Saturday, 17 Oct 2026
Breaking
ಎಸ್‌ಎಸ್‌ಕೆ ಸಮಾಜದ ದಸರಾ ಆಚರಣೆ ಅತ್ಯಂತ ವಿಶೇಷ ವಾಗಿದ್ದು ಭಕ್ತಿ, ಶ್ರದ್ಧೆ ಇತರಿಗೆ ಮಾರ್ಗದರ್ಶಿ ; ಶಾಸಕ ಹರೀಶ್  ಕನ್ನಡ ಸಾಹಿತ್ಯದಲ್ಲಿ ವೈಚಾರಿಕ, ಸಾಂಸ್ಕೃತಿಕ ಹಾಗೂ ಸಾಮಾಜಿಕ ಮೌಲ್ಯಗಳ ಸಮನ್ವಯವಿದೆ ; ಡಾ. ಎ.ಬಿ. ರಾಮಚಂದ್ರಪ್ಪ ಶಿಕ್ಷಣ ಸಂಸ್ಥೆ, ರಿಯಲ್ ಎಸ್ಟೇಟ್ ವ್ಯವಹಾರವಿಲ್ಲ ; ಸೇವೆ ಮಾಡುವ ಉದ್ದೇಶದಿಂದ ಚುನಾವಣೆಗೆ ಸ್ಪರ್ಧೆ: ಶಶಿ ಹುಲಿಕುಂಟೆ ಮಠ ಹರಿಹರ ಗಣೇಶೋತ್ಸವದ ಇತಿಹಾಸದಲ್ಲಿ ಹೊಸ ಅಧ್ಯಾಯ ; ಐತಿಹಾಸಿಕ ರಾಜಭೀದಿ ಉತ್ಸವಕ್ಕೆ ಹರಿಹರದಲ್ಲಿ ಮುನ್ನುಡಿ ದಾವಣಗೆರೆ ‘ಆರೋಗ್ಯ ಸಂಜೀವಿ’ ಕಾಯ್ದೆಹೊಳ್ಳಿ ; ನಿಜದ ಬಿಸಿಲವೃತ್ತ” ಜಿಲ್ಲಾ ಮಟ್ಟದ ಶಟಲ್ ಬ್ಯಾಡ್ಮಿಂಟನ್‌ನಲ್ಲಿ ಇಂದಿರಾಗಾಂಧಿ ವಸತಿ ಶಾಲೆ ವಿದ್ಯಾರ್ಥಿಗಳ ಸಾಧನೆ ಸಾಲ ಮರುಪಾವತಿಸುವಂತೆ ಗ್ರಾಹಕರಿಗೆ ಮನವಿ
Menu
Davanagere News

ಅಂಜುಮನ್–ಎ-ಇಸ್ಲಾಮಿಯಾ ಸಂಸ್ಥೆಯ ಸಾಮಾನ್ಯ ಸಮಿತಿ ಸದಸ್ಯತ್ವಕ್ಕೆ ಅರ್ಜಿ ವಿತರಣೆ ಹಾಗೂ ಸ್ವೀಕಾರದ ಅವಧಿ ವಿಸ್ತರಣೆ

July 13, 2023 3 years ago 1 min read

ಹರಿಹರ: ನಗರದ ಅಂಜುಮನ್–ಎ-ಇಸ್ಲಾಮಿಯಾ ಸಂಸ್ಥೆಯ ಸಾಮಾನ್ಯ ಸಮಿತಿ ಸದಸ್ಯತ್ವಕ್ಕೆ ಅರ್ಜಿ ವಿತರಣೆ ಹಾಗೂ ಸ್ವೀಕಾರದ ಅವಧಿಯನ್ನು ಜು.20ರವರೆಗೆ ವಿಸ್ತರಣೆ ಮಾಡಲಾಗಿದೆ ಎಂದು ಜಿಲ್ಲಾ ವಕ್ಫ್ ಅಧಿಕಾರಿ ಸೈಯದ್ ಮೌಜಮ್ ಪಾಷಾ ತಿಳಿಸಿದರು.
ನಗರದ ಪತ್ರಿಕಾ ಭವನದಲ್ಲಿ ಗುರುವಾರ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಈ ಹಿಂದಿನ ಪ್ರಕಟಣೆ ಅನ್ವಯ ಜು.12ಕ್ಕೆ ಸದಸ್ಯತ್ವಕ್ಕೆ ಅರ್ಜಿ ಸಲ್ಲಿಸಲು ಕೊನೆ ದಿನವಾಗಿತ್ತು, ವಿವಿಧ ಮಸೀದಿಗಳ ಪದಾಧಿಕಾರಿಗಳು ಹಾಗೂ ಮುಸ್ಲಿಂ ಸಮುದಾಯದ ಮುಖಂಡರ ಕೋರಿಕೆ ಮೇರೆಗೆ ಅವಧಿ ವಿಸ್ತರಣೆ ಮಾಡಲಾಗಿದೆ.
ಹೊಸ ಪ್ರಕಟಣೆ ಅನ್ವಯ ಆ.8 ರಂದು ಸದಸ್ಯರ ಕರಡು ಪ್ರತಿ ಪ್ರಕಟಣೆ, ಆ.8 ಮತ್ತು 9 ರಂದು ಸದಸ್ಯರ ಕರಡು ಪ್ರತಿ ಕುರಿತು ಲಿಖಿತ ದೂರು, ಸಲಹೆ ಸಲ್ಲಿಸಲು ಅವಕಾಶ, ಆ.10 ರಂದು ಬೆಳಿಗ್ಗೆ 11ಕ್ಕೆ ಸದಸ್ಯರ ಕರಡು ಪ್ರತಿ ಕುರಿತು ಮೌಖಿಕ ದೂರು, ಸಲಹೆ ಹೇಳಲು ಅವಕಾಶ, ಆ.16ರಂದು ಸದಸ್ಯರ ಅಂತಿಮ ಪಟ್ಟಿ ಪ್ರಕಟಿಸಲಾಗುವುದೆಂದು ಅವರು ಮಾಹಿತಿ ನೀಡಿದರು.
ಈವರೆಗೆ 5100 ಅರ್ಜಿಗಳನ್ನು ವಿತರಿಸಿದ್ದು 2630 ಅರ್ಜಿಗಳನ್ನು ಅಗತ್ಯದಾಖಲೆ, ಶುಲ್ಕದೊಂದಿಗೆ ಸಲ್ಲಿಸಿದ್ದಾರೆ. ಸದಸ್ಯತ್ವ ಪೂರ್ಣಗೊಂಡ ನಂತರ ಈ ಸಮಿತಿಯಲ್ಲಿ ಇರುವ 21 ನಿರ್ದೇಶಕರ ಸ್ಥಾನಕ್ಕೆ ಚುನಾವಣೆ ನಡೆಯಲಿದೆ ಎಂದರು.
63 ಆಸ್ತಿಗಳು ವ್ಯಾಜ್ಯದಲ್ಲಿ: ಜಿಲ್ಲೆಯಲ್ಲಿ ವಕ್ಫ್ ಮಂಡಳಿಗೆ ಸೇರಿದ 730 ಆಸ್ತಿಗಳಿವೆ, ಈ ಪೈಕಿ 667 ಆಸ್ತಿಗಳ ಮಾಲಿಕತ್ವ ಪರಿಪೂರ್ಣವಾಗಿವೆ, 63 ಆಸ್ತಿಗಳ ಮಾಲಿಕತ್ವದ ಕುರಿತು ಪ್ರಕರಣಗಳು ವಿವಿಧ ನ್ಯಾಯಾಲಯಗಳಲ್ಲಿ ವಿಚಾರಣೆ ಹಂತದಲ್ಲಿವೆ ಎಂದು ಪ್ರಶ್ನೆಗೆ ಉತ್ತರಿಸಿದರು.
ಹರಿಹರ ಅಂಜುಮನ್ ಸಂಸ್ಥೆ ವ್ಯಾಪ್ತಿಯ ವಕ್ಫ್ ಆಸ್ತಿಗಳ ಪೈಕಿ ಅಂದಾಜು 30 ಎಕರೆ ಒಡೆತನಕ್ಕೆ ಸಂಬಂಧಿಸಿ ಪ್ರಕರಣ ಜಿಲ್ಲಾದಿಕಾರಿ ಇವರ ನ್ಯಾಯಾಲಯದಲ್ಲಿ ವಿಚಾರಣಾ ಹಂತದಲ್ಲಿದೆ ಎಂದು ಹೇಳಿದರು.
ಪತ್ರಿಕಾಗೋಷ್ಟಿಯಲ್ಲಿ ವಕ್ಫ್ ಜಿಲ್ಲಾ ಸಮಿತಿ ನಿರೀಕ್ಷಕ ಸೈಯದ್ ಜಾಕೀರ್ ಹುಸೇನ್, ಅಂಜುಮನ್ ಸಮಿತಿ ಹಂಗಾಮಿ ಸಮಿತಿ ಸದಸ್ಯರಾದ ಸೈಯದ್ ಮುನೀರ್ ಅಹ್ಮದ್, ಸೈಯದ್ ಇಮ್ತಿಯಾಜ್ ಸಾಬ್ ಹಾಗೂ ಇತರರಿದ್ದರು.

Share: