Friday, 16 Oct 2026
Breaking
ಕನ್ನಡ ಸಾಹಿತ್ಯದಲ್ಲಿ ವೈಚಾರಿಕ, ಸಾಂಸ್ಕೃತಿಕ ಹಾಗೂ ಸಾಮಾಜಿಕ ಮೌಲ್ಯಗಳ ಸಮನ್ವಯವಿದೆ ; ಡಾ. ಎ.ಬಿ. ರಾಮಚಂದ್ರಪ್ಪ ಶಿಕ್ಷಣ ಸಂಸ್ಥೆ, ರಿಯಲ್ ಎಸ್ಟೇಟ್ ವ್ಯವಹಾರವಿಲ್ಲ ; ಸೇವೆ ಮಾಡುವ ಉದ್ದೇಶದಿಂದ ಚುನಾವಣೆಗೆ ಸ್ಪರ್ಧೆ: ಶಶಿ ಹುಲಿಕುಂಟೆ ಮಠ ಹರಿಹರ ಗಣೇಶೋತ್ಸವದ ಇತಿಹಾಸದಲ್ಲಿ ಹೊಸ ಅಧ್ಯಾಯ ; ಐತಿಹಾಸಿಕ ರಾಜಭೀದಿ ಉತ್ಸವಕ್ಕೆ ಹರಿಹರದಲ್ಲಿ ಮುನ್ನುಡಿ ದಾವಣಗೆರೆ ‘ಆರೋಗ್ಯ ಸಂಜೀವಿ’ ಕಾಯ್ದೆಹೊಳ್ಳಿ ; ನಿಜದ ಬಿಸಿಲವೃತ್ತ” ಜಿಲ್ಲಾ ಮಟ್ಟದ ಶಟಲ್ ಬ್ಯಾಡ್ಮಿಂಟನ್‌ನಲ್ಲಿ ಇಂದಿರಾಗಾಂಧಿ ವಸತಿ ಶಾಲೆ ವಿದ್ಯಾರ್ಥಿಗಳ ಸಾಧನೆ ಸಾಲ ಮರುಪಾವತಿಸುವಂತೆ ಗ್ರಾಹಕರಿಗೆ ಮನವಿ ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ತಂಬಾಕು ಮಾರಾಟ: ದಾಳಿ,ದಂಡ ವಿಧಿಸಿದ ಅಧಿಕಾರಿಗಳು
Menu
Davanagere News

ಅಯೋಧ್ಯೆಯಲ್ಲಿ ರಾಮ ಮಂದಿರದ ಜೊತೆ ಮಹರ್ಷಿ ವಾಲ್ಮೀಕಿ ಮಂದಿರವು ನಿರ್ಮಾಣವಾಗಲಿ ; ಸಚಿವ ಕೆ.ಎನ್ ರಾಜಣ್ಣ

January 9, 2024 3 years ago 1 min read
ಹರಿಹರ : ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣದ ಜೊತೆಗೆ ಮಹರ್ಷಿ ವಾಲ್ಮೀಕಿ ಮಂದಿರವನ್ನೂ ನಿರ್ಮಿಸಬೇಕೆಂದು ಸಹಕಾರ ಸಚಿವ ಹಾಗೂ 6ನೇ ವಾಲ್ಮೀಕಿ ಜಾತ್ರಾ ಸಮಿತಿ ಅಧ್ಯಕ್ಷ ಕೆ.ಎನ್.ರಾಜಣ್ಣ ಆಗ್ರಹಿಸಿದರು.
    ಫೆ.8, 9 ರಂದು ನಡೆಯುವ ಮಹರ್ಷಿ ವಾಲ್ಮೀಕಿ ಜಾತ್ರೆ ಸಿದ್ಧತೆ ಗಾಗಿ ತಾಲ್ಲೂಕಿನ ರಾಜನಹಳ್ಳಿ ವಾಲ್ಮೀಕಿ ಪೀಠದ ಸಭಾ ಭವನದಲ್ಲಿ ಮಂಗಳವಾರ ನಡೆದ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಲು ಆಗಮಿಸಿದ್ದ ಅವರು ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು,
ಜ.22 ರಂದು ಅಯೋಧ್ಯೆಯಲ್ಲಿ ರಾಮ ದೇವರ ಮಂದಿರ ನಿರ್ಮಾಣ ಆಗುತ್ತಿರುವುದು ಸಂತಸದ ವಿಷಯ, ಆದರೆ ಜಗತ್ತಿಗೆ ರಾಮನ ಪರಿಚಯಿಸಿದ ಖ್ಯಾತಿಯ ವಾಲ್ಮೀಕಿಯವರನ್ನು ಮರೆಯಬಾರದು. ರಾಮ ಮಂದಿರ ಸಮೀಪದಲ್ಲೆ ವಾಲ್ಮೀಕಿ ಮಂದಿರವನ್ನೂ ನಿರ್ಮಿಸಬೇಕೆಂದು ಆಗ್ರಹಿಸಿದರು.
     ಈ ನಾಡಿನ ಶೋಷಿತರು ಸಂವಿಧಾನ ಹಕ್ಕು ಪಡೆಯಬೇಕಿದೆ, ರಾಮನನ್ನು ಜಗತ್ತಿಗೆ ಪರಿಚಿಸಿದ ಖ್ಯಾತಿಯ ವಾಲ್ಮೀಕಿಯ ಸಮುದಾಯದವರಾದ ನಾವೆಲ್ಲಾ ಸ್ವಾಭಿಮಾನ, ಹೆಮ್ಮೆಯಿಂದ ಬದುಕಬೇಕಿದೆ. ಈ ಜಾತ್ರೆಯ ಮೂಲಕ ಸಮುದಾಯದ ಜನರಲ್ಲಿ ಜಾಗೃತಿ, ಸಂಘಟನೆಯನ್ನು ಬೆಳೆಸಬೇಕಿದೆ.ಈಗಾಗಲೆ ಜಾತ್ರೆಯ ಪ್ರಚಾರಕ್ಕಾಗಿ ಪ್ರಸನ್ನಾನಂದ ಸ್ವಮೀಜಿಯವರು ರಾಜ್ಯಾದ್ಯಂತ ಪ್ರವಾಸ ಕೈಗೊಂಡಿದ್ದಾರೆ, ರಾಜ್ಯದೆಲ್ಲೆಡೆಯಿಂದ ಸಮುದಾಯದ ಜನರು ಆಗಮಿಸಲಿದ್ದಾರೆ. ಹಿಂದಿನoತೆಯೆ ಈ ಬಾರಿಯ ಜಾತ್ರೆಯನ್ನು ಯಶಸ್ವಿಯಾಗಿ ನಡೆಸಲು ಎಲ್ಲರೂ ಸಹಕರಿಸಬೇಕಿದೆ ಎಂದು ಹೇಳಿದರು.
    ಸಿನಿಮಾ ನಟರು ಜಾತ್ರೆಗೆ ಈ ಹಿಂದೆ ಆಗಮಿಸಿದ್ದಾಗ ಗೊಂದಲ ಏರ್ಪಟ್ಟಿದ್ದು ಈ ಬಾರಿ ನಟರನ್ನು ಕರೆಸುತ್ತೀರ ಎಂಬ ಪ್ರಶ್ನೆಗೆ ಈ ಕುರಿತು ಜಾತ್ರಾ ಸಮಿತಿಯವರು ತೀರ್ಮಾನ ಕೈಗೊಳ್ಳುವರು ಎಂದು ಸಚಿವರು ಉತ್ತರಿಸಿದರು. ಎಸ್ಸಿ, ಎಸ್ಟಿ ಸಮುದಾಯದ ಶಾಸಕರಲ್ಲಿ ಯಾರಿಗಾದರೂ ಸಿಎಂ ಮಾಡಬೇಕೆಂಬ ಚರ್ಚೆ ಇದ್ದು ತಾವು ಆ ರೇಸ್‌ನಲ್ಲಿದ್ದೀರ ಎಂಬ ಪ್ರಶ್ನೆಗೆ, ಸದ್ಯಕ್ಕೆ ಸಿಎಂ ಸ್ಥಾನ ಖಾಲಿ ಇಲ್ಲ, ಅಷ್ಟಕ್ಕೂ ಸಿಎಂ ಸ್ಥಾನ ಬೇಡ ಎನ್ನುವವರು ಯಾರಿದ್ದಾರೆ, ಶಾಸಕರಾದ ಎಲ್ಲರಿಗೂ ಆ ಆಸೆ ಇರುತ್ತದೆ.
    ಕಾಂಗ್ರೆಸ್ಸಿಗೆ 140 ಶಾಸಕರ ಸಂಖ್ಯಾ ಬಲವಿದೆ, ಹೀಗಿರುವಾಗ ಜೆಡಿಎಸ್‌ನ ಶಾಸಕರನ್ನು ಸೆಳೆಯುವ ಅಗತ್ಯವಿಲ್ಲ,ಈಗ ಬಿಜಿಪಿ ಯೊಂದಿಗೆ ಸಖ್ಯ ಬೆಳೆಸಿರುವ ಜೆಡಿಎಸ್‌ಗೆ ಜಾತ್ಯಾತೀತ ಎಂಬ ಶಬ್ದ ಸೂಕ್ತವಾಗಿದೆಯೆ ಎಂದು ಪ್ರಶ್ನಿಸಿದ ಸಚಿವರು,ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಏಕಾಂಗಿಯಾಗಿ ಚುನಾವಣೆ ಎದುರಿಸಿ ಎಲ್ಲಾ 28 ಸ್ಥಾನಗಳನ್ನು ಗೆಲ್ಲಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
    ಪಕ್ಷದ ಮುಖಂಡರಾದ ರಾಹುಲ್ ಗಾಂಧಿಯವರು ಜ.11ಕ್ಕೆ ದೆಹಲಿಯಲ್ಲಿ ಸಭೆ ಕರೆದಿದ್ದು ರಾಜ್ಯದ ಎಲ್ಲಾ ಸಚಿವರು ಆ ಸಭೆ ಯಲ್ಲಿ ಭಾಗವಹಿಸುವರು ಎಂದ ಅವರು,ಸರ್ಕಾರದ ಗ್ಯಾರಂಟಿ ಯೋಜನೆಗಳು ವಿವಿಧ ಜಿಲ್ಲೆಗಳಲ್ಲಿ ಶೇ. 70 ರಿಂದ 80 ರಷ್ಟು ಜಾರಿಯಾಗಿವೆ, ಹಾಸನ ಜಿಲ್ಲೆಯಲ್ಲಿ ಶೇ.90 ರಷ್ಟು ಜಾರಿಯಾಗಿದೆ ಎಂದು ಮಾಹಿತಿ ನೀಡಿದರು.
    ಚಿತ್ರದುರ್ಗ ಮತ್ತು ವಿಜಯನಗರ ಸಂಸ್ಥಾನವನ್ನು ಕಟ್ಟಿ ಬೆಳೆಸಿದ ನಾಯಕ ಸಮುದಾಯದ ವಂಶಸ್ಥರನ್ನು ಜಾತ್ರೆಗೆ ಕರೆಸುವ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು ಆ ಕುರಿತು ಚರ್ಚಿಸಲಾಗುವುದೆಂದು ಉತ್ತರಿಸಿದರು.
    ಜಗಳೂರು ಶಾಸಕ ದೇವೇಂದ್ರಪ್ಪ ಮಾತನಾಡಿ, 24 ಸಾವಿರ ಶ್ಲೋಕಗಳ ಮೂಲಕ ರಾಮಾಯಣ ಮಹಾ ಗ್ರoಥವನ್ನು ರಚಿಸಿದ ಮಹರ್ಷಿ ವಾಲ್ಮೀಕಿಯವರನ್ನು ಮರೆತಿರುವುದು ವಿಷಾದನೀಯ, ಅಯೋಧ್ಯೆಯಲ್ಲಿ ರಾಮಮಂದಿರಕ್ಕೆ ಮುನ್ನವೇ ಮಹರ್ಷಿ ವಾಲ್ಮೀಕಿ ಮಂದಿರವನ್ನು ನಿರ್ಮಿಸಬೇಕೆಂದು ಆಗ್ರಹಿಸಿದರು.
    ಸುದ್ದಿಗೋಷ್ಠಿಯಲ್ಲಿ ಪ್ರಸನ್ನಾನಂದ ಸ್ವಾಮೀಜಿ, ಸಮುದಾಯದ ಮುಖಂಡರಾದ ಶಾಂತಲಾ ರಾಜಣ್ಣ, ಬಿ.ಶಿವಪ್ಪ, ಕೆ.ಪಿ.ಪಾಲಯ್ಯ, ವೀರೇಂದ್ರ ಸಿಂಹ, ಟಿ.ಈಶ್ವರ್, ರಮೇಶ್ ಹೊದಿಗೆರೆ, ಡಾ.ಜೆ.ರಂಗಯ್ಯ, ಜಂಭಣ್ಣ ನಾಯಕ್, ಬಿ.ವೀರಣ್ಣ ಹಾಗೂ ಇತರರು ಉಪಸ್ಥಿತರಿದ್ದರು.
Share: