ದಾವಣಗೆರೆ
ಡಿವಿಜಿ ಜಿ.ಪಂ ಗೆ ನೂತನ ಸಿಇಓ ಸಾಹಿತ್ಯ ಎಂ ಅಲದಕಟ್ಟಿ
ದಾವಣಗೆರೆ True Media Kannda ಜಿಲ್ಲಾ ಪಂಚಾಯಿತಿಯ ನೂತನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಾಹಿತ್ಯಾ ಎಂ. ಅಲದಕಟ್ಟಿ ಅವರು ಇಂದು ದಾವಣಗೆರೆ ಜಿಲ್ಲಾ ಪಂಚಾಯಿತಿ ಸಿಇಒ ಆಗಿ ಅಧಿಕಾರ ಸ್ವೀಕರಿಸಿದ್ದಾರೆ.
2022ನೇ ಬ್ಯಾಚ್ನ ಕರ್ನಾಟಕ ಕೇಡರ್ನ ಐಎಎಸ್ ಅಧಿಕಾರಿಯಾಗಿರುವ ಸಾಹಿತ್ಯಾ ಎಂ. ಅಲದಕಟ್ಟಿ ಅವರು, ಇಂದು ಅಧಿಕೃತವಾಗಿ ತಮ್ಮ ನೂತನ ಜವಾಬ್ದಾರಿಯನ್ನು ವಹಿಸಿಕೊಂಡಿದ್ದಾರೆ.
ಜಿಲ್ಲೆಯ ಗ್ರಾಮೀಣಾಭಿವೃದ್ಧಿ, ಸರ್ಕಾರಿ ಯೋಜನೆಗಳ ಅನುಷ್ಠಾನ, ಶಿಕ್ಷಣ, ಆರೋಗ್ಯ ಹಾಗೂ ಮೂಲಸೌಕರ್ಯ ಸೇರಿದಂತೆ ವಿವಿಧ ಕ್ಷೇತ್ರಗಳ ಅಭಿವೃದ್ಧಿಯಲ್ಲಿ ಅವರ ಪಾತ್ರ ಮಹತ್ವದ್ದಾಗಿದೆ.
ನೂತನ ಸಿಇಒ ಸಾಹಿತ್ಯಾ ಎಂ. ಅಲದಕಟ್ಟಿ ಅವರಿಗೆ True Media Kannada ವತಿಯಿಂದ ಹಾರ್ದಿಕ ಅಭಿನಂದನೆಗಳು.
