Friday, 16 Oct 2026
Breaking
ಕನ್ನಡ ಸಾಹಿತ್ಯದಲ್ಲಿ ವೈಚಾರಿಕ, ಸಾಂಸ್ಕೃತಿಕ ಹಾಗೂ ಸಾಮಾಜಿಕ ಮೌಲ್ಯಗಳ ಸಮನ್ವಯವಿದೆ ; ಡಾ. ಎ.ಬಿ. ರಾಮಚಂದ್ರಪ್ಪ ಶಿಕ್ಷಣ ಸಂಸ್ಥೆ, ರಿಯಲ್ ಎಸ್ಟೇಟ್ ವ್ಯವಹಾರವಿಲ್ಲ ; ಸೇವೆ ಮಾಡುವ ಉದ್ದೇಶದಿಂದ ಚುನಾವಣೆಗೆ ಸ್ಪರ್ಧೆ: ಶಶಿ ಹುಲಿಕುಂಟೆ ಮಠ ಹರಿಹರ ಗಣೇಶೋತ್ಸವದ ಇತಿಹಾಸದಲ್ಲಿ ಹೊಸ ಅಧ್ಯಾಯ ; ಐತಿಹಾಸಿಕ ರಾಜಭೀದಿ ಉತ್ಸವಕ್ಕೆ ಹರಿಹರದಲ್ಲಿ ಮುನ್ನುಡಿ ದಾವಣಗೆರೆ ‘ಆರೋಗ್ಯ ಸಂಜೀವಿ’ ಕಾಯ್ದೆಹೊಳ್ಳಿ ; ನಿಜದ ಬಿಸಿಲವೃತ್ತ” ಜಿಲ್ಲಾ ಮಟ್ಟದ ಶಟಲ್ ಬ್ಯಾಡ್ಮಿಂಟನ್‌ನಲ್ಲಿ ಇಂದಿರಾಗಾಂಧಿ ವಸತಿ ಶಾಲೆ ವಿದ್ಯಾರ್ಥಿಗಳ ಸಾಧನೆ ಸಾಲ ಮರುಪಾವತಿಸುವಂತೆ ಗ್ರಾಹಕರಿಗೆ ಮನವಿ ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ತಂಬಾಕು ಮಾರಾಟ: ದಾಳಿ,ದಂಡ ವಿಧಿಸಿದ ಅಧಿಕಾರಿಗಳು
Menu
ದಾವಣಗೆರೆ

ಜಗತ್ತಿಗೆ ಹಿಂದೂ ಧರ್ಮದ ಮಹತ್ವ ತೋರಿಸಿಕೊಟ್ಟವರು ವಿವೇಕಾನಂದರು ; ಪ್ರತೀಪ್ ತೇಲ್ಕರ್

January 14, 2024 3 years ago 1 min read
ಹರಿಹರ : ಸ್ವಾಮಿ ವಿವೇಕಾನಂದರು ಜಗತ್ತಿಗೆ ಹಿಂದೂ ಧರ್ಮದ ಮಹತ್ವವನ್ನು ತೋರಿಸಿಕೊಟ್ಟ ಮಹಾನ್ ಸಾಧಕರು ಎಂದು ಪ್ರತೀಪ್ ತೇಲ್ಕರ್ ಹೇಳಿದರು.
    ನಗರದ ಮರಾಠ ಬೀದಿಯಲ್ಲಿನ ಜಿಲ್ಲಾ ಕರ್ನಾಟಕ ಕ್ಷತ್ರಿಯ ಮರಾಠ ಪರಿಷತ್ ಕಛೇರಿಯಲ್ಲಿ ರಾಜಮಾತಾ ಜೀಜಾಬಾಯಿ ಹಾಗೂ ಸ್ವಾಮಿ ವಿವೇಕಾನಂದರ ಜನ್ಮ ಜನ್ಮದಿನೋತ್ಸವದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು. ಭಾರತದಲ್ಲಿ ಜನಿಸಿದ ಅತ್ಯಂತ ಪ್ರಸಿದ್ಧ ತತ್ವಜ್ಞಾನಿಗಳಲ್ಲಿ ಸ್ವಾಮಿ ವಿವೇಕಾನಂದರು ಸಹ ಒಬ್ಬರು. ಹಿಂದೂ ಧರ್ಮದ   ಮಹತ್ವವನ್ನು ಜಗತ್ತಿಗೆ ತೋರಿಸಿ ಕೊಟ್ಟ ಮಹಾ ಸಾಧಕರು. ಯುವ ಜನತೆಯ ಮೇಲೆ ಅಪಾರ ನಂಬಿಕೆ ಇಟ್ಟಿದ್ದರು. ಯುವಶಕ್ತಿಗೆ ಏಳು ಎದ್ದೇಳು ಗುರಿ ಮುಟ್ಟುವ ತನಕ ನಿಲ್ಲದಿರಿ ಎಂಬ ಸ್ಪೂರ್ತಿಯ ಸಂದೇಶವನ್ನು ಸಾರಿದರು ಎಂದರು.
    ಅವರು ಬದುಕಿದ ಅಲ್ಪಕಾಲದಲ್ಲಿಯೇ ವಿಶ್ವ ವಿಖ್ಯಾತ ಪಡೆದ  ಮಹಾನ್ ಸಂತ. ಚಿಕಾಗೋ ನಗರದಲ್ಲಿ ನೆಡೆದ ವಿಶ್ವ ಧರ್ಮ ಸಮ್ಮೇಳನದಲ್ಲಿ ಹಿಂದೂ ಧರ್ಮದ ಬಗ್ಗೆ ಅವರು ಮಾತನಾಡಿದ ನಂತರದ ದಿನದಲ್ಲಿ ಅವರು ಹೆಚ್ಚು ಬೆಳಕಿಗೆ ಬಂದರು, ಭಾರತದ ಯುವಜನತೆಗೆ ಆದರ್ಶ ಪ್ರಾಯರಾದರು. ಹಾಗಾಗಿ ಅವರ ಜನ್ಮ ದಿನವನ್ನು ರಾಷ್ಟ್ರೀಯ ಯುವ ದಿನ ಆಚರಣೆ  ಆಚರಿಸಲಾಗುತ್ತದೆ ಎಂದು ತಿಳಿಸಿದರು.
    ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ನಗರಸಭಾ ಮಾಜಿ ಅಧ್ಯಕ್ಷೆ  ಆಶಾ ಜಿ.ಎಚ್ ಮರಿಯೋಜಿರಾವ್ ಮಾತನಾಡಿ, ಹಿಂದವೀ ಸ್ವರಾಜ್ಯದ ಸ್ಥಾಪನೆಯ ಹಾದಿಯಲ್ಲಿ ಅಡ್ಡ ಬರುವ ಹೇಡಿ ಗಳ ಜೊತೆ ಹೋರಾಡುವ ಧೈರ್ಯವು ಪುತ್ರ ಶಿವಾಜಿಗೆ ಸಿಕ್ಕಿದ್ದು ರಾಜಮಾತಾ ಜೀಜಾಬಾಯಿ ಬಿತ್ತಿದ ಶೌರ್ಯದ ಸಂಸ್ಕಾರದ ಕಾರಣದಿಂದಾಗಿ ಎಂದು ಹೇಲಿದರು.
   ಜಿಲ್ಲಾ ಕರ್ನಾಟಕ ಕ್ಷತ್ರಿಯ ಮರಾಠ ಸಮಾಜದ ಅಧ್ಯಕ್ಷ ಜಿ.ಹೆಚ್ ಮರಿಯೋಜಿರಾವ್ ಮಾತನಾಡಿ, ರಾಜಮಾತಾ ಜೀಜಾಬಾಯಿ ಅವರು ಛತ್ರಪತಿ ಶಿವಾಜಿ ಮಹಾರಾಜರಿಗೆ ಬಾಲ್ಯದಲ್ಲಿಯ ಹಿಂದೂ ಧರ್ಮ ಸ್ಥಾಪನೆಯ ಕಿಚ್ಚು ಹಚ್ಚಿ , ಹುರುಪು ತುಂಬಿಸಿದರು.ಇವರ ಹಾಗೆಯೇ ಬಾಲ್ಯದಲ್ಲಿಯೇ ಮಕ್ಕಳಿಗೆ ಒಳ್ಳೆ ಸಂಸ್ಕಾರ ಕೊಟ್ಟರೆ ಭವಿಷ್ಯದಲ್ಲಿ ಒಳ್ಳೆಯ ಫಲ ದೊರಕುತ್ತೆ .ಆದ್ದರಿಂದ ರಾಜಮಾತೆ ಜೀಜಾಬಾಯಿ ರವರ  ಆದರ್ಶಗಳನ್ನು  ಎಲ್ಲಾ ತಾಯಂದಿರು ಪಾಲಿಸಬೇಕೆಂದು ಕೋರಿದರು .
   ಇದೇ ವೇಳೆಯಲ್ಲಿ ಉಪನ್ಯಾಸ ನೀಡಿದ ಪ್ರದೀಪ್ ತೇಲ್ಕರ್ ರನ್ನು ಸನ್ಮಾನಿಸಿ ಗೌರವಿಸಲಾಯಿತು.ಈ ಸಮಯದಲ್ಲಿ ಹಿಂದುಳಿದ ವರ್ಗಗಳ ಸಮಾನ ಮನಸ್ಕರ ವೇದಿಕೆಯ ಗೌರವಾಧ್ಯಕ್ಷ  ಹೆಚ್.ಕೆ ಕೊಟ್ರಪ್ಪ, ಕೆ.ಬಿ ರಾಜಶೇಖರ್, ಆಂಜನೇಯ, ಟೇಕೋಜಿ ರಾವ್, ಹರೀಶ್ ಸಾವಂತ್, ಹರಿಜಾದುಗಾರ, ಇಂದ್ರಾಣಿ ಶಿಂದೆ, ಲತಾ ಪವಾರ್ ಹಾಗೂ ಮರಾಠ ಸಮಾಜದ ಮಹಿಳೆಯರು ಹಾಗೂ ಕೆ.ಕೆ.ಎಂ.ಪಿ ಪದಾಧಿಕಾರಿಗಳು ಉಪಸ್ಥಿತರಿದ್ದರು.
Share: