ದಾವಣಗೆರೆ
ಸರ್ಕಾರಿ ನೌಕರರ ನ್ಯಾಯಯುತ ಬೇಡಿಕೆ ಈಡೇರಿಕೆಗೆ ಸರ್ಕಾರ ಮಟ್ಟದಲ್ಲಿ ಒತ್ತಾಯಿಸುತ್ತೇನೆ ; ಶಾಸಕ ಬಿ.ಪಿ.ಹರೀಶ್
ಹರಿಹರ : ನ್ಯಾಯಯುತವಾದ ಸರ್ಕಾರಿ ನೌಕರರ ಬೇಡಿಕೆಗಳನ್ನು ಸರ್ಕಾರ ಕೂಡಲೇ ಈಡೇರಿಕೆಗೆ ಸರ್ಕಾರದ ಮಟ್ಟದಲ್ಲಿ ಒತ್ತಾಯ ಮಾಡುತ್ತೇನೆ ಎಂದು ಶಾಸಕ ಬಿ.ಪಿ.ಹರೀಶ್ ಸರ್ಕಾರಿ ನೌಕರರ ಸಂಘದ ಪದಾಧಿಕಾರಿಗಳಿಗೆ ಭರವಸೆ ನೀಡಿದರು.
ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಬೆಂಗಳೂರು ರವರ ಸೂಚನೆಯ ಮೇರೆಗೆ ಹರಿಹರ ತಾಲೂಕು ಶಾಖೆ ವತಿಯಿಂದ ಬೇಡಿಕೆಗಳನ್ನು ತಕ್ಷಣದಿಂದ ಈಡೇರಿಸಲು ಒತ್ತಾಯಿಸಿ ಸರ್ಕಾರದ ಮೇಲೆ ಒತ್ತಡ ತರುವಂತೆ ಕೋರಿ ಹರಿಹರ ತಾಲೂಕು ಶಾಖೆ ಅಧ್ಯಕ್ಷ ಎ.ಕೆ.ಭೂಮೇಶ್ ಎ.ಕೆ. ನೇತೃತ್ವದಲ್ಲಿ ಶಾಸಕರಿಗೆ ನೀಡಿದ ಮನವಿ ಪತ್ರ ಸ್ವೀಕರಿಸಿ ಶಾಸಕರು ಮಾತನಾಡಿ ನೌಕರರ ಬೇಡಿಕೆಗಳು ನ್ಯಾಯಯುತವಾಗಿವೆ. ನೌಕರರ ಬೇಡಿಕೆಗಳ ಬಗ್ಗೆ ಮಾನ್ಯ ಮುಖ್ಯಮಂತ್ರಿಗಳಿಗೆ ಶೀಘ್ರದಲ್ಲಿ ಪತ್ರ ಬರೆದು ಒತ್ತಡ ತರುತ್ತೇನೆ.
ಕಳೆದ ವಿಧಾನಸಭೆ ಚುನಾವಣೆ ಪೂರ್ವದಲ್ಲಿ ಕಾಂಗ್ರೆಸ್ ಪಕ್ಷ ತನ್ನ ಪ್ರಣಾಳಿಕೆಯಲ್ಲಿ ಸರ್ಕಾರಿ ನೌಕರರ ಎಲ್ಲಾ ಬೇಡಿಕೆಗಳನ್ನು ಈಡೇರಿಸುವುದಾಗಿ ಮತ್ತು ಹಳೆ ಪಿಂಚಣಿ ಪದ್ಧತಿಯನ್ನು ಜಾರಿಗೆ ತರುವುದಾಗಿ ತಿಳಿಸಿದ್ದರು ಅದರಂತೆ ನೌಕರರ ಬೇಡಿಕೆಗಳನ್ನು ಈಡೇರಿಸುವತ್ತ ಕೂಡಲೇ ಸರ್ಕಾರ ಗಮನಹರಿಸಬೇಕು ಎಂದು ನಾನು ಸಹ ಒತ್ತಾಯ ಮಾಡಿ ನಿಮ್ಮ ಬೇಡಿಕೆ ಆದಷ್ಟು ಬೇಗನೆ ಈಡೇರುವಂತಾಗಲಿ ಎಂದು ಹೇಳಿದರು.
ಬೇಡಿಕೆಗಳಾದ ರಾಜ್ಯ ಕರ್ನಾಟಕ ರಾಜ್ಯ ಸರ್ಕಾರಿ ನೌಕರರಿಗೆ 7 ನೇ ವೇತನ ಆಯೋಗದ ವರದಿ ಪಡೆದು ಜಾರಿಗೊಳಿಸುವುದು. ಎನ್.ಪಿ.ಎಸ್ ಯೋಜನೆಯನ್ನು ರದ್ದುಪಡಿಸಿ ಹಳೇ ಪಿಂಚಣಿ ಯೋಜನೆ ಜಾರಿಗೊಳಿಸುವುದು.ಆರೋಗ್ಯ ಸಂಜೀವಿನಿ ಯೋಜನೆ ಜಾರಿಗೊಳಿಸುವುದು. ಸೇರಿದಂತೆ ಹಲವು ಬೇಡಿಕೆಗಳ ಬಗ್ಗೆ ಮುಂಬರುವ ಅಧಿವೇಶನದಲ್ಲಿ ನೌಕರರ ಬೇಡಿಕೆಗಳ ಕುರಿತು ವಿಧಾನಸಭಾ ಅಧಿವೇಶನದಲ್ಲಿ ಪ್ರಸ್ತಾಪಿಸುವುದಾಗಿ ತಿಳಿಸಿ ಮುಂದಿನ ದಿನಗಳಲ್ಲಿ ನೌಕರರ ಬೇಡಿಕೆಗಳು ಈಡೇರಿರುವವರೆಗೂ ನಿಮ್ಮ ಪರವಾಗಿರುತ್ತೇನೆ ಎಂದು ತಿಳಿಸಿದರು.
ಈ ಸಮಯದಲ್ಲಿ ಸಂಘದ ಅಧ್ಯಕ್ಷ ಎ.ಕೆ.ಭೂಮೇಶ್, ಗೌರವಾಧ್ಯಕ್ಷ ಎಂ.ಉಮ್ಮಣ್ಣ, ಖಜಾಂಚಿ ರೇವಣಸಿದ್ದಪ್ಪ ಅಂಗಡಿ, ಕಾರ್ಯದರ್ಶಿ ಎಂ.ಬಿ.ಮಂಜುನಾಥ್,ಪ್ರಾಥಮಿಕ ಶಾಲಾ ಶಿಕ್ಷಕರ ಶಿಕ್ಷಕರ ಸಂಘದ ಅಧ್ಯಕ್ಷ ಎಂ.ಚಂದ್ರಪ್ಪ, ಕಾರ್ಯದರ್ಶಿ ಶರಣ ಕುಮಾರ್ ಹೆಗಡೆ, ಬಿದರಿ ಮಂಜಪ್ಪ, ಪ್ರೌಢಶಾಲಾ ಶಿಕ್ಷಕರ ಸಂಘದ ರಾಜ್ಯ ಉಪಾಧ್ಯಕ್ಷ ಡಿ.ಎಂ. ಮಂಜುನಾಥ ಸ್ವಾಮಿ,ತಾಲೂಕು ಅಧ್ಯಕ್ಷ ಈಶಪ್ಪ ಬೂದಿಹಾಳ, ಕಾರ್ಯದರ್ಶಿ ಧನ್ಯಕುಮಾರ್, ನೌಕರರ ಸಂಘದ ಉಪಾಧ್ಯಕ್ಷ ವೈ.ಪಿ.ಸಾಕಮ್ಮ, ಪ್ರಕಾಶ್, ಹರೀಶ್ ನೋಟಗಾರ್, ಬಿ ಶಿವಮೂರ್ತಿ,ಶೋಭಾ ನಾರಾಯಣ ರೆಡ್ಡಿ, ಮಾಜಿ ಅಧ್ಯಕ್ಷ ಎಂ.ವಿ. ಹೊರಕೇರಿ,ಸಂಘದ ನಿರ್ದೇಶಕರಾದ ಡಿ.ಟಿ. ಮಂಜಪ್ಪ, ಬಿ.ಎಚ್.ಶಿವಕುಮಾರ್, ಬಿ.ಎಸ್.ಜಗದೀಶ್,ಮುಸ್ತಾಕ್ ಅಹಮದ್, ರೂಪ ಕಾಮತ್, ವಿ.ಬಿ.ಕೊಟ್ರೇಶಪ್ಪ ಈರಮ್ಮ ಎಲಿ ಗಾರ್ , ನಿಂಗಪ್ಪ , ಆದರ್ಶ್, ಎಸ್ ಮಂಜುನಾಥ್, ನೌಕರರ ಸಂಘದ ಪದಾಧಿಕಾರಿಗಳು,ನಿರ್ದೇಶಕರು ಹಾಗು ವಿವಿಧ ವೃಂದ ಸಂಘಗಳ ಪದಾಧಿಕಾರಿಗಳು ಹಾಗೂ ನೌಕರರು ಹಾಜರಿದ್ದರು
