Friday, 16 Oct 2026
Breaking
ಕನ್ನಡ ಸಾಹಿತ್ಯದಲ್ಲಿ ವೈಚಾರಿಕ, ಸಾಂಸ್ಕೃತಿಕ ಹಾಗೂ ಸಾಮಾಜಿಕ ಮೌಲ್ಯಗಳ ಸಮನ್ವಯವಿದೆ ; ಡಾ. ಎ.ಬಿ. ರಾಮಚಂದ್ರಪ್ಪ ಶಿಕ್ಷಣ ಸಂಸ್ಥೆ, ರಿಯಲ್ ಎಸ್ಟೇಟ್ ವ್ಯವಹಾರವಿಲ್ಲ ; ಸೇವೆ ಮಾಡುವ ಉದ್ದೇಶದಿಂದ ಚುನಾವಣೆಗೆ ಸ್ಪರ್ಧೆ: ಶಶಿ ಹುಲಿಕುಂಟೆ ಮಠ ಹರಿಹರ ಗಣೇಶೋತ್ಸವದ ಇತಿಹಾಸದಲ್ಲಿ ಹೊಸ ಅಧ್ಯಾಯ ; ಐತಿಹಾಸಿಕ ರಾಜಭೀದಿ ಉತ್ಸವಕ್ಕೆ ಹರಿಹರದಲ್ಲಿ ಮುನ್ನುಡಿ ದಾವಣಗೆರೆ ‘ಆರೋಗ್ಯ ಸಂಜೀವಿ’ ಕಾಯ್ದೆಹೊಳ್ಳಿ ; ನಿಜದ ಬಿಸಿಲವೃತ್ತ” ಜಿಲ್ಲಾ ಮಟ್ಟದ ಶಟಲ್ ಬ್ಯಾಡ್ಮಿಂಟನ್‌ನಲ್ಲಿ ಇಂದಿರಾಗಾಂಧಿ ವಸತಿ ಶಾಲೆ ವಿದ್ಯಾರ್ಥಿಗಳ ಸಾಧನೆ ಸಾಲ ಮರುಪಾವತಿಸುವಂತೆ ಗ್ರಾಹಕರಿಗೆ ಮನವಿ ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ತಂಬಾಕು ಮಾರಾಟ: ದಾಳಿ,ದಂಡ ವಿಧಿಸಿದ ಅಧಿಕಾರಿಗಳು
Menu
Harihar News

ವಾಲ್ಮೀಕಿ ವೃತ್ತದಲ್ಲಿ ಸಂಗೊಳ್ಳಿ ರಾಯಣ್ಣ ಪ್ರತಿಮೆ ಪ್ರತಿಷ್ಠಾಪನೆ ;ವಾತಾವರಣ ಪ್ರಕ್ಷುಭ್ದ ಎಸಿ, ಡಿವೈಎಸ್ಪಿ ಭೇಟಿ ಸಂಧಾನ

January 9, 2024 3 years ago 1 min read

 

ಹರಿಹರ : ವಾಲ್ಮೀಕಿ ವೃತ್ತದಲ್ಲಿ ಸಂಗೊಳ್ಳಿ ರಾಯಣ್ಣ ಪ್ರತಿಮೆ ಪ್ರತಿಷ್ಠಾಪನೆಗೆ ಸಿದ್ಧತೆ ನಡೆಸಿದ ಕಾರಣಕ್ಕೆ ಗ್ರಾಮದಲ್ಲಿ ಪ್ರಕ್ಷುಭ್ದ ವಾತಾವರಣ ನಿರ್ಮಾಣವಾಗಿ ಸ್ಥಳಕ್ಕೆ ಅಧಿಕಾರಿಗಳ ದಂಡು ಆಗಮಿಸಿ ವಾತಾವರಣವನ್ನು ತಿಳಿಗೊಳಿಸಿದ ಘಟನೆ ಭಾನುವಳ್ಳಿ ಗ್ರಾಮದಲ್ಲಿ ನಡೆದಿದೆ.

    ತಾಲೂಕಿನ ಭಾನುವಳ್ಳಿ ಗ್ರಾಮದ ಭಾನುವಳ್ಳಿ-ನಂದಿಗುಡಿ ರಸ್ತೆಯಲ್ಲಿರುವ ಶ್ರೀ ಆದಿಕವಿ ವಾಲ್ಮೀಕಿ ವೃತ್ತದ ಬಳಿ ಮಂಗಳವಾರ ಬೆಳಗಿನ ಜಾವ ಕೆಲ ಯುವಕರು ಸಂಗೊಳ್ಳಿ ರಾಯಣ್ಣನ ಪ್ರತಿಮೆ ಪ್ರತಿಷ್ಠಾಪನೆಗೆ ಮುಂದಾದ ಹಿನ್ನೆಲೆಯಲ್ಲಿ ವಾತಾವರಣ ಪ್ರಕ್ಷುಭ್ದ ಗೊಂಡಿದ್ದು ಸ್ಥಳಕ್ಕೆ ಉಪ-ವಿಭಾಗಾಧಿಕಾರಿ ಹಾಗೂ ಡಿವೈಎಸ್ಪಿ ಮುಂತಾದ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿ ಸಂಧಾನ ಸಭೆ ನಡೆಸಿದರು.
     ಉಪ-ವಿಭಾಗಾಧಿಕಾರಿ ಎನ್.ದುರ್ಗಾಶ್ರೀ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ವಿಜಯ್ ಕುಮಾರ್ ಸಂತೋಷ್, ಗ್ರಾಮಾಂತರ ಡಿವೈಎಸ್ಪಿ ಬಿ.ಎಸ್.ಬಸವರಾಜ್, ಗ್ರೇಡ್ 2 ತಹಸೀಲ್ದಾರ್ ಶಶಿಧರಯ್ಯ, ತಾ.ಪಂ.ಕಾರ್ಯನಿರ್ವಹಣಾಧಿಕಾರಿ ರಮೇಶ್ ಸುಲ್ಪಿ, ಲೋಕೋಪಯೋಗಿ ಇಲಾಖೆ ಇಂಜಿನಿಯರ್ ಶಿವಮೂರ್ತಿ ಹಾಗೂ ವಾಲ್ಮೀಕಿ ಮತ್ತು ಹಾಲುಮತ ಕುರುಬ ಸಮಾಜದ ಯುವಕರು, ಹಿರಿಯರು ಭಾಗಿಯಾಗಿದ್ದ ಸಂಧಾನ ಸಭೆಯಲ್ಲಿ ಜ.12 ರಂದು ಗ್ರಾಮಕ್ಕೆ ಜಿಲ್ಲಾಧಿಕಾರಿ ಹಾಗೂ ಪೊಲೀಸ್ ವರಿಷ್ಠಾಧಿಕಾರಿಗಳು ಭೇಟಿ ನೀಡುವವರಿದ್ದು ಅಲ್ಲಿಯವರೆಗೆ ಯಾವುದೇ ರೀತಿಯ ಘಟನೆಗಳು ಸಂಭವಿಸಿದಂತೆ ತಟಸ್ಥ ಸ್ಥಿತಿ ಮುಂದುವರಿಸಲು ಪೊಲೀಸ್ ಇಲಾಖೆ ಹಾಗೂ ಸಂಬಂಧ ಪಟ್ಟ ಸಮುದಾಯದ ಮುಖಂಡರಿಗೆ ತಿಳಿಸಲಾಯಿತು.
     ಸಭೆಯಲ್ಲಿ ನಾಯಕ ಸಮುದಾಯದ ಮುಖಂಡರುಗಳು ಮಾತನಾಡಿ ಕಳೆದ 20 ವರ್ಷಗಳ ಹಿಂದೆ ಗ್ರಾಮದ ವೃತ್ತಕ್ಕೆ ಶ್ರೀ ಆದಿಕವಿ ಮಹರ್ಷಿ ವಾಲ್ಮೀಕಿ ವೃತ್ತ ಮತ್ತು ಮದಕರಿ ಮಹಾದ್ವಾರ ಎಂದು ಅಂದಿನ ಸಚಿವರಾಗಿದ್ದ ದಿ. ಎಚ್.ಶಿವಪ್ಪ ಮುಂತಾದ ಗಣ್ಯರು ಹಾಗೂ ನಂತರದ ದಿನಗಳಲ್ಲಿ ದಿ.ಡಾ.ವೈ.ನಾಗಪ್ಪ ಮುಂತಾದವರ ಉಪಸ್ಥಿತಿಯಲ್ಲಿ ನಾಮಕರಣ ಮಾಡಲಾಗಿದೆ ಎನ್ನುವುದಕ್ಕೆ ಇಲ್ಲಿರುವ ಶಿಲಾ ಫಲಕಗಳೇ ಸಾಕ್ಷಿಯಾಗಿವೆ.
   ಆದರೆ ಈಗ ಏಕಾಏಕಿಯಾಗಿ ಈ ವೃತ್ತದಲ್ಲಿ ಸಂಗೊಳ್ಳಿ ರಾಯಣ್ಣ ನವರ ಪ್ರತಿಮೆ ಸ್ಥಾಪಿಸುವ ಅವಶ್ಯಕತೆ ಆದರೂ ಏನಿತ್ತು ಎಂದು ಪ್ರಶ್ನಿಸಿದರು ಮತ್ತು ಸ್ವತಂತ್ರ ಹೋರಾಟಗಾರನಾದ ರಾಯಣ್ಣನ ಪ್ರತಿಮೆ ಪ್ರತಿಷ್ಠಾಪಿಸಲು ನಮ್ಮ ಅಭ್ಯಂತರವೇನು ಇಲ್ಲ. ಗ್ರಾಮದ ಹಲವು ಕಡೆ ಕನಕ ವೃತ್ತ, ಕಾಳಿದಾಸ ವೃತ್ತ ಇತ್ಯಾದಿ ಸ್ಥಳಗಳಿದ್ದು ಅಲ್ಲಿ ಪ್ರತಿಷ್ಠಾಪನೆ ಮಾಡಬಹುದಾಗಿತ್ತು ಎಂಬ ಸಲಹೆ ನೀಡಿದರು.
    ಇದಕ್ಕೆ ಪ್ರತ್ಯುತ್ತರವಾಗಿ ಹಾಲುಮತ ಕುರುಬ ಸಮಾಜದ ಮುಖಂಡರುಗಳು ಪ್ರಸ್ತುತ ನಾವು ಪ್ರತಿಷ್ಠಾಪನೆ ಮಾಡುತ್ತಿರುವುದು ಸರ್ಕಾರಿ ಸ್ಥಳದಲ್ಲಿ ಮಾಡಿಲ್ಲ ಅದು ಖಾಸಗಿ ವ್ಯಕ್ತಿ ಸಿದ್ದಪ್ಪ ಬಿನ್ ನಾರಾಯಣಪ್ಪ ರವರ ಸ್ವಂತ ಸ್ಥಳದಲ್ಲಿ ನಾವು ಪ್ರತಿಷ್ಠಾಪನೆ ಮಾಡುತ್ತಿದ್ದೇವೆ. ಇದಕ್ಕೆ ಯಾರ ಅಪ್ಪಣೆಯು ಬೇಕಾಗಿಲ್ಲ ನಾವು ಸಂಗೊಳ್ಳಿ ರಾಯಣ್ಣನ ಪ್ರತಿಮೆ ಪ್ರತಿಷ್ಠಾಪಿಸಿಯೇ ಸಿದ್ದ ಎಂದು ವಾದ ಮಂಡಿಸಿದರು.
    ಆಗ ಸಭೆಯಲ್ಲಿದ್ದ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಇಲಾಖೆಯ ರಸ್ತೆಯಾಗಿರುವುದರಿಂದ ಅದರ ಅಕ್ಕಪಕ್ಕ ಯಾವುದೇ ರೀತಿಯ ಸಮುದಾಯ ಕೋಮು ಸಂಘರ್ಷಗಳಿಗೆ ಎಡೆ ಮಾಡಿ ಕೊಡುವಂತಹ ಯಾವುದೇ ಪ್ರಕ್ರಿಯೆಗಳು ನಡೆಯಬಾರದೆಂಬ ನಿಯಮಗಳಿದ್ದು ಅದನ್ನು ಎಲ್ಲರೂ ಪಾಲಿಸ ಬೇಕಾಗುತ್ತದೆ. ಆದ್ದ ರಿಂದ ಮುಂದೆ ಜಿಲ್ಲಾಧಿಕಾರಿ ಹಾಗು ಪೊಲೀಸ್ ವರಿಷ್ಠಾಧಿಕಾರಿಗಳ ಸಭೆಯಲ್ಲಿ ಯಾವ ನಿರ್ಣಯವಾಗುವುದೊ ಅದರಂತೆ ಮುಂದುವರಿಯಬೇಕಾಗುತ್ತದೆ ಎಂದು ತಿಳಿಸಿದರು.
      ಸಭೆಗೂ ಮುನ್ನ ನಾಯಕ ವಾಲ್ಮೀಕಿ ಸಮುದಾಯದ ಮುಖಂಡರುಗಳು ಯುವಕರು ಬಂಧುಗಳು ಸೇರಿ ವಾಲ್ಮೀಕಿ ವೃತ್ತದಲ್ಲಿ ಧರಣಿ ನಡೆಸಿ ರಸ್ತೆ ತಡೆ ನಡೆಸಿದರು. ಸ್ಥಳಕ್ಕೆ ಉಪ ವಿಭಾಗಾಧಿಕಾರಿ ಪೊಲೀಸ್ ಅಧಿಕಾರಿಗಳು ಆಗಮಿಸಿ ಅವರ ಮನವೊಲಿಸಿ ಸಂತಾನ ಸಭೆ ನಡೆಸಲು ನಿರ್ಧರಿಸಿರುವುದಾಗಿ ತಿಳಿಸಿ ಧರಣಿಯನ್ನು ಹಿಂಪಡೆಯುವಂತೆ ಮನವೊಲಿಸುವಲ್ಲಿ ಯಶಸ್ವಿ ಯಾದರು.
       ಈ ಸಮಯದಲ್ಲಿ ಪೊಲೀಸ್ ಇನ್ಸ್ಪೆಕ್ಟರ್ ದೇವಾನಂದ್, ಪಿಎಸ್ಐ ಗಳಾದ ಅರವಿಂದ್, ಪ್ರವೀಣ್ ಕುಮಾರ್,ಪ್ರಭು ಕೆಳಗಿನ ಮನಿ,ರಾಜಸ್ವ ನಿರೀಕ್ಷಕ ಆನಂದ್, ಪಿಡಿಓ ಬೀರಪ್ಪ,ಗ್ರಾಮ ಪಂಚಾ ಯತಿ ಸದಸ್ಯರುಗಳಾದ ಜಿ.ಪಿ.ಧನ್ಯಕುಮಾರ್, ಎಚ್.ಕನ್ನಪ್ಪ, ಪಾಲಾಕ್ಷಪ್ಪ,ಜೋಗಪ್ಪರ ರಾಮಪ್ಪ, ಮುಖಂಡರುಗಳಾದ ಬೀರಪ್ಪ ಟಿ ಆರ್ ಮಹೇಶ್ವರಪ್ಪ ಟಿ ರಂಗಪ್ಪ ಸಿದ್ದಪ್ಪ ದೊಡ್ಡಮನಿ, ಜಯಪ್ಪ ಬಾನಳ್ಳೆರ, ಟಿ.ಪುಟ್ಟಪ್ಪ, ಬಿ.ಎಚ್.ರಾಮಪ್ಪ ಸೇರಿದಂತೆ ಗ್ರಾಮದ ಎಲ್ಲಾ ಸಮುದಾಯದ ಹಲವಾರು ಮುಖಂಡರುಗಳು ಉಪಸ್ಥಿತರಿದ್ದರು.
ಭಾನುವಳ್ಳಿ ಗ್ರಾಮದಲ್ಲಿ ಈಗಾಗಲೇ ಮಸೀದಿ ರಸ್ತೆಯಲ್ಲಿರುವ ದಿವಂಗತ ಕೊತ್ತಂಬರಿ ಹಾಲಪ್ಪನವರ ಮನೆಯ ಮುಂದೆ ಸ್ವಾತಂತ್ರ ಯೋಧ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನವರ ಪ್ರತಿಮೆಯನ್ನು ಪ್ರತಿಷ್ಠಾಪಿಸಲಾಗಿದೆ. ಆದಾಗ್ಯೂ ಮತ್ತೊಂದು ಮೂರ್ತಿ ಪ್ರತಿಷ್ಠಾಪನೆಯ ಅವಶ್ಯಕತೆ ಇರುವುದಾದರೂ ಏನು..? ಎಂದು ಹಲವು ಮುಖಂಡರುಗಳು ಸಭೆಯಲ್ಲಿ ಮಾತನಾಡಿಕೊಳ್ಳುತ್ತಿದ್ದರು ಆದರೂ ಮತ್ತೊಂದು ಮೂರ್ತಿ ಪ್ರತಿಷ್ಠಾಪನೆ ಮಾಡಲು ಯಾವುದೇ ಅಭ್ಯಂತರವಿಲ್ಲ ಆದರೆ ಸರಿಯಾದ ಸ್ಥಳದಲ್ಲಿ ಮೂರ್ತಿ ಪ್ರತಿಷ್ಠಾಪನೆ ಆಗಲಿ ಎನ್ನುವ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.
Share: