Uncategorized
ವರನಟ ಡಾ.ರಾಜಕುಮಾರ ಜಯಂತಿ ಸರಳ ಆಚರಣೆ
April 24, www.truemediakannada.in, ಬಳ್ಳಾರಿ, ಕನ್ನಡದ ಖ್ಯಾತ ವರನಟ ಡಾ.ರಾಜಕುಮಾರ ಅವರ ಜಯಂತಿಯನ್ನು ಸರಳವಾಗಿ ಶನಿವಾರ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಕಚೇರಿಯಲ್ಲಿ ಆಚರಿಸಲಾಯಿತು.
ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಬಿ.ಕೆ.ರಾಮಲಿಂಗಪ್ಪ ಅವರು ನಟ ಡಾ.ರಾಜಕುಮಾರ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ನಮನ ಸಲ್ಲಿಸಿದರು.
ಈ ಸಂದರ್ಭದಲ್ಲಿ ಇಲಾಖೆಯ ಪ್ರಥಮ ದರ್ಜೆ ಸಹಾಯಕ ವಿ.ಸಿ.ಗುರುರಾಜ್, ಸಿಬ್ಬಂದಿಗಳಾದ ವಿಜಯಕುಮಾರ್, ರೋಜಮ್ಮ, ವಿ.ಹನುಮಂತ, ವೈ.ಮಲ್ಲೇಶಪ್ಪ, ಮೈಲಾರಿಲಿಂಗಪ್ಪ, ನವೀನಕುಮಾರ್, ಉಮ್ಮೆ ಅಸ್ಮ ಕೆ.ಎಸ್, ಸುಷ್ಮಾ ಕೆ. ಸೇರಿದಂತೆ ಇತರರು ಇದ್ದರು.
ಕೋವಿಡ್ ಹಿನ್ನೆಲೆಯಲ್ಲಿ ಈ ಬಾರಿ ಜಯಂತಿಯನ್ನು ಅತ್ಯಂತ ಸರಳವಾಗಿ ಆಚರಿಸಲಾಗಿದೆ.
