ಹರಿಹರ
ವಸತಿ ರಹಿತರಿಗೆ ಸೂರು ಕಲ್ಪಿಸುಲು ಸರ್ವಪ್ರಯತ್ನ ಮಾಡುತ್ತೇವೆ ; ಆಶ್ರಯ ಸಮಿತಿ ಸದಸ್ಯ ಡಿ.ಎಸ್.ಹನುಮಂತಪ್ಪ
ಹರಿಹರ : ನಗರದಲ್ಲಿನ ವಸತಿ ರಹಿತ ನಿವಾಸಿಗಳಿಗೆ ಸೂರು ಕಲ್ಪಿಸಲು ಸರ್ವ ಪ್ರಯತ್ನವನ್ನು ಮಾಡುಲಾಗುವುದು ಎಂದು ಆಶ್ರಯ ಸಮಿತಿ ನೂತನ ಸದಸ್ಯ ಡಿ.ಎಸ್.ಹನುಮಂತಪ್ಪ ಆಶಯ ವ್ಯಕ್ತಪಡಿಸಿದರು.
ಶುಕ್ರವಾರ ನಗರಸಭೆಯ ಕಚೇರಿಯಲ್ಲಿ ಪೌರಾಯುಕ್ತ ಐ. ಬಸವರಾಜ್ ರವರಿಂದ ನೂತನವಾಗಿ ನಾಮನಿರ್ದೇಶನಗೊಂಡ ಆದೇಶದ ಪ್ರತಿಯನ್ನು ಸ್ವೀಕರಿಸಿ ಮಾತನಾಡಿದ ಅವರು, ಕಳೆದ 15 ವರ್ಷಗಳಿಂದ ನಮ್ಮ ನಾಯಕ ದಿವಂಗತ ಡಾ.ವೈ. ನಾಗಪ್ಪನವರ ಕಾಲದಲ್ಲಿ ಆಶ್ರಯ ಸಮಿತಿಯಿಂದ ನಗರದ ನಾಗರಿಕರಿಗೆ ವಸತಿ ಸೌಲಭ್ಯ ನೀಡಲಾಗಿತ್ತು.
ಪ್ರಸ್ತುತ ನಮ್ಮದೇ ಸರ್ಕಾರ ರಾಜ್ಯದಲ್ಲಿ ಆಡಳಿತ ಮಾಡುತ್ತಿದೆ ನಗರದ ಬಹಳಷ್ಟು ಬಡ ಜನತೆ ವಸತಿ ಸೌಲಭ್ಯ ವಂಚಿತರಾಗಿದ್ದಾರೆ ಅವರೆಲ್ಲರಿಗೂ ನೀಡಲು ಸಾಧ್ಯವಾಗುತ್ತದೋ, ಇಲ್ಲವೋ ಆದರೆ ಹೆಚ್ಚಿನ ಮಟ್ಟದಲ್ಲಿ ವಸತಿ ಸೌಲಭ್ಯಕ್ಕಾಗಿ ಸರ್ಕಾರದೊಂದಿಗೆ ನಮ್ಮ ನಾಯಕರಾದ ನಂದಿಗಾವಿ ಶ್ರೀನಿವಾಸ್ ಮಾಜಿ ಶಾಸಕ ಎಸ್. ರಾಮಪ್ಪ ಮುಂತಾದವರ ಮಾರ್ಗದರ್ಶನದಲ್ಲಿ ಪ್ರಯತ್ನ ಮಾಡಲಾಗುವುದು ಎಂದು ಹೇಳಿದರು.
ಇದೆ ವೇಳೆ ಪೌರಾಯುಕ್ತ ಬಸವರಾಜ್ ಮಾತನಾಡಿ ಸರ್ಕಾರ ಈಗ ತಾನೇ ಆಶ್ರಯ ಸಮಿತಿ ಆದೇಶ ಹೊರಡಿಸಿದೆ ಶಾಸಕರಾದ ಬಿ.ಪಿ.ಹರೀಶ್ ರವರು ಸಮಿತಿಯ ಅಧ್ಯಕ್ಷರಾಗಿರುತ್ತಾರೆ. ಸದಸ್ಯರುಗಳಾಗಿ ತಹಸೀಲ್ದಾರ್ ಮತ್ತು ನಾನು ಇರಲಿದ್ದೇವೆ. ಅದರಂತೆ ನಾಮನಿರ್ದೇಶಕ ಸದಸ್ಯರಾಗಿ ಹಿಂದುಳಿದ ವರ್ಗದಿಂದ ಶಂಭುಸಾ ಮೆಹರ್ವಾಡೆ,ಅಲ್ಪಸಂಖ್ಯಾತ ವರ್ಗದ ಕೆ. ಸರ್ಪರಾಜ್ ಅಹಮದ್, ಪರಿಶಿಷ್ಟ ಜಾತಿ ಮಹಿಳೆ ವಿಭಾಗದಿಂದ ವೈ.ಭಾಗ್ಯದೇವಿ ಮತ್ತು ಸಾಮಾನ್ಯ ವರ್ಗದಿಂದ ಡಿ.ಎಸ್.ಹನುಮಂತಪ್ಪ ಇರುತ್ತಾರೆ.
ಮುಂಬರುವ ದಿನಗಳಲ್ಲಿ ಸಾಧ್ಯವಾದಷ್ಟು ಬೇಗನೆ ಶಾಸಕರ ಅನುಮತಿ ಪಡೆದು ಸಭೆಯನ್ನು ಕರೆಯಲಾಗುವುದು ಸಭೆಯಲ್ಲಿ ಯಾವ ಯಾವ ತೀರ್ಮಾನಗಳಾಗುತ್ತವೆಯೋ ಅದನ್ನು ಸರ್ಕಾರ ಮಟ್ಟಕ್ಕೆ ತಲುಪಿಸಿ ಸಾಧ್ಯವಾದಷ್ಟು ವಸತಿ ರಹಿತರಿಗೆ ವಸತಿ ಕಲ್ಪಿಸುವ ಕೆಲಸವನ್ನು ಮಾಡಲಾಗುವುದು ಎಂದು ತಿಳಿಸಿದರು.
ಈ ಸಮಯದಲ್ಲಿ ನಗರಸಭೆ ಸದಸ್ಯ ಎಂ.ಎಸ್.ಬಾಬುಲಾಲ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಲ್.ಬಿ.ಹನುಮಂತಪ್ಪ, ಕಾಂಗ್ರೆಸ್ ಮುಖಂಡರುಗಳಾದ ಕಿರಣ್ ಭೂತೆ,ತಿಪ್ಪೇಶ್, ಎಂ.ಎಸ್.ಆನಂದ್ ಕುಮಾರ್, ಅಬ್ದುಲ್ ಖುದ್ದೂಸ್, ಅಬೀಬ್ ರಹಮಾನ್, ಎಚ್.ಈ. ಗಣೇಶ್, ಎಂ.ಎಸ್.ಕೃಷ್ಣಮೂರ್ತಿ ಸೇರಿದಂತೆ ನಗರಸಭೆ ಸಿಬ್ಬಂದಿ ವರ್ಗದವರು ಹಾಗೂ ಕಾಂಗ್ರೆಸ್ ನ ಹಲವು ಮುಖಂಡರುಗಳು ಉಪಸ್ಥಿತರಿದ್ದರು.
