Saturday, 17 Oct 2026
Breaking
ಎಸ್‌ಎಸ್‌ಕೆ ಸಮಾಜದ ದಸರಾ ಆಚರಣೆ ಅತ್ಯಂತ ವಿಶೇಷ ವಾಗಿದ್ದು ಭಕ್ತಿ, ಶ್ರದ್ಧೆ ಇತರಿಗೆ ಮಾರ್ಗದರ್ಶಿ ; ಶಾಸಕ ಹರೀಶ್  ಕನ್ನಡ ಸಾಹಿತ್ಯದಲ್ಲಿ ವೈಚಾರಿಕ, ಸಾಂಸ್ಕೃತಿಕ ಹಾಗೂ ಸಾಮಾಜಿಕ ಮೌಲ್ಯಗಳ ಸಮನ್ವಯವಿದೆ ; ಡಾ. ಎ.ಬಿ. ರಾಮಚಂದ್ರಪ್ಪ ಶಿಕ್ಷಣ ಸಂಸ್ಥೆ, ರಿಯಲ್ ಎಸ್ಟೇಟ್ ವ್ಯವಹಾರವಿಲ್ಲ ; ಸೇವೆ ಮಾಡುವ ಉದ್ದೇಶದಿಂದ ಚುನಾವಣೆಗೆ ಸ್ಪರ್ಧೆ: ಶಶಿ ಹುಲಿಕುಂಟೆ ಮಠ ಹರಿಹರ ಗಣೇಶೋತ್ಸವದ ಇತಿಹಾಸದಲ್ಲಿ ಹೊಸ ಅಧ್ಯಾಯ ; ಐತಿಹಾಸಿಕ ರಾಜಭೀದಿ ಉತ್ಸವಕ್ಕೆ ಹರಿಹರದಲ್ಲಿ ಮುನ್ನುಡಿ ದಾವಣಗೆರೆ ‘ಆರೋಗ್ಯ ಸಂಜೀವಿ’ ಕಾಯ್ದೆಹೊಳ್ಳಿ ; ನಿಜದ ಬಿಸಿಲವೃತ್ತ” ಜಿಲ್ಲಾ ಮಟ್ಟದ ಶಟಲ್ ಬ್ಯಾಡ್ಮಿಂಟನ್‌ನಲ್ಲಿ ಇಂದಿರಾಗಾಂಧಿ ವಸತಿ ಶಾಲೆ ವಿದ್ಯಾರ್ಥಿಗಳ ಸಾಧನೆ ಸಾಲ ಮರುಪಾವತಿಸುವಂತೆ ಗ್ರಾಹಕರಿಗೆ ಮನವಿ
Menu
Davanagere News

ದ್ವೇಷದ ನಂಜು ಇಡೀ ದೇಶಕ್ಕೆ ಹಬ್ಬಿದೆ. ಮತೀಯ ಹಿಂಸಾಚಾರ, ಜಾನಾಂಗೀಯ ಕಲಹ, ಕೋಮು ದ್ವೇಷ ದೇಶವನ್ನು ಹೊತ್ತಿ ಉರಿಸುತ್ತಿದೆ: ಎಸ್.ಡಿ.ಪಿ.ಐ

August 4, 2023 3 years ago 1 min read

ದಾವಣಗೆರೆ ಜಿಲ್ಲೆ ಹರಿಹರ ತಾಲ್ಲೂಕು : 04 ಆಗಸ್ಟ್ 2023: ಸಂಘಪರಿವಾರ ಹಬ್ಬಿದ ದ್ವೇಷದ ನಂಜಿನ ಪರಿಣಾಮ ಇಡೀ ದೇಶವೇ ಹೊತ್ತಿ ಉರಿಯುತ್ತಿದೆ. ಮಣಿಪುರದಲ್ಲಿ ಜಾನಾಂಗೀಯ ಕಲಹ, ಹರಿಯಾಣಾದಲ್ಲಿ ಕೋಮು ಗಲಭೆ, ಮಹಾರಾಷ್ಟ್ರದಲ್ಲಿ RPF ಯೋಧನ ಕೋಮು ದ್ವೇಷಕ್ಕೆ ರೈಲಿನಲ್ಲಿ ಅಮಾಯಕರ ಬಲಿ ಸೇರಿದಂತೆ ದೇಶದ ನಾನಾ ಭಾಗಗಳಲ್ಲಿ ಹಿಂಸಾಚಾರ ಹಬ್ಬಿಕೊಂಡಿದೆ. ಇಂತಹ ಸನ್ನಿವೇಶಕ್ಕೆ ಕಾರಣವಾದ ಬಿಜೆಪಿ ಮತ್ತು ಸಂಘಪರಿವಾರದ ದ್ವೇಷದ ರಾಜಕಾರಣವನ್ನು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ತನ್ನ ಪತ್ರಿಕಾ ಪ್ರಕಟಣೆ ಮೂಲಕ ತೀವ್ರವಾಗಿ ಖಂಡಿಸಿದೆ.

ಬಿಜೆಪಿ ಪಕ್ಷಕ್ಕೆ ಹಿಂಸಾಚಾರ, ಕೋಮು ದ್ವೇಷ ರಾಜಕೀಯ ಅಸ್ತ್ರ ಆ ಕಾರಣಕ್ಕಾಗಿಯೇ ಮೂರು ತಿಂಗಳಿಂದ ಮಣಿಪುರ ಹೊತ್ತಿ ಉರಿಯುತ್ತಿದ್ದರೂ ಅಲ್ಲಿ ಶಾಂತಿ ಮರಳುವಂತೆ ಮಾಡುವ ನಿಟ್ಟಿನಲ್ಲಿ ಒಂದೇ ಒಂದು ಪ್ರಯತ್ನವನ್ನೂ ಮೋದಿ ನೇತೃತ್ವದ ಸರ್ಕಾರ ಮಾಡಲಿಲ್ಲ. ಪ್ರಾಧಾನಿಯಾಗು ಮೋದಿ ಅಲ್ಲಿನ ಜನರಿಗೆ ಶಾಂತಿ ಕಾಪಾಡಿ ಎಂದು ಹೇಳುವ ತಮ್ಮ ಕನಿಷ್ಠ ಕರ್ತವ್ಯವನ್ನೂ ಪಾಲಿಸಲಿಲ್ಲ. ಮಣಿಪುರ ಎಂಬ ಪದ ಬಳಸಲೂ ಹಿಂಜರಿದರು. ಇಬ್ಬರು ಮಹಿಳೆಯರ ಬೆತ್ತಲೆ ಮೆರವಣಿಗೆ ಮತ್ತು ಅತ್ಯಾಚಾರ ಪ್ರಕರಣ ಹೊರ ಬಂದಾಗ ವಿಧಿ ಇಲ್ಲದೆ ಮಣಿಪುರದ ಬಗ್ಗೆ ಮೋದಿ ಮಾತನಾಡಿದರಾದರೂ ಅವರ ಮಾತಿನಲ್ಲಿ ಘಟನೆಯ ಕುರಿತು ವಿಷಾದ ಅಥವಾ ನೋವಿಗಿಂತ ಹೆಚ್ಚಾಗಿ, ಈ ಘಟನೆಯಿಂದ ತಮ್ಮ ಇಮೇಜಿಗೆ ಧಕ್ಕೆಯಾಗಿದೆ ಅನ್ನುವ ಸಿಟ್ಟು ಎದ್ದು ಕಾಣುತ್ತಿತ್ತು.

ಇನ್ನು ಹರಿಯಾಣಾದಲ್ಲಿ ಕಳೆದ 4 ದಿನಗಳಿಂದ ನಡೆಯುತ್ತಿರುವ ಹಿಂಸಾಚಾರದಲ್ಲಿ ಗೋ ರಕ್ಷಣೆ ಹೆಸರಿನಲ್ಲಿ ಅಮಾಯಕರನ್ನು ಕೊಂದು ತಲೆ ಮರೆಸಿಕೊಂಡಿರುವ ಮೋನು ಮನೇಸರ್ ಹರಿಬಿಟ್ಟ ಪ್ರಚೋದನಕಾರಿ ವೀಡಿಯೊ ಮತ್ತು ಅಲ್ಪಸಂಖ್ಯಾತ ಸಮುದಾಯಕ್ಕೆ ಆತ ಹಾಕಿದ ಸವಾಲು ಮುಖ್ಯ ಕಾರಣ. ಇಷ್ಟೆಲ್ಲ ಬೆಳವಣಿಗೆಗಳು ನಡೆದಿದ್ದರೂ ಅಲ್ಲಿನ ಪೊಲೀಸರು ಸೂಕ್ತ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲು ವಿಫಲರಾದರು. ಅಲ್ಲಿ ಮಸೀದಿಗಳಿಗೆ ಬೆಂಕಿ ಹಚ್ಚಿ ಒಬ್ಬರು ಇಮಾಮರನ್ನು ಕೊಲೆ ಮಾಡಲಾಗಿದೆ ಮತ್ತು 5 ಮಂದಿ ಅಮಾಯಕರು ಜೀವ ತೆತ್ತಿದ್ದಾರೆ.

ದೇಶದ ಎಲ್ಲೆಡೆ ಹಬ್ಬಿದ ದ್ವೇಷದ ವಿಷ ರೈಲ್ವೆ ಭದ್ರತಾ ಸಿಬ್ಬಂದಿಯ ತಲೆಗೂ ಹೊಕ್ಕಿದ್ದು ದುರಂತ. ಮಹಾರಾಷ್ಟ್ರದಲ್ಲಿ RPF ಯೋಧ ಚೇತನ್ ಸಿಂಗ್ ರೈಲಿನಲ್ಲಿ ಕರ್ತವ್ಯ ನಿರ್ವಹಿಸುವ ಸಂದರ್ಭದಲ್ಲಿ ತನ್ನ ಉನ್ನತ ಅಧಿಕಾರಿಯನ್ನು ಗುಂಡಿಕ್ಕಿ ಕೊಂದು ನಂತರ, ಭೋಗಿಯಿಂದ ಭೋಗಿಗೆ ಹೋಗಿ ಮುಸ್ಲಿಂ ಪ್ರಯಾಣಿಕರನ್ನು ಹುಡುಕಿ 3 ಜನ ಅಮಾಯಕ ಮುಸ್ಲಿಂ ಪ್ರಯಾಣಿಕರನ್ನು ಕೊಂದಿದ್ದಾನೆ. ಇದು ದೇಶದಲ್ಲಿ ಸಂಘಪರಿವಾರಾದ ಜೊತೆ ಸೇರಿಕೊಂಡು ಗೋದಿ ಮಾಧ್ಯಮ ಹಬ್ಬಿರುವ ದ್ವೇಷದ ಪರಿಣಾಮ ಎಂಬುದು ಹತ್ಯಾಕಾಂಡದ ನಂತರ ಯೋಧ ಮಾತನಾಡಿರುವ ಮಾತುಗಳಿಂದ ಸ್ಪಷ್ಟವಾಗುತ್ತದೆ.

ಈ ಎಲ್ಲ ಘಟನೆಗಳನ್ನು ಎಸ್.ಡಿ.ಪಿ.ಐ ಪಕ್ಷ ತೀವ್ರವಾಗಿ ಖಂಡಿಸುತ್ತದೆ ಮತ್ತು ಇಂತಹ ಕೃತ್ಯಗಳಿಗೆ ಕಾರಣರಾದವರ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಆಗ್ರಹಿಸುತ್ತದೆ ಎಂದು ಪಕ್ಷದ ಪ್ರಕಟಣೆಯಲ್ಲಿ ತಿಳಿಸಿದೆ.

ಈ ಸಮಯದಲ್ಲಿ ದಾವಣಗೆರೆ ಜಿಲ್ಲಾ ಅಧ್ಯಕ್ಷರಾದ ಇಸ್ಮಾಯಿಲ್ ಜಬಿವುಲ್ಲಾ ,ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾದ ಸೈಯದ್ ಅಶ್ಫಾಕ್,ಜಿಲ್ಲಾ ಕೋಶಾಧಿಕಾರಿ ಆದ ಎಆರ್ ತಾಹಿರ್, ಜಿಲ್ಲಾ ಸಮಿತಿ ಸದಸ್ಯರು ಹಾಗೂ ಹರಿಹರ ವಿಧಾನಸಭಾ ಕ್ಷೇತ್ರ ಸಮಿತಿ ಸದಸ್ಯರು , ಕಾರ್ಯಕರ್ತರು ಉಪಸ್ಥಿತರಿದ್ದರು

Share: