Saturday, 17 Oct 2026
Breaking
ಎಸ್‌ಎಸ್‌ಕೆ ಸಮಾಜದ ದಸರಾ ಆಚರಣೆ ಅತ್ಯಂತ ವಿಶೇಷ ವಾಗಿದ್ದು ಭಕ್ತಿ, ಶ್ರದ್ಧೆ ಇತರಿಗೆ ಮಾರ್ಗದರ್ಶಿ ; ಶಾಸಕ ಹರೀಶ್  ಕನ್ನಡ ಸಾಹಿತ್ಯದಲ್ಲಿ ವೈಚಾರಿಕ, ಸಾಂಸ್ಕೃತಿಕ ಹಾಗೂ ಸಾಮಾಜಿಕ ಮೌಲ್ಯಗಳ ಸಮನ್ವಯವಿದೆ ; ಡಾ. ಎ.ಬಿ. ರಾಮಚಂದ್ರಪ್ಪ ಶಿಕ್ಷಣ ಸಂಸ್ಥೆ, ರಿಯಲ್ ಎಸ್ಟೇಟ್ ವ್ಯವಹಾರವಿಲ್ಲ ; ಸೇವೆ ಮಾಡುವ ಉದ್ದೇಶದಿಂದ ಚುನಾವಣೆಗೆ ಸ್ಪರ್ಧೆ: ಶಶಿ ಹುಲಿಕುಂಟೆ ಮಠ ಹರಿಹರ ಗಣೇಶೋತ್ಸವದ ಇತಿಹಾಸದಲ್ಲಿ ಹೊಸ ಅಧ್ಯಾಯ ; ಐತಿಹಾಸಿಕ ರಾಜಭೀದಿ ಉತ್ಸವಕ್ಕೆ ಹರಿಹರದಲ್ಲಿ ಮುನ್ನುಡಿ ದಾವಣಗೆರೆ ‘ಆರೋಗ್ಯ ಸಂಜೀವಿ’ ಕಾಯ್ದೆಹೊಳ್ಳಿ ; ನಿಜದ ಬಿಸಿಲವೃತ್ತ” ಜಿಲ್ಲಾ ಮಟ್ಟದ ಶಟಲ್ ಬ್ಯಾಡ್ಮಿಂಟನ್‌ನಲ್ಲಿ ಇಂದಿರಾಗಾಂಧಿ ವಸತಿ ಶಾಲೆ ವಿದ್ಯಾರ್ಥಿಗಳ ಸಾಧನೆ ಸಾಲ ಮರುಪಾವತಿಸುವಂತೆ ಗ್ರಾಹಕರಿಗೆ ಮನವಿ
Menu
Davanagere News

ಜೋಗ-ಶಿರಸಿ ಕೆಎಸ್‍ಆರ್‍ಟಿಸಿ ಸಾರಿಗೆ ವ್ಯವಸ್ಥೆ

July 7, 2023 3 years ago 1 min read
ದಾವಣಗೆರೆ; ಜುಲೈ. 7 True Media Kannada: ದಾವಣಗೆರೆ ಹಾಗೂ ಹರಿಹರರಿಂದ ಜೋಗ ಮತ್ತು ಶಿರಸಿಗೆ ಜುಲೈ 16 ರಿಂದ ಪ್ರತಿ ಭಾನುವಾರಗಳಂದು ಪ್ರಯಾಣಿಕರಿಗೆ ವಿಶೇಷ ಪ್ಯಾಕೇಜ್ ಸಾರಿಗೆ ವ್ಯವಸ್ಥೆಯಡಿ ಸೌಲಭ್ಯ ಕಲ್ಪಿಸಲಾಗಿದೆ.
ಬೆಳಿಗ್ಗೆ 7 ಗಂಟೆಗೆ ದಾವಣಗೆರೆಯಿಂದ ಹೊರಟು 10.30 ಕ್ಕೆ ಶಿರಸಿ, ಮಧ್ಯಾಹ್ನ 12 ಗಂಟೆಗೆ ಶಿರಸಿಯಿಂದ ಹೊರಟು 1.30 ಕ್ಕೆ ಜೋಗ, ಸಂಜೆ 4.30 ಕ್ಕೆ ಜೋಗದಿಂದ ಹೊರಟು ರಾತ್ರಿ 8 ಗಂಟೆಗೆ ದಾವಣಗೆರೆ ತಲುಪುವುದು. ಎರಡೂ ಕಡೆ ಸೇರಿ ನೇರ ಪ್ರಯಾಣಿಕರಿಗೆ ರೂ.600 ಮತ್ತು ಮಕ್ಕಳಿಗೆ ರೂ.450 ಪ್ರಯಾಣ ದರ ಹಾಗೂ ಹರಿಹರದಿಂದ ಬೆಳಿಗ್ಗೆ 7.30 ಗಂಟೆಗೆ ಹೊರಟು 10.30 ಕ್ಕೆ ಶಿರಸಿ, ಮಧ್ಯಾಹ್ನ 12 ಗಂಟೆಗೆ ಶಿರಸಿಯಿಂದ ಹೊರಟು 1.30 ಕ್ಕೆ ಜೋಗ, ಸಂಜೆ 4.30 ಕ್ಕೆ ಜೋಗದಿಂದ ಹೊರಟು ರಾತ್ರಿ 7.30 ಗಂಟೆಗೆ ದಾವಣಗೆರೆ ತಲುಪುವುದು. ಎರಡೂ ಕÀಡೆ ಸೇರಿ ನೇರ ಪ್ರಯಾಣಿಕರಿಗೆ ರೂ.575 ಮತ್ತು ಮಕ್ಕಳಿಗೆ ರೂ.430 ಪ್ರಯಾಣ ದರ ಇರುತ್ತದೆ.
ಮುಂಗಡ ಬುಕ್ಕಿಂಗ್ ಮಾಡಲು ಬುಕ್ಕಿಂಗ್ ಕೌಂಟರ್ ನಲ್ಲಿ ಅವಕಾಶ ಕಲ್ಪಿಸಲಾಗಿದೆ ಎಂದು ಕರಾರಸಾ ನಿಗಮದ ದಾವಣಗೆರೆ ವಿಭಾಗೀಯ ನಿಯಂತ್ರಣಾಧಿಕಾರಿ ತಿಳಿಸಿದ್ದಾರೆ.
Share: