Harihar News
ಹರಿಹರ ; ಇಂದಿನಿಂದ ಹೊನಲು ಬೆಳಕಿನ ಶ್ರೀ ಹರಿಹರೇಶ್ವರ ಟ್ರೋಪಿ ಕ್ರಿಕೆಟ್ ಟೂರ್ನಿ
ಹರಿಹರ : ಹರಿಹರದ ಕ್ರೀಡಾ ಇತಿಹಾಸದಲ್ಲಿ ಮೊಟ್ಟಮೊದಲ ಬಾರಿಗೆ ಮಕರ ಸಂಕ್ರಮಣ ಹಬ್ಬದ ಪ್ರಯುಕ್ತ ರಾಷ್ಟ್ರಮಟ್ಟದ ಹೊನಲು ಬೆಳಕಿನ ಶ್ರೀ ಹರಿಹರೇಶ್ವರ ಟ್ರೋಫಿ ಟೆನಿಸ್ ಬಾಲ್ ಕ್ರಿಕೆಟ್ ಟೂರ್ನಿ ನಡೆಯಲಿದೆ ಎಂದು ಶ್ರೀ ಕಾಮಧೇನು ಫ್ರೆಂಡ್ಸ್ ಗ್ರೂಪ್ ನ ಅಧ್ಯಕ್ಷ ರಮೇಶ್ ತಿಳಿಸಿದರು.
ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಜ.12ರ ಶುಕ್ರವಾರದಿಂದ ಜ.14ರ ಭಾನುವಾರದವರೆಗೆ ಮೂರು ದಿನಗಳ ಕಾಲ ಡಿ.ಆರ್.ಎಂ ಹೈಸ್ಕೂಲ್ ಮೈದಾನದಲ್ಲಿ ಶ್ರೀ ಕಾಮಧೇನು ಫ್ರೆಂಡ್ಸ್ ಗ್ರೂಪ್ ಹಾಗೂ ಡಿ.ಆರ್.ಎಂ ಫೈಟರ್ಸ್ ಸಂಯುಕ್ತಾಶ್ರಯದಲ್ಲಿ ಪ್ರಪ್ರಥಮ ಬಾರಿಗೆ ಹೊನಲು ಬೆಳಕಿನಲ್ಲಿ ಲೀಗ್ ಕಂ ನಾಕೌಟ್ ಮಾದರಿಯಲ್ಲಿ ನಡೆಯಲಿವೆ ಎಂದು ಹೇಳಿದರು.
ರಾಷ್ಟ್ರಮಟ್ಟದಲ್ಲಿ ನಡೆಯುವ ಟೂರ್ನಿಯಲ್ಲಿ ಮಧ್ಯ ಪ್ರದೇಶ, ಚೆನ್ನೈ ಸೇರಿದಂತೆ ರಾಜ್ಯದ ಹೆಸರಾಂತ ತಂಡಗಳು ಸೇರಿದಂತೆ ಒಟ್ಟು 16 ಕ್ರಿಕೆಟ್ ತಂಡಗಳು ಭಾಗವಹಿಸಲಿವೆ.ಸ್ಥಳೀಯ ತಂಡಗಳ ಹೊರತುಪಡಿಸಿ ಹೊರಗಿನ ತಂಡಗಳಿಗೆ ಊಟ ಹಾಗು ವಸತಿಯ ಸೌಲಭ್ಯ ಕಲ್ಪಿಸಲಾಗಿದೆ. ಸ್ಥಳೀಯ ತಂಡಗಳಿಗೆ 10,000/- ಮತ್ತು ಹೊರಗಿನ ತಂಡಗಳಿಗೆ 20,000/- ರೂ, ನಿಗದಿಪಡಿಸಲಾಗಿದೆ.
ರಾಷ್ಟ್ರಮಟ್ಟದ ಈ ಕ್ರಿಕೆಟ್ ಟೂರ್ನಿಯಲ್ಲಿ ಪ್ರಥಮ ಬಹುಮಾನ ಗಳಿಸುವ ತಂಡಕ್ಕೆ 3,00,111/-ದ್ವಿತೀಯ ಸ್ಥಾನಕ್ಕೆ 1,50,555/- ಮತ್ತು ತೃತೀಯ ಬಹುಮಾನ ಪಡೆದ ತಂಡಕ್ಕೆ 50,555/- ರೂ,ಗಳ ನಗದು ಬಹುಮಾನದ ಜೊತೆಗೆ ಶ್ರೀ ಹರಿಹರೇಶ್ವರ ಟ್ರೋಪಿಯನ್ನು ನೀಡಲಾಗುವುದು.
ಗಣ್ಯ ಮಹನೀಯರು ಉದ್ಘಾಟಿಸಲಿರುವ ಕ್ರಿಕೆಟ್ ಪಂದ್ಯಾವಳಿ ಗಳ ವಿಶೇಷ ಆಹ್ವಾನಿಕರಾಗಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್, ಸಂಸದ ಜಿ.ಎಂ ಸಿದ್ದೇಶ್ವರ ಆಗಮಿಸುವರು. ವಿಶೇಷ ಕ್ರೀಡಾ ಪ್ರೋತ್ಸಾಹಕರಾಗಿ ಶಾಸಕ ಬಿ.ಪಿ ಹರೀಶ್, ಭಾಜಪ ಮುಖಂಡ ಚಂದ್ರಶೇಖರ್ ಪೂಜಾರ್, ಜಿ.ಬಿ. ವಿನಯ್ ಕುಮಾರ್,ಡಾ.ಟಿ.ಜಿ ರವಿಕುಮಾರ್, ಶಶಿಕುಮಾರ್ ಮೆಹರ್ವಾಡೆ, ಕೆ.ಬಿ.ಕೊಟ್ರೇಶ್ ಹೆಚ್ಚಿನ ಪ್ರೋತ್ಸಾಹ ನೀಡಿರುವುದಾಗಿ ತಿಳಿಸಿದರು.
ಇದೇ ವೇಳೆ ಅನಾಥ ಮಕ್ಕಳ ಸಹಾಯಾರ್ಥವಾಗಿ ಲಕ್ಕಿ ಡ್ರಾ ಬಹುಮಾನಗಳನ್ನು ನಡೆಸಲಾಗುತ್ತಿದ್ದು ರೆಫ್ರಿಜರೇಟರ್ ಸೈಕಲ್ ಮಿಕ್ಸಿ ಮಕ್ಕಳ ಸೈಕಲ್ ಸೇರಿದಂತೆ 20 ಬಹುಮಾನಗಳನ್ನೊಳಗೊo ಡ ಲಕ್ಕಿ ಡ್ರಾ ನಡೆಯಲಿದ್ದು 100/- ರೂಪಾಯಿಗಳ ಕೂಪನ್ ಗಳನ್ನು ಮಾಡಲಾಗಿದ್ದು ಡ್ರಾ ಜ.14 ರಂದು ಸಂಜೆ 7.00 ಗಂಟೆಗೆ ನಡೆಯಲಿದೆ.ಸಾರ್ವಜನಿಕರು ಕೂಪನ್ ಖರೀದಿಸುವ ಮೂಲಕ ಅನಾಥ ಮಕ್ಕಳ ಕಲ್ಯಾಣಕ್ಕೆ ಸಹಕಾರಿಯಾಗಬೇಕು ಎಂದು ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಗಿರೀಶ್, ಸಿದ್ದಪ್ಪ, ಸಾಗರ್, ನಾಗರಾಜ್, ಮಂಜುನಾಥ, ಮಹಬೂಬ್, ಪ್ರೀತಂ ಬಾಬು ಮುಂತಾದವರು ಉಪಸ್ಥಿತರಿದ್ದರು.
