Friday, 16 Oct 2026
Breaking
ಕನ್ನಡ ಸಾಹಿತ್ಯದಲ್ಲಿ ವೈಚಾರಿಕ, ಸಾಂಸ್ಕೃತಿಕ ಹಾಗೂ ಸಾಮಾಜಿಕ ಮೌಲ್ಯಗಳ ಸಮನ್ವಯವಿದೆ ; ಡಾ. ಎ.ಬಿ. ರಾಮಚಂದ್ರಪ್ಪ ಶಿಕ್ಷಣ ಸಂಸ್ಥೆ, ರಿಯಲ್ ಎಸ್ಟೇಟ್ ವ್ಯವಹಾರವಿಲ್ಲ ; ಸೇವೆ ಮಾಡುವ ಉದ್ದೇಶದಿಂದ ಚುನಾವಣೆಗೆ ಸ್ಪರ್ಧೆ: ಶಶಿ ಹುಲಿಕುಂಟೆ ಮಠ ಹರಿಹರ ಗಣೇಶೋತ್ಸವದ ಇತಿಹಾಸದಲ್ಲಿ ಹೊಸ ಅಧ್ಯಾಯ ; ಐತಿಹಾಸಿಕ ರಾಜಭೀದಿ ಉತ್ಸವಕ್ಕೆ ಹರಿಹರದಲ್ಲಿ ಮುನ್ನುಡಿ ದಾವಣಗೆರೆ ‘ಆರೋಗ್ಯ ಸಂಜೀವಿ’ ಕಾಯ್ದೆಹೊಳ್ಳಿ ; ನಿಜದ ಬಿಸಿಲವೃತ್ತ” ಜಿಲ್ಲಾ ಮಟ್ಟದ ಶಟಲ್ ಬ್ಯಾಡ್ಮಿಂಟನ್‌ನಲ್ಲಿ ಇಂದಿರಾಗಾಂಧಿ ವಸತಿ ಶಾಲೆ ವಿದ್ಯಾರ್ಥಿಗಳ ಸಾಧನೆ ಸಾಲ ಮರುಪಾವತಿಸುವಂತೆ ಗ್ರಾಹಕರಿಗೆ ಮನವಿ ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ತಂಬಾಕು ಮಾರಾಟ: ದಾಳಿ,ದಂಡ ವಿಧಿಸಿದ ಅಧಿಕಾರಿಗಳು
Menu
ಹರಿಹರ

ಪ್ರಾರ್ಥನೆ, ಆರಾಧನೆ ಜೊತೆ ಬಡವರ ಸೇವೆಯಲ್ಲೂ ಭಕ್ತಿ ಅಡಗಿದೆ ಧರ್ಮಾಧ್ಯಕ್ಷ ಫ್ರಾನ್ಸಿಸ್ ಸೇರಾವೋ

September 7, 2026 1 month ago 1 min read
ಹರಿಹರ, ಸೆ. 7 True Media Kannada : ಭಕ್ತಿ ಕೇವಲ ಪ್ರಾರ್ಥನೆ ಮತ್ತು ಆರಾಧನೆಗೆ ಸೀಮಿತವಾಗದೆ, ಬಡವರು, ನಿರ್ಗತಿಕರು ಹಾಗೂ ಸಂಕಷ್ಟದಲ್ಲಿರುವವರ ಸೇವೆಯ ಮೂಲಕವೂ ವ್ಯಕ್ತವಾಗಬೇಕು. ಅಗತ್ಯವಿರುವವರಿಗೆ ನೆರವಿನ ಹಸ್ತ ಚಾಚುವುದರಲ್ಲಿಯೇ ನಿಜವಾದ ಭಕ್ತಿ ಅಡಗಿದೆ ಎಂದು ಮೈಸೂರು ಧರ್ಮಾಧ್ಯಕ್ಷರಾದ ಮೋಸ್ಟ್ ರೆವ. ಡಾ. ಫ್ರಾನ್ಸಿಸ್ ಸೇರಾವೋ ಎಸ್.ಜೆ. ಹೇಳಿದರು.
ನಗರದ ಐತಿಹಾಸಿಕ ಹರಿಹರ ಆರೋಗ್ಯ ಮಾತೆ ಬಸಿಲಿಕಾದಲ್ಲಿ ನಡೆಯುತ್ತಿರುವ ವಾರ್ಷಿಕ ಮಹೋತ್ಸವದ ಅಂಗವಾಗಿ ಸೋಮವಾರ ನಡೆದ 9ನೇ ನವೇನ ದಿನದ ವಿಶೇಷ ಪೂಜೆ,
ಪವಿತ್ರ ಬಲಿಪೂಜೆಯಲ್ಲಿ ಪಾಲ್ಗೊಂಡು ಭಕ್ತರನ್ನುದ್ದೇಶಿಸಿ ಮಾತನಾಡಿದ ಅವರು, ದೇವರ ಮೇಲಿನ ಪ್ರೀತಿ ಕೇವಲ ಮಾತುಗಳು ಹಾಗೂ ಪ್ರಾರ್ಥನೆಗಳಿಗೆ ಸೀಮಿತವಾಗದೆ,
ನಮ್ಮ ನಡೆ-ನುಡಿಗಳಲ್ಲಿಯೂ ಪ್ರತಿಬಿಂಬಿಸಬೇಕು.
ಸಂಕಷ್ಟದಲ್ಲಿರುವವರ ಕಣ್ಣೀರನ್ನು ಒರೆಸುವುದು, ಹಸಿದವರಿಗೆ ಅನ್ನ ನೀಡುವುದು, ಬಡವರ ನೋವಿಗೆ ಸ್ಪಂದಿಸುವುದು ಹಾಗೂ ಅಸಹಾಯಕರಿಗೆ ನೆರವಾಗುವುದು
ಕ್ರೈಸ್ತ ಜೀವನದ ಪ್ರಮುಖ ಕರ್ತವ್ಯವಾಗಿದೆ. ಆರೋಗ್ಯ ಮಾತೆಯ ಆಶೀರ್ವಾದ ಕೋರಿ ಬಸಿಲಿಕಾಕ್ಕೆ ಆಗಮಿಸುವ ಪ್ರತಿಯೊಬ್ಬ ಭಕ್ತರೂ ತಮ್ಮ ಜೀವನದಲ್ಲಿ ಪ್ರೀತಿ,
ಕರುಣೆ, ಕ್ಷಮೆ ಹಾಗೂ ಸೇವಾ ಮನೋಭಾವವನ್ನು ಬೆಳೆಸಿಕೊಳ್ಳಬೇಕು.
ಸಮಾಜದಲ್ಲಿ ಯಾರೂ ಹಸಿವಿನಿಂದ ಅಥವಾ ನಿರ್ಲಕ್ಷ್ಯದಿಂದ ಬಳಲದಂತೆ ಪರಸ್ಪರ ಸಹಕಾರದೊಂದಿಗೆ ಬದುಕಬೇಕು.
ಸಂಕಷ್ಟದಲ್ಲಿರುವವರ ನೋವಿಗೆ ಸ್ಪಂದಿಸುವ ಮೂಲಕ ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಳ್ಳಬೇಕು ಎಂದು ಧರ್ಮಾಧ್ಯಕ್ಷರು ಕರೆ ನೀಡಿದರು.
ವಾರ್ಷಿಕ ಮಹೋತ್ಸವದ ಅಂಗವಾಗಿ ನಡೆದ ನವೇನ ಪ್ರಾರ್ಥನೆ ಹಾಗೂ ಪವಿತ್ರ ಬಲಿಪೂಜೆಯಲ್ಲಿ ಹರಿಹರ ಸೇರಿದಂತೆ ವಿವಿಧೆಡೆಯಿಂದ ಆಗಮಿಸಿದ್ದ
ಹೆಚ್ಚಿನ ಸಂಖ್ಯೆಯ ಭಕ್ತರು ಪಾಲ್ಗೊಂಡರು. ಕುಟುಂಬದ ಆರೋಗ್ಯ, ಶಾಂತಿ, ನೆಮ್ಮದಿ ಹಾಗೂ ಸಮಾಜದ ಒಳಿತಿಗಾಗಿ ಭಕ್ತರು ವಿಶೇಷ ಪ್ರಾರ್ಥನೆ ಸಲ್ಲಿಸಿ ಆರೋಗ್ಯ
ಮಾತೆಯ ಆಶೀರ್ವಾದ ಪಡೆದರು.
ಕಳೆದ ಒಂದು ವಾರದಿಂದ ನಡೆಯುತ್ತಿರುವ  ಬಸಿಲಿಕಾದ ವಾರ್ಷಿಕ ಮಹೋತ್ಸವದ ವಿವಿಧ ಧಾರ್ಮಿಕ ಕಾರ್ಯಕ್ರಮ ಗಳು ಭಕ್ತಿ ಮತ್ತು
ಸಂಭ್ರಮದಿಂದ ನಡೆಯುತ್ತಿದ್ದು, ಪ್ರತಿದಿನವೂ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಭಾಗವಹಿಸುತ್ತಿದ್ದಾರೆ.
ಈ ಸಮಯದಲ್ಲಿ ಬಸಿಲಿಕಾದ ಪ್ರಧಾನ ಗುರುಗಳಾದ ಫಾ. ಜಾರ್ಜ್ ಕೆ.ಎ.,ಸಹಾಯಕ ಗುರು ಅಂಥೋನಿ ರೋಸಾರಿಯೋ ಸೇರಿದಂತೆ ಅನೇಕ ಗುರುಗಳು,
ಧರ್ಮಭಗಿನಿಯರು ಹಾಗೂ ಭಕ್ತರು ಉಪಸ್ಥಿತರಿದ್ದರು.
Share: