Saturday, 17 Oct 2026
Breaking
ಎಸ್‌ಎಸ್‌ಕೆ ಸಮಾಜದ ದಸರಾ ಆಚರಣೆ ಅತ್ಯಂತ ವಿಶೇಷ ವಾಗಿದ್ದು ಭಕ್ತಿ, ಶ್ರದ್ಧೆ ಇತರಿಗೆ ಮಾರ್ಗದರ್ಶಿ ; ಶಾಸಕ ಹರೀಶ್  ಕನ್ನಡ ಸಾಹಿತ್ಯದಲ್ಲಿ ವೈಚಾರಿಕ, ಸಾಂಸ್ಕೃತಿಕ ಹಾಗೂ ಸಾಮಾಜಿಕ ಮೌಲ್ಯಗಳ ಸಮನ್ವಯವಿದೆ ; ಡಾ. ಎ.ಬಿ. ರಾಮಚಂದ್ರಪ್ಪ ಶಿಕ್ಷಣ ಸಂಸ್ಥೆ, ರಿಯಲ್ ಎಸ್ಟೇಟ್ ವ್ಯವಹಾರವಿಲ್ಲ ; ಸೇವೆ ಮಾಡುವ ಉದ್ದೇಶದಿಂದ ಚುನಾವಣೆಗೆ ಸ್ಪರ್ಧೆ: ಶಶಿ ಹುಲಿಕುಂಟೆ ಮಠ ಹರಿಹರ ಗಣೇಶೋತ್ಸವದ ಇತಿಹಾಸದಲ್ಲಿ ಹೊಸ ಅಧ್ಯಾಯ ; ಐತಿಹಾಸಿಕ ರಾಜಭೀದಿ ಉತ್ಸವಕ್ಕೆ ಹರಿಹರದಲ್ಲಿ ಮುನ್ನುಡಿ ದಾವಣಗೆರೆ ‘ಆರೋಗ್ಯ ಸಂಜೀವಿ’ ಕಾಯ್ದೆಹೊಳ್ಳಿ ; ನಿಜದ ಬಿಸಿಲವೃತ್ತ” ಜಿಲ್ಲಾ ಮಟ್ಟದ ಶಟಲ್ ಬ್ಯಾಡ್ಮಿಂಟನ್‌ನಲ್ಲಿ ಇಂದಿರಾಗಾಂಧಿ ವಸತಿ ಶಾಲೆ ವಿದ್ಯಾರ್ಥಿಗಳ ಸಾಧನೆ ಸಾಲ ಮರುಪಾವತಿಸುವಂತೆ ಗ್ರಾಹಕರಿಗೆ ಮನವಿ
Menu
ದಾವಣಗೆರೆ

ಖಾಸಗಿ ಸಂಸ್ಥೆಗಳು ಸರ್ಕಾರಿ ಶಾಲೆ ಅಭಿವೃದ್ಧಿಗೆ ಧಾವಿಸಿದರೆ ದಾಖಲಾತಿ ಹೆಚ್ಚಾಗಲಿದೆ ; ಬಿಇಓ ಹನುಮಂತಪ್ಪ ಅಭಿಪ್ರಾಯ

January 14, 2024 3 years ago 1 min read
ಹರಿಹರ : ಖಾಸಗಿ ಸಂಸ್ಥೆಗಳು ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಧಾವಿಸಿದರೆ ಸರ್ಕಾರಿ ಶಾಲೆಯಲ್ಲಿ ದಾಖಲಾತಿ ಹೆಚ್ಚುತ್ತದೆ ಜೊತೆಗೆ ಶಾಲೆಗಳ ಉಳಿವಿಗೂ ಕಾರಣವಾಗುತ್ತದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಂ. ಹನುಮಂತಪ್ಪ ಅಭಿಪ್ರಾಯ ಪಟ್ಟರು.
   ತಾಲೂಕಿನ ಯಲವಟ್ಟಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಿದ್ದ ವಿವಿಧ ಕಲಿಕಾ ಸಾಮಗ್ರಿ ವಿತರಣಾ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದ ಅವರು, ದೊಡ್ಡ ದೊಡ್ಡ ನಗರಗಳಲ್ಲಿ ವಿವಿಧ ಸಂಘ ಸಂಸ್ಥೆಗಳು ಸರ್ಕಾರಿ ಶಾಲೆಗಳ ಉಳಿವಿಗಾಗಿ ಅವುಗಳ ಅಭಿವೃದ್ಧಿಗೆ ಕೈಜೋಡಿಸುತ್ತಿದ್ದಾರೆ ಅದರಂತೆ ಜಿಲ್ಲಾ ಮತ್ತು ತಾಲೂಕ ಮಟ್ಟದಲ್ಲಿಯೂ ಸಹ ಇಂತಹ ಕೆಲಸಗಳು ನಡೆಯಬೇಕಾಗಿದೆ ಎಂದು ಹೇಳಿದರು.
     ಕಾರ್ಯಕ್ರಮದಲ್ಲಿ ದಾವಣಗೆರೆ ರೋಟರಿ ಕ್ಲಬ್‌ನ ಸಾರ್ವಜನಿಕ ಸಂಪರ್ಕ ನಿರ್ದೇಶಕ ಆರ್‌.ಟಿ.ಮೃತ್ಯುಂಜಯ ಮಾತನಾಡಿ ಯುರೋಪಿನ್ಸ್ ಕಂಪನಿ ರವರು ಏಳು ಲಕ್ಷ ರೂ, ವೆಚ್ಚದಲ್ಲಿ ಯಲವಟ್ಟಿ ಮತ್ತು ಧೂಳೆಹೊಳೆ ಗ್ರಾಮದ ಸರ್ಕಾರಿ ಶಾಲೆಯಲ್ಲಿನ 312 ಮಕ್ಕಳಿಗೆ ಶಾಲಾ ಬ್ಯಾಗ್ ನೀರಿನ ಬಾಟಲ್ ಗಳನ್ನು ವಿತರಿಸಿದ್ದು ಜೊತೆಗೆ ಕಲಿಕೆಗೆ ಪೂರಕವಾದ 18 ಹಸಿರು ಬೋರ್ಡ್ಗಳನ್ನು ನೀಡಿರುವುದು ತುಂಬಾ ಸಂತೋಷದ ವಿಷಯ ಎಂದು ಸಂತಸ ವ್ಯಕ್ತಪಡಿಸಿದರು.
   ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ಶರಣಕುಮಾರ ಹೆಗಡೆ ಮಾತನಾಡಿ ಯುರೋಪಿನ್ಸ್ ಕಂಪನಿಯ ಸಿಎಸ್ಆರ್ ಮುಖ್ಯಸ್ಥರಾದ ರೇಖಾ ಮಂಡಲ್ ಹಾಗು ಶಿವಯೋಗಿ ಹಟ್ಟಿ ರವರು ರೋಟರಿ ಸಂಸ್ಥೆಯ ಮೂಲಕ ಮಕ್ಕಳಿಗೆ ಸಹಾಯ ಹಸ್ತ ಚಾಚಿರುವುದನ್ನು ನೋಡಿದಾಗ ಅವರಿಗೆ ಬಡ ಮಕ್ಕಳ ಮೇಲೆ ಇರುವ ಪ್ರೀತಿ, ಕಾಳಜಿ ತೋರುತ್ತದೆ ಎಂದರು. ಹರಿಹರದ ಎರಡು ಶಾಲೆಗಳ ಮನವಿಗೆ ಸ್ಪಂದಿಸಿದ ಕಂಪನಿಯ ಮುಖ್ಯಸ್ಥರಿಗೆ ಧನ್ಯವಾದಗಳನ್ನು ತಿಳಿಸಿದರು.
   ಈ ಸಂದರ್ಭದಲ್ಲಿ ದಾವಣಗೆರೆ ಕ್ಲಬ್ ನ ಅಧ್ಯಕ್ಷೇ  ಕುಸುಮಾ ವಿಜಯಾನಂದ್, ಕಾರ್ಯದರ್ಶಿಗ ಸುನಿತಾ ಮೃತ್ಯುಂಜಯ, ಅoದನೂರು ಆನಂದ ಕುಮಾರ್, ಜಿ.ಎಂ ಲೋಹಿತಾಸ್ವ, ಕ್ಲಸ್ಟರ್‌ನ ಸಿಆರ್ ಪಿ ಕರಡಿ ಪ್ರಕಾಶ್, ಮುಖ್ಕೋಪಾಧ್ಯಾಯರ ಸಂಘದ  ಅಧ್ಯಕ್ಷ ಕೆ.ಬೀರಪ್ಪ, ಶಿಕ್ಷಕರ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ರಾಮನಗೌಡ ಪ್ಯಾಟಿ, ಶಿಕ್ಷಕರ ಸಂಘದ ಖಜಾಂಚಿ ವಿನೋದಮ್ಮ, ಸದಸ್ಯ ಮಂಜಪ್ಪ ಬಿದರಿ, ಶಾಲೆ ಮುಖ್ಯ ಶಿಕ್ಷಕ ರವೀಂದ್ರಾಚಾರಿ, ಶಿಕ್ಷಕರಗಳಾದ ರಾಘವೇಂದ್ರ, ಪರಶುರಾಮ,ವಿಜಯ್ ಕುಮಾರ್ , ನಾಗರಾಜ್, ಮಂಜುಳಾ ಜೋಶಿ , ಅನುರಾಧ ಗೌಡ  ಹಾಗೂ ಎಸ್ ಡಿ ಎಮ್ ಸಿ ಪದಾಧಿಕಾರಿಗಳು ಮಕ್ಕಳು ಹಾಜರಿದ್ದರು.
Share: