Sunday, 18 Oct 2026
Breaking
ಎಸ್‌ಎಸ್‌ಕೆ ಸಮಾಜದ ದಸರಾ ಆಚರಣೆ ಅತ್ಯಂತ ವಿಶೇಷ ವಾಗಿದ್ದು ಭಕ್ತಿ, ಶ್ರದ್ಧೆ ಇತರಿಗೆ ಮಾರ್ಗದರ್ಶಿ ; ಶಾಸಕ ಹರೀಶ್  ಕನ್ನಡ ಸಾಹಿತ್ಯದಲ್ಲಿ ವೈಚಾರಿಕ, ಸಾಂಸ್ಕೃತಿಕ ಹಾಗೂ ಸಾಮಾಜಿಕ ಮೌಲ್ಯಗಳ ಸಮನ್ವಯವಿದೆ ; ಡಾ. ಎ.ಬಿ. ರಾಮಚಂದ್ರಪ್ಪ ಶಿಕ್ಷಣ ಸಂಸ್ಥೆ, ರಿಯಲ್ ಎಸ್ಟೇಟ್ ವ್ಯವಹಾರವಿಲ್ಲ ; ಸೇವೆ ಮಾಡುವ ಉದ್ದೇಶದಿಂದ ಚುನಾವಣೆಗೆ ಸ್ಪರ್ಧೆ: ಶಶಿ ಹುಲಿಕುಂಟೆ ಮಠ ಹರಿಹರ ಗಣೇಶೋತ್ಸವದ ಇತಿಹಾಸದಲ್ಲಿ ಹೊಸ ಅಧ್ಯಾಯ ; ಐತಿಹಾಸಿಕ ರಾಜಭೀದಿ ಉತ್ಸವಕ್ಕೆ ಹರಿಹರದಲ್ಲಿ ಮುನ್ನುಡಿ ದಾವಣಗೆರೆ ‘ಆರೋಗ್ಯ ಸಂಜೀವಿ’ ಕಾಯ್ದೆಹೊಳ್ಳಿ ; ನಿಜದ ಬಿಸಿಲವೃತ್ತ” ಜಿಲ್ಲಾ ಮಟ್ಟದ ಶಟಲ್ ಬ್ಯಾಡ್ಮಿಂಟನ್‌ನಲ್ಲಿ ಇಂದಿರಾಗಾಂಧಿ ವಸತಿ ಶಾಲೆ ವಿದ್ಯಾರ್ಥಿಗಳ ಸಾಧನೆ ಸಾಲ ಮರುಪಾವತಿಸುವಂತೆ ಗ್ರಾಹಕರಿಗೆ ಮನವಿ
Menu
Davanagere News

ನಿವೇಶನ, ಹಕ್ಕು ಪತ್ರಕ್ಕಾಗಿ 41ನೇ ವಾರ್ಡ್ ನಾಗರೀಕರ ಪ್ರತಿಭಟನೆ ಅಹವಾಲು ಆಲಿಸಿದ ಪಾಲಿಕೆ ಆಯುಕ್ತೆ : ಭರವಸೆ

October 1, 2023 3 years ago 1 min read
ದಾವಣಗೆರೆ : ನಗರದ ರಾಮನಗರ ಬಳಿಯ ಇಂಡಸ್ಟ್ರಿಯಲ್ ಏರಿಯಾದಲ್ಲಿ ನಿವೇಶನ ಮತ್ತು ಹಕ್ಕು ಪತ್ರಕ್ಕಾಗಿ ಆಗ್ರಹಿಸಿ 41ನೇ ವಾರ್ಡ್ ನಾಗರೀಕರು ಶನಿವಾರದಿಂದ ರಸ್ತೆಗಿಳಿದು ಹೋರಾಟ ನಡೆಸುತ್ತಿದ್ದು, ಪ್ರತಿಭಟನಾ ಸ್ಥಳಕ್ಕೆ ಭಾನುವಾರ ಪಾಲಿಕೆ ಸದಸ್ಯ ಪಾಮೇನಹಳ್ಳಿ ನಾಗರಾಜ್ ಹಾಗೂ ಪಾಲಿಕೆ ಆಯುಕ್ತರಾದ ರೇಣುಕಾ ಭೇಟಿ ನೀಡಿ ಪ್ರತಿಭಟನಾ ನಿರತರ ಅಹವಾಲು ಆಲಿಸಿದರು.
ಈ ವೇಳೆ ಪ್ರತಿಭಟನಾ ನಿರತ ವಾರ್ಡ್ ನ ನಾಗರಿಕರು, ಈಗಾಗಲೇ ನೀವೇಶನ ಕಟ್ಟಿಕೊಂಡವರಿಗೆ ಹಕ್ಕುಪತ್ರ ಹಾಗೂ ನಿವೇಶನವೇ ಇಲ್ಲದೇ ಗುಡಿಸಲಿನಲ್ಲಿ ವಾಸವಿರುವವರಿಗೆ ನೀವೇಶನ ಕಲ್ಪಿಸಿಕೊಡುವಂತೆ ಮನವಿ ಮಾಡಿದರು.
ಇದಕ್ಕೆ ಸ್ಪಂದಿಸಿದ ಪಾಲಿಕೆ ಆಯುಕ್ತರಾದ ರೇಣುಕಾ, ನಿವೇಶನ ನೀಡಲು ಈ ಏರಿಯಾದಲ್ಲಿ ಒಂದೂವರೆ ಎಕರೆ ಖಾಲಿ ಜಾಗ ಇದೆ ಎನ್ನಲಾಗಿದೆ. ಈಬಗ್ಗೆ ಸರ್ವೇ ಮೂಲಕ ಪರಿಶೀಲನೆ ನಡೆಸಿ ಫಲಾನುಭವಿಗಳಿಗೆ‌ ಶೀಘ್ರವೇ ನಿವೇಶನ ಮತ್ತು ಹಕ್ಕು ಪತ್ರವನ್ನು ನೀಡಲಾಗುವುದು ಎಂದು ಭರವಸೆ ನೀಡಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಪಾಲಿಕೆ ಆಯುಕ್ತರಾದ ರೇಣುಕಾ, ಪಾಲಿಕೆ ಎಂದಿಗೂ‌ ಜನರ ಪರವಾಗಿ ಇರುತ್ತದೆ. ಇಲ್ಲಿನ ನಾಗರೀಕರು ಹಲವಾರು ವರ್ಷಗಳಿಂದ ಗುಡಿಸಲಿನಲ್ಲಿ ವಾಸವಿದ್ದಾರೆ. ಸುಮಾರು 200 ಜನರಿಗೆ ನಿವೇಶನಗಳಿಲ್ಲ. ನಿವೇಶನ ಇದ್ದವರಿಗೆ ಹಕ್ಕುಪತ್ರಗಳಿಲ್ಲ. ಸಮಸ್ಯೆಗಳನ್ನು ಆಲಿಸಲಾಗಿದೆ. ಆದಷ್ಟು ಬೇಗ ಪಾಲಿಕೆ ಸದಸ್ಯರ ಜೊತೆ ಚರ್ಚಿಸಿ ಜಿಲ್ಲಾ ಉಸ್ತುವಾರಿ ಸಚಿವ‌ರ ಗಮನಕ್ಕೆ ತಂದು ಬೇಡಿಕೆಗಳನ್ನು ಈಡೇರಿಸಲಾಗುವುದು‌ ಎಂದು ಭರವಸೆ‌ ನೀಡಿದರು.
31ನೇ ವಾರ್ಡ್ ಪಾಲಿಕೆ ಸದಸ್ಯೆ ಪಾಮೇನಹಳ್ಳಿ ನಾಗರಾಜ್ ಮಾತನಾಡಿ, ನಿವೇಶನ ಹಂಚಿಕೆ ಹಾಗೂ ಹಕ್ಕು ಪತ್ರಗಳನ್ನು ಸೂಕ್ತ ಚರ್ಚೆ ನಡೆಸಿ, ನ್ಯಾಯ ಸಮ್ಮತವಾಗಿ ದೊರಕುಸುವುದಾಗಿ ಹೇಳಿದರು.
ಇದಕ್ಕೂ ಮುನ್ನ 41 ವಾರ್ಡಿನ ನಗರ ಪಾಲಿಕೆ ಬಿಜೆಪಿ ಸದಸ್ಯರಾದ ಗೀತಾ ನಾಗರಾಜ್ ಅವರು ಸ್ಥಳಕ್ಕೆ ಆಗಮಿಸಿ ಸಮಸ್ಯೆ ಆಲಿಸಿಲ್ಲ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ ಆರೋಗ್ಯ ಸಾಯಿ ಸಮಿತಿ ಅಧ್ಯಕ್ಷರಾದ ಮೀನಾಕ್ಷಿ ಜಗದೀಶ್, ದುಗ್ಗಪ್ಪ, ಶಂಕ್ರಪ್ಪ, ನಾಗಪ್ಪ, ಮಹದೇವಪ್ಪ, ಲಿಂಗರಾಜು, ನೀಲಮ್ಮ, ನಾಗವೇಣಿ, ಹೇಮಾವತಿ, ರವಿಕುಮಾರ್, ರಮೇಶ್, ಹೇಮಂತ್, ಸುಜಾತ, ಚೌಡಮ್ಮ, ಪೂರ್ಣಿಮಾ, ರಂಜಿತಾ, ನೇತ್ರಾವತಿ, ಅಕ್ಕಮಹಾದೇವಿ ಈ ವೇಳೆ ಪೊಲೀಸ್ ಸಿಬ್ಬಂದಿಗಳು ಸೇರಿದಂತೆ ಅನೇಕರು ಇದ್ದರು.
Share: