Saturday, 17 Oct 2026
Breaking
ಎಸ್‌ಎಸ್‌ಕೆ ಸಮಾಜದ ದಸರಾ ಆಚರಣೆ ಅತ್ಯಂತ ವಿಶೇಷ ವಾಗಿದ್ದು ಭಕ್ತಿ, ಶ್ರದ್ಧೆ ಇತರಿಗೆ ಮಾರ್ಗದರ್ಶಿ ; ಶಾಸಕ ಹರೀಶ್  ಕನ್ನಡ ಸಾಹಿತ್ಯದಲ್ಲಿ ವೈಚಾರಿಕ, ಸಾಂಸ್ಕೃತಿಕ ಹಾಗೂ ಸಾಮಾಜಿಕ ಮೌಲ್ಯಗಳ ಸಮನ್ವಯವಿದೆ ; ಡಾ. ಎ.ಬಿ. ರಾಮಚಂದ್ರಪ್ಪ ಶಿಕ್ಷಣ ಸಂಸ್ಥೆ, ರಿಯಲ್ ಎಸ್ಟೇಟ್ ವ್ಯವಹಾರವಿಲ್ಲ ; ಸೇವೆ ಮಾಡುವ ಉದ್ದೇಶದಿಂದ ಚುನಾವಣೆಗೆ ಸ್ಪರ್ಧೆ: ಶಶಿ ಹುಲಿಕುಂಟೆ ಮಠ ಹರಿಹರ ಗಣೇಶೋತ್ಸವದ ಇತಿಹಾಸದಲ್ಲಿ ಹೊಸ ಅಧ್ಯಾಯ ; ಐತಿಹಾಸಿಕ ರಾಜಭೀದಿ ಉತ್ಸವಕ್ಕೆ ಹರಿಹರದಲ್ಲಿ ಮುನ್ನುಡಿ ದಾವಣಗೆರೆ ‘ಆರೋಗ್ಯ ಸಂಜೀವಿ’ ಕಾಯ್ದೆಹೊಳ್ಳಿ ; ನಿಜದ ಬಿಸಿಲವೃತ್ತ” ಜಿಲ್ಲಾ ಮಟ್ಟದ ಶಟಲ್ ಬ್ಯಾಡ್ಮಿಂಟನ್‌ನಲ್ಲಿ ಇಂದಿರಾಗಾಂಧಿ ವಸತಿ ಶಾಲೆ ವಿದ್ಯಾರ್ಥಿಗಳ ಸಾಧನೆ ಸಾಲ ಮರುಪಾವತಿಸುವಂತೆ ಗ್ರಾಹಕರಿಗೆ ಮನವಿ
Menu
Davanagere News

ಹರಿಹರದ ಗ್ರೀನ್ ಸಿಟಿ ಬಡಾವಣೆಯಲ್ಲಿ ಯಾವುದೇ ಕಾನೂನು ತಕರಾರು ಇಲ್ಲ:ನ್ಯಾಯವಾದಿರಾಮಚಂದ್ರಕಲಾಲ್

January 1, 2024 3 years ago 1 min read

ದಾವಣಗೆರೆ : ಹರಿಹರದ ಹರಪನಹಳ್ಳಿ ರಸ್ತೆಯ ಗ್ರೀನ್ ಸಿಟಿ ಬಡಾವಣೆಯಲ್ಲಿ ಯಾವುದೇಕಾನೂನು ತಕರಾರು ಇಲ್ಲ ಎಂದು ನ್ಯಾಯವಾದಿ ಜಯಪ್ರಕಾಶ್ ತಿಳಿಸಿದರು.

ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹರಿಹರದಲ್ಲಿದ್ದ ಮೈಸೂರು ಕಿರ್ಲೋಸ್ಕರ್ ಮುಚ್ಚಿದ ನಂತರದಲ್ಲಿ 2008ರಲ್ಲಿ ಗುಜರಾತ್ ಮೂಲದನಿಜಿನೋಯ್ ಟ್ರೇಡಿಂಗ್ ಕಂಪನಿಯಮಾಲಿಕರಾದ ರಘುಬಾಯ್ ಶಂಕರ್ ಬಾಯ್ ಪಟೇಲ್ ಅವರು 65 ಕೋಟಿರೂಪಾಯಿ ಮೊತ್ತಕ್ಕೆ 156. 34 ಎಕರೆ ಜಾಗವನ್ನು ಕಾನೂನು ಪ್ರಕಾರವೇ ಖರೀದಿ ಮಾಡಿದ್ದಾರೆ ಎಂದು ತಿಳಿಸಿದರು
ಜಾಗವನ್ನು ಖರೀದಿ ಮಾಡಿದ ನಂತರ ಉತ್ತಮ ಬಡಾವಣೆ ನಿರ್ಮಿಸಲಾಗಿದ್ದು ಅನೇಕರು ಮನೆಗಳ ಜಾಗ ನಿರ್ಮಾಣ ಮಾಡಿ ಕೊಂಡಿದ್ದಾರೆ. ಆದರೆ, ಈಚೆಗೆ 23.11, 23 ರಲ್ಲಿ ಪ್ರಾದೇಶಿಕ ಆಯುಕ್ತರು ಬಡಾವಣೆ ಯಲ್ಲಿ ಯಾವುದೇ ಕಾರ್ಯಗಳನ್ನು ಮಾಡದಂತೆ ಆದೇಶ ಮಾಡಿದ್ದಾರೆ. ಪ್ರಾದೇಶಿಕ ಆಯುಕ್ತರ ಆದೇಶವೇ ಕಾನೂನುಬಾಹಿರ ಎಂದು ತಿಳಿಸಿದರು. ಕಾನೂನು ಪ್ರಕಾರವೇ ಉಚ್ಚ ನ್ಯಾಯಾಲಯದಿಂದ ನಿಯೋಜಿತಗೊಂಡ ಕ್ರಮ ಪರಿಸಮಾಪ್ತಿ ಅಧಿಕಾರಿಮೂಲಕವೇ ಖರೀದಿ ಮಾಡಿದ ನಂತರ ದೂಡಾಒಳಗೊಂಡಂತೆ ಸಂಬಂಧಿತ ಇಲಾಖೆಗಳಿಗೆ ಶುಲ್ಕನೋಂದಣಿ ಸಹ ಮಾಡಿದ್ದಾರೆ. ಉಚ್ಚ ನ್ಯಾಯಾಲಯವೂ ಜಾಗ ಖರೀದಿ ಪ್ರಕ್ರಿಯೆಯನ್ನು ಮಾನ್ಯತೆ ನೀಡಿದೆ ಆದರೂ ಅಪರಿಚಿತ ವ್ಯಕ್ತಿಯೊಬ್ಬರು ಇ- ಮೇಲ್ ಕಳಿಸಿದರು ಕಾರಣಕ್ಕೆ ಪ್ರಾದೇಶಿಕ ಆಯುಕ್ತರು ಯಾವುದೇ ಕ್ರಮ ತೆಗೆದು ಕೊಳ್ಳಬಾರದು ಎಂಬ ಆದೇಶ ನೀಡಿದ್ದಾರೆ. ಪ್ರಾದೇಶಿಕ ಆಯುಕ್ತರು ಉಚ್ಚನ್ಯಾಯಾಲಯದ ಆದೇಶದ ವಿರುದ್ದವಾಗಿ ಆದೇಶ ಹೊರಡಿಸಿದ್ದಾರೆ. ಅದನ್ನು ಪ್ರಶ್ನಿಸಿ ಉಚ್ಚ ನ್ಯಾಯಾಲಯದ ಮೊರೆ ಹೋದಾಗ ಬಡಾವಣೆಯಲ್ಲಿ ಯಾವುದೇ ತಕರಾರು ಇಲ್ಲ ಎಂದು ಪ್ರಾದೇಶಿಕ ಆಯುಕ್ತರ ಆದೇಶ ರದ್ದುಪಡಿಸಿದೆ. ಹಾಗಾಗಿ ನಿವೇಶನಗಳನ್ನು ಯಾವುದೇಆತಂಕವಿಲ್ಲದೆ ಖರೀದಿ ಮಾಡಬಹುದು ಎಂದು ತಿಳಿಸಿದರು. ಸುದ್ದಿಗೋಷ್ಟಿ ಯಲ್ಲಿ ನ್ಯಾಯವಾದಿರಾಮಚಂದ್ರಕಲಾಲ್, ಡಾ.ಸಿ.ಆ‌ರ್.ನಸೀರ್ ಅಹಮದ್, ಗೌಸ್ ಪೀರ್ ಹಮ್ ದರ್ದ್, ರಘುಬಾಯ್ ಶಂಕರ್ ಬಾಯ್ ಪಟೇಲ್ ಉಪಸ್ಥಿತರಿದ್ದರು.

Share: