Friday, 16 Oct 2026
Breaking
ಕನ್ನಡ ಸಾಹಿತ್ಯದಲ್ಲಿ ವೈಚಾರಿಕ, ಸಾಂಸ್ಕೃತಿಕ ಹಾಗೂ ಸಾಮಾಜಿಕ ಮೌಲ್ಯಗಳ ಸಮನ್ವಯವಿದೆ ; ಡಾ. ಎ.ಬಿ. ರಾಮಚಂದ್ರಪ್ಪ ಶಿಕ್ಷಣ ಸಂಸ್ಥೆ, ರಿಯಲ್ ಎಸ್ಟೇಟ್ ವ್ಯವಹಾರವಿಲ್ಲ ; ಸೇವೆ ಮಾಡುವ ಉದ್ದೇಶದಿಂದ ಚುನಾವಣೆಗೆ ಸ್ಪರ್ಧೆ: ಶಶಿ ಹುಲಿಕುಂಟೆ ಮಠ ಹರಿಹರ ಗಣೇಶೋತ್ಸವದ ಇತಿಹಾಸದಲ್ಲಿ ಹೊಸ ಅಧ್ಯಾಯ ; ಐತಿಹಾಸಿಕ ರಾಜಭೀದಿ ಉತ್ಸವಕ್ಕೆ ಹರಿಹರದಲ್ಲಿ ಮುನ್ನುಡಿ ದಾವಣಗೆರೆ ‘ಆರೋಗ್ಯ ಸಂಜೀವಿ’ ಕಾಯ್ದೆಹೊಳ್ಳಿ ; ನಿಜದ ಬಿಸಿಲವೃತ್ತ” ಜಿಲ್ಲಾ ಮಟ್ಟದ ಶಟಲ್ ಬ್ಯಾಡ್ಮಿಂಟನ್‌ನಲ್ಲಿ ಇಂದಿರಾಗಾಂಧಿ ವಸತಿ ಶಾಲೆ ವಿದ್ಯಾರ್ಥಿಗಳ ಸಾಧನೆ ಸಾಲ ಮರುಪಾವತಿಸುವಂತೆ ಗ್ರಾಹಕರಿಗೆ ಮನವಿ ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ತಂಬಾಕು ಮಾರಾಟ: ದಾಳಿ,ದಂಡ ವಿಧಿಸಿದ ಅಧಿಕಾರಿಗಳು
Menu
Harihar News

ರೈಲ್ವೆ ನೌಕರರ ಆರ್ಥಿಕ ಭದ್ರತೆಗಾಗಿ ಹಳೆ ಪಿಂಚಣಿ ಪದ್ಧತಿ ಜಾರಿಗೆ ಆಗ್ರಹಿಸಿ ಉಪವಾಸ ಸತ್ಯಾಗ್ರಹ

January 11, 2024 3 years ago 1 min read
ಹರಿಹರ : ರೈಲ್ವೆ ನೌಕರರ ಆರ್ಥಿಕ ಭದ್ರತೆಗಾಗಿ ಹಳೆ ಪೆನ್ಷನ್ ಪದ್ಧತಿ (ಒಪಿಎಸ್) ಜಾರಿಗೆ ಆಗ್ರಹಿಸಿ ರೈಲ್ವೆ ಮಜ್ದೂರ್ ಯೂನಿಯನ್ ನೇತೃತ್ವದಲ್ಲಿ ರೈಲ್ವೆ ನೌಕರರು ನಗರದ ರೈಲ್ವೆ ನಿಲ್ದಾಣದ ಬಳಿ ಗುರುವಾರ ಉಪವಾಸ ಸತ್ಯಾಗ್ರಹ ನಡೆಸಿದರು.
      ಸತ್ಯಾಗ್ರಹದ ನೇತೃತ್ವ ವಹಿಸಿದ್ದ ರೈಲ್ವೆ ನೌಕರರ ಹರಿಹರ ಘಟಕ ಕಾರ್ಯದರ್ಶಿ ಸಿ.ಎನ್.ಅಣ್ಣಪ್ಪ ಮಾತನಾಡಿ, ಸ್ವಾತಂತ್ರ ಪಡೆದಾಗಿ ನಿಂದ ನಿವೃತ್ತ ರೈಲ್ವೆ ನೌಕರರಿಗೆ ಪೆನ್ಷನ್ ನೀಡುವ ಪದ್ಧತಿ ಇದೆ. ಆದರೆ ಜ.1 2004ರಿಂದ ನೇಮಕಾತಿ ಆದ ನೌಕರರಿಗೆ ಈ ಸೌಲಭ್ಯ ವನ್ನು ರದ್ದು ಮಾಡಲಾಗಿದೆ.
    30 ರಿಂದ 40 ವರ್ಷ ಇಲಾಖೆಯಲ್ಲಿ ಕೆಲಸ ಮಾಡಿ ನಿವೃತ್ತ ರಾಗುವ ನೌಕರರಿಗೆ ಇದರಿಂದಾಗಿ ಆರ್ಥಿಕ ಭದ್ರತೆ ಇಲ್ಲದಂತಾಗಿದೆ. ಆ.8ರಿಂದ 11ರವರೆಗೆ ದೇಶದಾದ್ಯಂತ ನೌಕರರು ಸರದಿ ಸತ್ಯಾಗ್ರಹ ಮಾಡುತ್ತಿದ್ದಾರೆ. ಕೇಂದ್ರ ಸರ್ಕಾರ ಹಳೆ ಪೆನ್ಷನ್ ಪದ್ಧತಿ ಜಾರಿ ಮಾಡದಿದ್ದರೆ ಮುಂಬರುವ ದಿನಗಳಲ್ಲಿ ರಿಂದ ರೈಲು ಸಂಚಾರ ತಡೆಯುವ ಪ್ರತಿಭಟನೆ ಹಮ್ಮಿಕೊಳ್ಳಲಿದೆ ಎಂದು ಹೇಳಿದರು.
    ಇದೇ ವೇಳೆ ಎಐಟಿಯುಸಿ ತಾಲ್ಲೂಕು ಘಟಕ ಅಧ್ಯಕ್ಷ ಎಚ್.ಕೆ. ಕೊಟ್ರಪ್ಪ ಮಾತನಾಡಿ, ಭಾರತೀಯ ರೈಲ್ವೆ ಇಲಾಖೆ ಇಡೀ ಏಶಿಯಾ ಖಂಡದಲ್ಲೆ ಬೃಹತ್ ಸಂಚಾರಿ ವ್ಯವಸ್ಥೆಯಾಗಿ ಪ್ರಸಿದ್ಧಿ ಪಡೆದಿದೆ. ಆಹಾರ, ಇಂಧನ, ಪ್ರಯಾಣಿಕರ ಸಾಗಣೆಯ ಮಹತ್ವದ ಜವಾಬ್ದಾರಿಯನ್ನು ನೌಕರರು ನಿರ್ವಹಿಸುತ್ತಿದ್ದಾರೆ.
     ಹೆಚ್ಚಿನ ಒತ್ತಡದಲ್ಲಿ ಕರ್ತವ್ಯ ನಿರ್ವಹಣೆ ಮಾಡುವ, ದೇಶದ ಪ್ರಗತಿಗೆ ಹೆಗಲು ಕೊಟ್ಟು ದುಡಿಯುವ ರೈಲ್ವೆ ನೌಕರರಿಗೆ ನಿವೃತ್ತಿ ನಂತರ ಪೆನ್ಷನ್ ನೀಡದಿರುವುದು ಸಾಮಾಜಿಕ ನ್ಯಾಯಕ್ಕೆ ವಿರುದ್ಧ ವಾಗಿದೆ. ಕೇಂದ್ರ ಸರ್ಕಾರ 2004ರ ನಂತರ ನೇಮಕಗೊಂಡ ರೈಲ್ವೆ ನೌಕರರಿಗೂ ಪೆನ್ಷನ್ ನೀಡುವ ಕಾಯ್ದೆ ಜಾರಿ ಮಾಡಬೇಕು. ಈ ಹೋರಾಟಕ್ಕೆ ನಮ್ಮ ಸಂಘಟನೆಯಿಂದ ಸಂಪೂರ್ಣ ಬೆಂಬಲ ವ್ಯಕ್ತಪಡಿಸುತ್ತಿರುವುದಾಗಿ ತಿಳಿಸಿದರು.
      ಸoಜೆ ಪ್ರತಿಭಟನಾಕಾರರು ರೈಲ್ವೆ ನಿಲ್ದಾಣದ ಆವರಣದಲ್ಲಿ ಜಾಥಾ ನಡೆಸಿದರು.ಮಜ್ದೂರ್ ಯೂನಿಯನ್ ಅಧ್ಯಕ್ಷ ವೆಂಕಟೇಶ್ ನಾಯ್ಕ್, ಪದಾಧಿಕಾರಿಗಳಾದ ಪ್ರಶಾಂತ್, ಸಿಕಂದರ್ ಬಾಷಾ, ಸೈಯದ್ ಅಸ್ಲಮ್, ಚಿರಂಜೀವಿ ಡಿ.ಎಂ., ನವೀನ್ ಕುಮಾರ್ ಶಾ, ರಾಮಗೋಪಾಲಚಾರಿ, ಗಿರೀಶ್ ಟಿ.ಡಿ., ಗೋಪಿ ಎನ್., ಪರಶುರಾಮ್ ಬಂಡಿವಾಡ, ಕೆ.ಭಾಗ್ಯ, ಜೈತುನ್‌ಬಿ, ಅನ್ನಪೂರ್ಣ, ನಿರ್ಮಲ, ವಿಮಲ, ಚಂದ್ರಕಲಾ ಬಾಯಿ ಮುಂತಾದವರು ಸತ್ಯಾಗ್ರಹದಲ್ಲಿ ಭಾಗವಹಿಸಿದ್ದರು.
Share: