Davanagere News
ಪ್ರಭಾಕರ್ ಭಟ್ ಕಲ್ಲಡ್ಕ ವಿರುದ್ಧ ಕ್ರಮಕ್ಕೆ ತಹಸೀಲ್ದಾರ್ ಗೆ ಮನವಿ
ಹರಿಹರ : ಮುಸ್ಲಿಂ ಮಹಿಳೆಯರಿಗೆ ಅವಮಾನ, ಲೈಂಗಿಕ ದೌರ್ಜನ್ಯಕ್ಕೆ ಪ್ರಚೋದನೆ, ಸಾರ್ವಜನಿಕವಾಗಿ ಬೆದರಿಕೆ, ಧರ್ಮಗಳ ಮಧ್ಯೆ ಗಲಭೆಗೆ ಪ್ರಚೋದನೆ ಆರೋಪ ಹೊತ್ತಿರುವ ಆರ್ಎಸ್ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ಇವರ ವಿರುದ್ಧ ದೂರು ದಾಖಲಿಸಲು ಆಗ್ರಹಿಸಿ ಹರಿಹರದ ಅಂಜುಮನ್ ಸಂಸ್ಥೆಯಿಂದ ಗ್ರೇಡ್-2 ತಹಶೀಲ್ದಾರ್ ಶಶಿಧರಯ್ಯ ಅವರಿಗೆ ಮನವಿ ನೀಡಲಾಯಿತು.
ಮುಸ್ಲಿಂ ಮಹಿಳೆಯರಿಗೆ ದಿನಕ್ಕೊಬ್ಬ ಗಂಡ, ಶಾಶ್ವತ ಗಂಡನನ್ನು ಕೊಟ್ಟಿದ್ದು ಮೋದಿ ಸರ್ಕಾರ ಹಾಗೂ ಇತ್ಯಾದಿ ಅವಾಚ್ಯ ಹಾಗೂ ಧರ್ಮನಿಂದನೆ, ಧರ್ಮಗಳ ಮಧ್ಯೆ ಸಂಘರ್ಷ ಉಂಟು ಮಾಡುವ ಭಾಷಣವನ್ನು ಶ್ರೀರಂಗಪಟ್ಟಣದಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಪ್ರಬಾಕರ ಭಟ್ ಆಡಿರುವುದು ಅಕ್ಷಮ್ಯ ಅಪರಾಧ ಎಂದು ಅಂಜುಮನ್ ಸಂಸ್ಥೆಯ ಅಧ್ಯಕ್ಷ ಸೈಯದ್ ಏಜಾಜ್ ಹೇಳಿದರು.
ಇಂತಹ ಹೇಳಿಕೆಯು ಸಾರ್ವಜನಿಕ ಸ್ಥಳದಲ್ಲಿ ಮಹಿಳೆಯರ ಬಗೆಗೆ ಅಶ್ಲೀಲವಾಗಿ ಮಾತನಾಡಿ, ಮಹಿಳೆಯರ ಘನತೆಗೆ ಧಕ್ಕೆಯುಂಟು ಮಾಡುವಂತಿದೆ. ಕೂಡಲೆ ಸರ್ಕಾರ ಮತ್ತು ಪೊಲೀಸ್ ಇಲಾಖೆ ಇವರ ವಿರುದ್ಧ ಕಾನೂನು ಕ್ರಮಕೈಗೊಳ್ಳಲು ಅಂಜುಮನ್ ಸಂಸ್ಥೆಯು ಆಗ್ರಹಿಸುತ್ತಿರುವುದ್ದಾಗಿ ತಿಳಿಸಿದರು.
ನಗರಸಭಾ ಸದಸ್ಯ ಎಂ.ಎಸ್.ಬಾಬುಲಾಲ್, ಅಂಜುಮನ್ ಸಂಸ್ಥೆ ಉಪಾಧ್ಯಕ್ಷ ಎಂ.ಎಂ.ಡಿ ಫಾರೂಖ್, ಕಾರ್ಯದರ್ಶಿ ಆಸಿಫ್ ಜುನೈದಿ, ಖಜಾಂಚಿ ಫಯಾಜ್ ಅಹ್ಮದ್, ನಿರ್ದೇಶಕರಾದ ಸೈಯದ್ ಸನಾಉಲ್ಲಾ, ಸೈಯದ್ ರಹಮಾನ್, ಮೊಹ್ಮದ್ ಅಲಿ ಯೆನೆಪೋಯ, ಅಪ್ರೋಜ್ ಖಾನ್, ಸೈಯದ್ ಆಶ್ಪಾಖ್, ಗೌಸ್ ಪೀರ್, ಸರ್ಫರಾಜ್, ಪ್ರಕುಲ್ಲಾ, ಎಸ್.ಎಂ.ಸಾದಿಖ್ ಮುಂತಾದವರು ಉಪಸ್ಥಿತರಿದ್ದರು.
