Friday, 16 Oct 2026
Breaking
ಕನ್ನಡ ಸಾಹಿತ್ಯದಲ್ಲಿ ವೈಚಾರಿಕ, ಸಾಂಸ್ಕೃತಿಕ ಹಾಗೂ ಸಾಮಾಜಿಕ ಮೌಲ್ಯಗಳ ಸಮನ್ವಯವಿದೆ ; ಡಾ. ಎ.ಬಿ. ರಾಮಚಂದ್ರಪ್ಪ ಶಿಕ್ಷಣ ಸಂಸ್ಥೆ, ರಿಯಲ್ ಎಸ್ಟೇಟ್ ವ್ಯವಹಾರವಿಲ್ಲ ; ಸೇವೆ ಮಾಡುವ ಉದ್ದೇಶದಿಂದ ಚುನಾವಣೆಗೆ ಸ್ಪರ್ಧೆ: ಶಶಿ ಹುಲಿಕುಂಟೆ ಮಠ ಹರಿಹರ ಗಣೇಶೋತ್ಸವದ ಇತಿಹಾಸದಲ್ಲಿ ಹೊಸ ಅಧ್ಯಾಯ ; ಐತಿಹಾಸಿಕ ರಾಜಭೀದಿ ಉತ್ಸವಕ್ಕೆ ಹರಿಹರದಲ್ಲಿ ಮುನ್ನುಡಿ ದಾವಣಗೆರೆ ‘ಆರೋಗ್ಯ ಸಂಜೀವಿ’ ಕಾಯ್ದೆಹೊಳ್ಳಿ ; ನಿಜದ ಬಿಸಿಲವೃತ್ತ” ಜಿಲ್ಲಾ ಮಟ್ಟದ ಶಟಲ್ ಬ್ಯಾಡ್ಮಿಂಟನ್‌ನಲ್ಲಿ ಇಂದಿರಾಗಾಂಧಿ ವಸತಿ ಶಾಲೆ ವಿದ್ಯಾರ್ಥಿಗಳ ಸಾಧನೆ ಸಾಲ ಮರುಪಾವತಿಸುವಂತೆ ಗ್ರಾಹಕರಿಗೆ ಮನವಿ ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ತಂಬಾಕು ಮಾರಾಟ: ದಾಳಿ,ದಂಡ ವಿಧಿಸಿದ ಅಧಿಕಾರಿಗಳು
Menu
ದಾವಣಗೆರೆ

ಗುಣಮಟ್ಟ ಶಿಕ್ಷಣ, ಸಂಘರ್ಷ, ಜನರ ಏಳಿಗೆ ನನ್ನ ಕನಸು: ಜಿ. ಬಿ. ವಿನಯ್ ಕುಮಾರ್

January 14, 2024 3 years ago 1 min read

ಚನ್ನಗಿರಿ 14/01/2024: ರಾಜಕಾರಣದ ಮುನ್ನಲೆಗೆ ಬಂದ ಮೇಲೆ ಆಕಾಂಕ್ಷಿಗಳು ನಮ್ಮ ಪಕ್ಷದಲ್ಲಿ ಹೆಚ್ಚಾಗಿದ್ದಾರೆ. ನನಗೆ ಯಾವುದೇ ಅಡೆ-ತಡೆ ಇಲ್ಲಾ, ನನಗೆ ಪಕ್ಷದ ಹಿರಿಯ ಮುಖಂಡರು ಮತ್ತು ಮತದಾದರರು ಸಹಕಾರ ಸದಾ ನನ್ನ ಮೇಲೆ ಇದೆ. ಶಿಕ್ಷಣ ಮತ್ತು ಹೊರಾಟ ನನಗೆ ಯಶಸ್ಸು ತಂದುಕೊಟ್ಟಿವೆ ಎಂದು ದಾವಣಗೆರೆ ಜಿಲ್ಲೆ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ವಿನಯ್ ಕುಮಾರ್ ಅಭಿಪ್ರಾಯ ಪಟ್ಟರು.

ಚನ್ನಗಿರಿ ತಾಲೂಕಿನ ಕಾಕನೂರು, ಸಂತೇಬೆನ್ನೂರು ಗ್ರಾಮಗಳಲ್ಲಿ ಪಾದಯಾತ್ರೆ ನಡೆಸಿ ನಂತರ ಸಂತೇಬೆನ್ನೂರು ಬಸ್ ನಿಲ್ದಾಣದಲ್ಲಿ ವಿನಯ್ ರವರ ಅಭಿಮಾನಿ ಬಳಗದಿಂದ ಆಯೋಜನೆ ಮಾಡಲಾಗಿದ್ದ
ಇನ್ಸೈಟ್ಸ್ ಸಂಸ್ಥೆಯ ದಶಮಾನೋತ್ಸವ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಶಿಕ್ಷಣ ಮೊದಲ ಆದ್ಯತೆ ನನ್ನದಾಗಿದೆ. ಕುಡಿಯಲು ನೀರು, ರೈತರಿಗೆ ನೀರಾವರಿ, ಯುವಕರಿಗೆ ಉದ್ಯೋಗಕ್ಕೆ ಆದ್ಯತೆ ನೀಡುತ್ತೇನೆ. ನಿಮ್ಮ ನಿರೀಕ್ಷೆಗಳನ್ನು ಈಡೇರಿಸಲು ಒಂದು ಅವಕಾಶ ನೀಡಿ ಎಂದು ಮನವಿ ಮಾಡಿದರು.

ನಮ್ಮ ಇನ್‌ಸೈಟ್ ತರಬೇತಿ ಸಂಸ್ಥೆಗೆ 10 ವರ್ಷ ತುಂಬಿರುವುದು 450 ಜನರ ಶ್ರಮದಿಂದ ಸಾರ್ಥಕ ಯಶಸ್ಸನ್ನು ತಂದಿದೆ. ದೇಶದಲ್ಲಿಯೇ 3ನೇ ಸ್ಥಾನ ಹೊಂದಿದೆ. ಕಾಶ್ಮಿರದಲ್ಲಿ ನಮ್ಮ ಸಂಸ್ಥೆ ಸ್ಥಾಪನೆಗೆ ನನ್ನ ಬಂಧು ಶರತ್ ಅವರ ಕೊಡುಗೆ ತುಂಬಾ ಇದೆ ಎಂದು ಶ್ಲಾಘಿಸಿದರು.

ಈ ವೇಳೆ ಇನ್ಸೈಟ್ಸ್ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕ ಎಸ್. ಶರತ್ ಕುಮಾರ್, ಸ್ವಾಮಿ, ಅಲಿ, ವಿಜಯ್, ಬಾಲು, ಇರ್ಫಾನ್, ರಘು ದೊಡ್ಮನಿ, ಗೌರೀಪುರ ನಾಗರಾಜ್, ನಯಾಜ್, ರುದ್ರೇಶ್, ಸದ್ದಾಂ, ವಿಜಯ್, ಮತ್ತಿತರಿದ್ದರು.

Share: