Davanagere News
ಜ.17 ರಿಂದ ಹಜರತ್ ಅಹಮದ್ ಷಾ, ಮಹಮ್ಮದ್ ಷಾ ವಲಿ ರವರ ಉರುಸ್ ಗಂಧ ಕಾರ್ಯಕ್ರಮ ಆಯೋಜನೆ
ಹರಿಹರ : ನಗರದ ಬಹಾರ್ ಮಖಾನ್ ಬಳಿ ಇರುವ ಹಜರತ್ ಅಹಮದ್ ಷಾ ಮತ್ತು ಮಹಮ್ಮದ್ ಷಾ ವಲಿ ರವರ ಗಂಧ ಸಲುವಾಗಿ ಹೆಚ್.ಎ.ಎಂ ನೌಜವಾನ್ ಕಮಿಟಿ ವತಿಯಿಂದ ಸಂದಲ್ ಮತ್ತು ಉರುಸ್ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಕಮಿಟಿ ಅಧ್ಯಕ್ಷ ನಸ್ರುಲ್ಲಾ ಮಕಾಂದಾರ್ ತಿಳಿಸಿದರು.
ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಬಹಾರ್ ಮಕಾನ್ ಹಜರತ್ ಅಹಮದ್ ಷಾ ಮತ್ತು ಮಹಮ್ಮದ್ ಷಾ ವಲಿ ರವರ ಗಂಧ ಕಾರ್ಯಕ್ರಮ ಜ. 17ರ ಬುಧವಾರ ಮಧ್ಯಾಹ್ನ 4.00 ಗಂಟೆಯಿಂದ ಸಂದಲ್ ಮೆರವಣಿಗೆ ಮೂಲಕ ಪ್ರಾರಂಭವಾಗಲಿದೆ.
ಉರುಸ್ ನ ಸಂದಲ್ (ಗಂಧ) ನ ಮೆರವಣಿಗೆಯು ಬಾಹರ್ ಮಕಾನ್ ನ ಉಸ್ತುವಾರಿಗಳಾದ ಶೇಕ್ ಮಹಬೂಬ್ ಸಾಬ್ ರವರ ಮನೆಯಿಂದ ಪ್ರಾರಂಭವಾಗಿ ಹೊರಟು ಪೇಟೆ ಆಂಜನೇಯ ದೇವಸ್ಥಾನ, ಹಳೆ ಪಿ.ಬಿ.ರಸ್ತೆಯಲ್ಲಿ ಸಾಗಿ ಮುಖ್ಯರಸ್ತೆ ಮೂಲಕ ಆಗಮಿಸಿ ಕಿತ್ತೂರು ರಾಣಿ ಚೆನ್ನಮ್ಮ ವೃತ್ತದಿಂದ ಆಗಮಿಸಿ ದರ್ಗಾದಲ್ಲಿ ಸಮರ್ಪಣೆಯಾಗುವುದು.
ಜ.18 ರ ಗುರುವಾರ ಉರುಸಿನ ಅಂಗವಾಗಿ ರಾತ್ರಿ 9.00 ಗಂಟೆಗೆ ಮುಂಬೈನ ಅನ್ವರ್ ಜಾನಿ ಅವರಿಂದ ಕವ್ವಾಲಿ ಕಾರ್ಯಕ್ರಮವನ್ನ ದರ್ಗಾ ಮುಂಭಾಗದಲ್ಲಿ ಹಮ್ಮಿಕೊಳ್ಳಲಾಗಿದೆ. ಜ.19 ರ ಶುಕ್ರವಾರ ಮಧ್ಯಾಹ್ನ 2 ಗಂಟೆಯಿಂದ ಸಂಜೆ 5:00 ವರೆಗೆ ಈ ಹಿಂದಿನಿಂದಲೂ ಬಂದಿರುವ ಪದ್ಧತಿಯ ಪ್ರಕಾರ ಬಹಾರ್ ಮಕಾನ್ ದರ್ಗಾ ಮುಂಭಾಗದಲ್ಲಿ ಸಾರ್ವಜನಿಕರಿಗೆ ಅನ್ನ ಸಂತರ್ಪಣೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಅಬ್ದುಲ್ ಶಾಹಿದ್, ಸಮಿವುಲ್ಲಾ, ಶಕೀಲ್ ಅಹಮದ್, ಆಪ್ತಾಬ್, ಬಾಬುಜಾನ್ ಮುಂತಾದವರು ಉಪಸ್ಥಿತರಿದ್ದರು.
