ ರಾಜಕೀಯ ಮಾಡಿದರೆ ಸಹಿಸುವುದಿಲ್ಲ ಎಂದರು.
ತಾಲ್ಲೂಕಿನಲ್ಲಿರುವ ದೇವರಬೆಳೆಕೆರೆ ಪಿಕ್ ಅಪ್ ಡ್ಯಾಮಿನಿಂದ ಕಾಲುವೆಗಳಿಗೆ ನೀರು ಹರಿಸಿದರೆ ಕುಡಿಯುವ ನೀರಿನ ಕೊಳವೆ
ಬಾವಿಗಳ ನೀರು ರೀಚಾರ್ಜ್ ಆಗುತ್ತದೆ, ಈ ಭಾಗದ ಹಲವು ಗ್ರಾಮಗಳಲ್ಲಿ ಕುಡಿಯುವ ನೀರಿನ ಕೊರತೆ ಎದುರಾಗಿದೆ ಎಂದು ಹಲವು
ಗ್ರಾಮಗಳ ರೈತರು ಸಚಿವರು ಮಾತನಾಡುವಾಗಲೆ ಮಧ್ಯ ಪ್ರವೇಶಿಸಿ ಆಗ್ರಹಿಸಿದಾಗ, ಸಚಿವರು, ಡಿಬಿ ಕೆರೆಯಿಂದ ಕಾಲುವೆಗೆ ನೀರು
ಹರಿಸಿದರೆ ನಿನ್ನನ್ನು ಸಸ್ಪೆಂಡ್ ಮಾಡಿಸುತ್ತೇನೆ ಎಂದು ನಿಮ್ಮ ಶಾಸಕರೆ ಧಮಕಿ ಹಾಕಿರುವುದರಿಂದ ಬಿಡುತ್ತಿದ್ದ ನೀರನ್ನು ತಡೆ
ಹಿಡಿಯಲಾಗಿದೆ, ಇದರಲ್ಲಿ ನನ್ನದೇನು ತಪ್ಪಿದೆ ನೀವೆ ಹೇಳಿರಿ, ಈ ಬಗ್ಗೆ ಜಿಲ್ಲಾಧಿಕಾರಿಯವರ ಬಳಿ ಮಾತನಾಡಿ, ಸದಸ್ಯೆಗೆ ಪರಿಹಾರ
ಹುಡುಕೋಣ ಎಂದು ಪ್ರತಿಕ್ರಿಯಿಸಿದರು. ಹರಿಹರ-ಮಲೆಬೆನ್ನೂರು ಹೆದ್ದಾರಿ ಅಭಿವೃದ್ಧಿಗಾಗಿ ಈಗಾಗಲೆ ರೂ.12 ಕೋಟಿ ಅನುದಾನ ಬಿಡುಗಡೆಯಾಗಿದೆ, ಇದರಲ್ಲಿ
ನೀರಾವರಿ ಜಮೀನು ಇರುವೆಡೆ ಸಿಮೆಂಟ್ ರಸ್ತೆ ನಿರ್ಮಿಸಿದರೆ ಹೆಚ್ಚಿನ ಕಾಲ ಬಾಳಿಕೆ ಬರುತ್ತದೆ, ಲೋಕೋಪಯೋಗಿ ಇಂಜಿನಿಯರ್
ಗಳು ಗುಣಮಟ್ಟದ ಕಾಮಗಾರಿ ನಡೆಸಬೇಕೆಂದು ಸಚಿವರು ತಾಕೀತು ಮಾಡಿದರು. ತಾಲ್ಲೂಕು ಪಂಚ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಸಮಿತಿ ಅಧ್ಯಕ್ಷ ನಂದಿಗಾವಿ ಶ್ರೀನಿವಾಸ್ ಮಾತನಾಡಿ, ದಾವಣಗೆರೆಗೆ ಹೋಲಿಸಿದರೆ ಹರಿಹರ ನಗರ ಬಹಳ ಹಿಂದುಳಿದಿದೆ, ಹರಿಹರದ ಅಭಿವೃದ್ಧಿಗೆ ರಾಜ್ಯ ಸರ್ಕಾರವು ಆಧ್ಯತೆ ನೀಡುತ್ತಿದೆ ಎಂದರು.
ಆಸ್ಪತ್ರೆಗೆ ನಿವೇಶನ ನೀಡಿದ ಕುಟುಂಬದ ಮೂರ್ಕಲ್ ಚೆತನ್ ಅವರನ್ನು ಸತ್ಕರಿಸಲಾಯಿತು. ಧೂಡಾ ಅಧ್ಯಕ್ಷ ದಿನೇಶ್
ಕೆ.ಶೆಟ್ಟಿ, ಪಶುಪಾಲನಾ ಇಲಾಖೆ ಉಪ ನಿರ್ದೇಶಕ ಡಾ.ಎಚ್.ಎಂ.ಮಹೇಶ್, ಪಶು ಮುಖ್ಯ ವೈದ್ಯಾಧಿಕಾರಿ ಡಾ.ತಿಪ್ಪೇಸ್ವಾಮಿ,
ಪೌರಾಯುಕ್ತೆ ವಿ.ಈರಮ್ಮ, ಕಾಂಗ್ರೆಸ್ ಮುಖಂಡರಾದ ಬಿ.ರೇವಣಸಿದ್ದಪ್ಪ, ಹಳ್ಳಳ್ಳಿ ಬಸಪ್ಪ, ಎಚ್.ಎಚ್.ಬಸವರಾಜ್, ಹಬೀಬ್
ಉಲ್ಲಾ ಗನ್ನೆವಾಲೆ, ಬಿ.ಎಂ.ವಾಗೀಶ್ ಸ್ವಾಮಿ, ಅಯೂಬ್ ಪೈಲ್ವಾನ್, ನಿಖಿಲ್ ಕೊಂಡಜ್ಜಿ, ವೈ.ರಘುಪತಿ, ಸಂತೋಷ್
ನೋಡದವರ್ ಹಾಗೂ ಇತರರು ಇದ್ದರು.

ಹರಿಹರದಲ್ಲಿ ಮಂಗಳವಾರ ಪಶು ಆಸ್ಪತ್ರೆ ನೂತನ ಕಟ್ಟಡವನ್ನು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್
ಅವರು ಉದ್ಘಾಟಿಸಿದರು. ಧೂಡಾ ಅಧ್ಯಕ್ಷ ದಿನೇಶ್ ಕೆ.ಶೆಟ್ಟಿ, ಪಶುಪಾಲನಾ ಇಲಾಖೆ ಡಿಡಿ ಡಾ.ಎಚ್.ಎಂ.ಮಹೇಶ್ ಹಾಗೂ ಇತರರು
ಇದ್ದರು.

Share: