Friday, 16 Oct 2026
Breaking
ಕನ್ನಡ ಸಾಹಿತ್ಯದಲ್ಲಿ ವೈಚಾರಿಕ, ಸಾಂಸ್ಕೃತಿಕ ಹಾಗೂ ಸಾಮಾಜಿಕ ಮೌಲ್ಯಗಳ ಸಮನ್ವಯವಿದೆ ; ಡಾ. ಎ.ಬಿ. ರಾಮಚಂದ್ರಪ್ಪ ಶಿಕ್ಷಣ ಸಂಸ್ಥೆ, ರಿಯಲ್ ಎಸ್ಟೇಟ್ ವ್ಯವಹಾರವಿಲ್ಲ ; ಸೇವೆ ಮಾಡುವ ಉದ್ದೇಶದಿಂದ ಚುನಾವಣೆಗೆ ಸ್ಪರ್ಧೆ: ಶಶಿ ಹುಲಿಕುಂಟೆ ಮಠ ಹರಿಹರ ಗಣೇಶೋತ್ಸವದ ಇತಿಹಾಸದಲ್ಲಿ ಹೊಸ ಅಧ್ಯಾಯ ; ಐತಿಹಾಸಿಕ ರಾಜಭೀದಿ ಉತ್ಸವಕ್ಕೆ ಹರಿಹರದಲ್ಲಿ ಮುನ್ನುಡಿ ದಾವಣಗೆರೆ ‘ಆರೋಗ್ಯ ಸಂಜೀವಿ’ ಕಾಯ್ದೆಹೊಳ್ಳಿ ; ನಿಜದ ಬಿಸಿಲವೃತ್ತ” ಜಿಲ್ಲಾ ಮಟ್ಟದ ಶಟಲ್ ಬ್ಯಾಡ್ಮಿಂಟನ್‌ನಲ್ಲಿ ಇಂದಿರಾಗಾಂಧಿ ವಸತಿ ಶಾಲೆ ವಿದ್ಯಾರ್ಥಿಗಳ ಸಾಧನೆ ಸಾಲ ಮರುಪಾವತಿಸುವಂತೆ ಗ್ರಾಹಕರಿಗೆ ಮನವಿ ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ತಂಬಾಕು ಮಾರಾಟ: ದಾಳಿ,ದಂಡ ವಿಧಿಸಿದ ಅಧಿಕಾರಿಗಳು
Menu
Uncategorized

ಶ್ರೀ ಮಹೇಶ್ವರ ಜಾತ್ರೆಗೆ ಚಾಲನೆ ; ಇಂದು ಬ್ರಾಹ್ಮಿ ಮುಹೂರ್ತದಲ್ಲಿ ಅಭಿಷೇಕ ಪೂಜಾ ಕಾರ್ಯಕ್ರಮ

January 8, 2024 3 years ago 1 min read
  1. ಹರಿಹರ : ಪ್ರತಿ ವರ್ಷದಂತೆ ಈ ಬಾರಿಯೂ ನಗರದ ಶ್ರೀ ಹರಿಹರೇಶ್ವರ ದೇವಸ್ಥಾನದ ಹಿಂಭಾಗ ತುಂಗಭದ್ರಾ ನದಿ ತಟದಲ್ಲಿ ರುವ ಶ್ರೀ ಸಂಗಮೇಶ್ವರ ದೇವಸ್ಥಾನದ ಜಾತ್ರೆ ಮಹೋತ್ಸವಕ್ಕೆ ಸೋಮವಾರ ಚಾಲನೆ ನೀಡಲಾಯಿತು.ಇಂದು ಬ್ರಾಹ್ಮಿಮುಹೂರ್ತ ದಲ್ಲಿ ಸ್ವಾಮಿಗೆ ವಿಶೇಷ ಅಭಿಷೇಕ ಪೂಜಾ ಕಾರ್ಯಕ್ರಮ ನಡೆಯಲಿದೆ.
    ಶ್ರೀ ಸಂಗಮೇಶ್ವರ ದೇವಸ್ಥಾನ ಆವರಣದಲ್ಲಿ ಪ್ರತಿ ವರ್ಷದಂತೆ ಈ ಬಾರಿಯೂ ನಡೆಯಲಿರುವ ಶ್ರೀ ಮಹೇಶ್ವರ ಜಾತ್ರೆ ಅಂಗವಾಗಿ ನಗರದ ದೇವಸ್ಥಾನ ರಸ್ತೆಯಲ್ಲಿನ ರೇಣುಕಾ ಮಂದಿರದಿಂದ ಶ್ರೀ ಮಹೇಶ್ವರ ಸ್ವಾಮಿ ಪಲ್ಲಕ್ಕಿ ಮಹೋತ್ಸವದ ಮೆರವಣಿಯು ಸಡಗರ ಸಂಭ್ರಮದಿಂದ ಮತ್ತು ಶ್ರಧ್ದಾ ಭಕ್ತಿಯಿಂದ ಸಮಾಳ, ಡ್ರಮ್ ಸೆಟ್ , ಬ್ಯಾಂಡ್ ಸೆಟ್  ಸೇರಿದಂತೆ ವಿವಿಧ ಕಲಾ ಮೇಳಗಳು ಮೆರಗನ್ನು ನೀಡಿದವು.
   ಪಲ್ಲಕ್ಕಿ ಮಹೋತ್ಸವವು ರೇಣುಕಾ ಮಂದಿರದಿಂದ ಪ್ರಾರಂಭ ಗೊಂಡು, ದೇವಸ್ಥಾನ ರಸ್ತೆ, ನಡವಲಪೇಟೆ, ಮುಖ್ಯರಸ್ತೆ, ಗಾಂಧಿ ವೃತ್ತ,, ರಾಣಿ  ಚೆನ್ನಮ್ಮ ವೃತ್ತ, ಶಿವಮೊಗ್ಗ ರಸ್ತೆ ಮೂಲಕ ಸಂಚರಿಸಿ ತುಂಗಭದ್ರಾ ನದಿದಂಡೆ ಮೇಲಿರುವ ಸಂಗಮೇಶ್ವರ ದೇವಾಲಯ ಆವರಣಕ್ಕೆ ಅಂತ್ಯಗೊಂಡಿತು. ನಂತರ ಭಕ್ತರಿಗೆ ಅನ್ನ ಹಾಲು ಬೆಲ್ಲ ಮತ್ತು ಬಾಳೆಹಣ್ಣಿನ ಸಿಹಿ ಪ್ರಸಾದ ನಡೆಯಿತು.ಇಂದು ಭಕ್ತರಿಗೆ ಅನ್ನ ಸಂತರ್ಪಣೆ ದಾಸೋಹ ನಡೆಯಲಿದೆ ಎಂದು ತಿಳಿದು ಬಂದಿದೆ.
    ಈ ಸಮಯದಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾದ ಅಧ್ಯಕ್ಷ ಡಿ.ಜಿ.ಶಿವಾನಂದಪ್ಪ, ಕಾರ್ಯದರ್ಶಿ ವೀರೇಶ್ ಯಾದ ವಾಡ, ಉಪಾಧ್ಯಕ್ಷ ಟಿ.ಜೆ. ಮುರುಗೇಶಪ್ಪ, ಚೇತನ್ ಮೂರ್ಕಲ್,  ಜಿ.ಕೆ. ವೀರಣ್ಣ, ಫೈನಾನ್ಸ್ ಮಂಜುನಾಥ್ ಅಂಗಡಿ, ಹೆಚ್, ವಿ. ಸಂಜಯ್ಕ ,ಕರಿಬಸಪ್ಪ ಕಂಚಿಕೇರಿ, ಹೊಳಗಡ್ಡಿ ಸಿದ್ದೇಶ್,  ಜಿ.ಕೆ. ಮಲ್ಲಿಕಾರ್ಜುನ, ಕಂಚಿಕೇರಿ ಸಿದ್ದೇಶ್, ಕತ್ತಲಗೇರಿ ಶಿವಯೋಗಿ, ಶೇಕರಪ್ರ ಹೊಟೆಲ್, ಗುರಮೂರ್ತಿ, ಕೊಟ್ರೇಶ್, ಕುಂಬಾರ ಕರಿಬಸಪ್ಪ, ರೇವಣಸಿದ್ದಪ್ಪ ಬಾತಿ, ಮುರುಗೇಶಪ್ಪ, ಬಸವರಾಜಯ್ಯ, ಹಾಲಸ್ವಾಮಿ ಗುತ್ತೂರು, ಅರುಣ್ ಕುಮಾರ್, ಪರುಶುರಾಮ್, ಶೇಖರಪ್ಪ, ಪತ್ರಕರ್ತರ ಎಂ. ಚಿದಾನಂದ ಕಂಚಿಕೇರಿ, ಬಿಳೆಬಾಳ ಚಂದ್ರಶೇಖರ್, ಇತರರು ಹಾಜರಿದ್ದರು,
Share: