Sunday, 18 Oct 2026
Breaking
ಎಸ್‌ಎಸ್‌ಕೆ ಸಮಾಜದ ದಸರಾ ಆಚರಣೆ ಅತ್ಯಂತ ವಿಶೇಷ ವಾಗಿದ್ದು ಭಕ್ತಿ, ಶ್ರದ್ಧೆ ಇತರಿಗೆ ಮಾರ್ಗದರ್ಶಿ ; ಶಾಸಕ ಹರೀಶ್  ಕನ್ನಡ ಸಾಹಿತ್ಯದಲ್ಲಿ ವೈಚಾರಿಕ, ಸಾಂಸ್ಕೃತಿಕ ಹಾಗೂ ಸಾಮಾಜಿಕ ಮೌಲ್ಯಗಳ ಸಮನ್ವಯವಿದೆ ; ಡಾ. ಎ.ಬಿ. ರಾಮಚಂದ್ರಪ್ಪ ಶಿಕ್ಷಣ ಸಂಸ್ಥೆ, ರಿಯಲ್ ಎಸ್ಟೇಟ್ ವ್ಯವಹಾರವಿಲ್ಲ ; ಸೇವೆ ಮಾಡುವ ಉದ್ದೇಶದಿಂದ ಚುನಾವಣೆಗೆ ಸ್ಪರ್ಧೆ: ಶಶಿ ಹುಲಿಕುಂಟೆ ಮಠ ಹರಿಹರ ಗಣೇಶೋತ್ಸವದ ಇತಿಹಾಸದಲ್ಲಿ ಹೊಸ ಅಧ್ಯಾಯ ; ಐತಿಹಾಸಿಕ ರಾಜಭೀದಿ ಉತ್ಸವಕ್ಕೆ ಹರಿಹರದಲ್ಲಿ ಮುನ್ನುಡಿ ದಾವಣಗೆರೆ ‘ಆರೋಗ್ಯ ಸಂಜೀವಿ’ ಕಾಯ್ದೆಹೊಳ್ಳಿ ; ನಿಜದ ಬಿಸಿಲವೃತ್ತ” ಜಿಲ್ಲಾ ಮಟ್ಟದ ಶಟಲ್ ಬ್ಯಾಡ್ಮಿಂಟನ್‌ನಲ್ಲಿ ಇಂದಿರಾಗಾಂಧಿ ವಸತಿ ಶಾಲೆ ವಿದ್ಯಾರ್ಥಿಗಳ ಸಾಧನೆ ಸಾಲ ಮರುಪಾವತಿಸುವಂತೆ ಗ್ರಾಹಕರಿಗೆ ಮನವಿ
Menu
Uncategorized

ಜಲ ಮೂಲಗಳ ಸಂರಕ್ಷಣೆಯಿಂದ ಅಂತರ್ಜಲ ಅಭಿವೃದ್ಧಿ ಸಾಧ್ಯ. ಕೆ.ಬಿ ಅಶೋಕ್ ನಾಯ್ಕ್.

April 20, 2021 5 years ago 1 min read

ಏ-20-2021, www.truemediakannada.in, ಶಿವಮೊಗ್ಗ, ಇತ್ತೀಚಿನ ದಿನಗಳಲ್ಲಿ ನೀರಿನ ಜಲಗಳು ಕಣ್ಮರೆಯಾಗಿ ನೀರಿನ ಅಭಾವ ಹೆಚ್ಚಾಗಿ ತುಂಬಾ ಸಂಕಷ್ಟದ ದಿನಗಳನ್ನ ಎದುರಿಸುತ್ತಿದ್ದೇವೆ. ಇದರ ಬಗ್ಗೆ ಎಚ್ಚರಿಕೆ ವಹಿಸದಿದ್ದರೆ ಮುಂದಿನ ದಿನಗಳಲ್ಲಿ ಅಪಾಯದ ದಿನಗಳನ್ನು ಎದುರಿಸಬೇಕಾಗುತ್ತದೆ ಎಂದು ಶಿವಮೊಗ್ಗ ಗಾಮಾಂತರ ಶಾಸಕ ಕೆ.ಬಿ ಅಶೋಕ್ ನಾಯ್ಕ್ ಹೇಳಿದರು.
ಅವರು ಜಿಲ್ಲಾ ಪಂಚಾಯತ್ ಶಿವಮೊಗ್ಗ, ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಪಿಳ್ಳಂಗೆರೆ ಗ್ರಾಮದ ಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನದಲ್ಲಿ ಜಲಶಕ್ತಿ ಸಂರಕ್ಷಣೆ ಕಾರ್ಯಕ್ರಮಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪರವರಿಂದ ಚಾಲನೆಗೊಂಡ ಜಿಲ್ಲಾ ಮಟ್ಟದ ಜಲಶಕ್ತಿ ಅಭಿಯಾನದಡಿ ಕಲ್ಯಾಣಿ ಕಾಮಗಾರಿ ಪುನಶ್ಚೇತನ ಪ್ರಾರಂಭೋತ್ಸವ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಮನುಷ್ಯ ತನ್ನ ಸ್ವಾರ್ಥಕ್ಕಾಗಿ ಪರಿಸರವನ್ನು ಸಂಪೂರ್ಣವಾಗಿ ನಾಶ ಮಾಡಲು ಹೊರಟಿದ್ದಾನೆ. ಈ ಸಂದರ್ಭದಲ್ಲಿ ಜಲ ಸಂಪೂರ್ಣವಾಗಿ ಭೂಮಿಯ ತಳಭಾಗವನ್ನು ಸೇರುತ್ತಿದೆ, ಎμÉ್ಟೀ ಆಳವಾಗಿ ಕೊಳವೆ ಬಾವಿಗಳನ್ನ ಕೊರೆದರೂ ನೀರು ಲಭ್ಯವಾಗದ ಪರಿಸ್ಥಿತಿಯಲ್ಲಿ ಇದ್ದೇವೆ ಹಾಗಾಗಿ ಜಲ ಮೂಲಗಳನ್ನು ರಕ್ಷಿಸಬೇಕು, ಮುಂದಿನ ಪೀಳಿಗೆಯನ್ನು ನೀರಿನ ಮೂಲಗಳನ್ನ ಸಂರಕ್ಷಿಸಬೇಕು. ನೀರಿನ ಜರಿಗಳನ್ನ, ಕೆರೆಗಳನ್ನ, ಸಂರಕ್ಷಿಸಬೇಕು. ಇದು ನಮ್ಮ ಆದ್ಯ ಕರ್ತವ್ಯ, ಇದು ಮುಂದಿನ ಪೀಳಿಗೆಗೆ ಸಂದೇಶವನ್ನು ನೀಡಿದಂತಾಗುತ್ತದೆ. ಹಾಗಾಗಿ ನಾವೆಲ್ಲರು ಈ ಕಾರ್ಯಕ್ರಮದಲ್ಲಿ ಭಾಗವಹಿಸಬೇಕು ಎಂದು ಇವರು ಮಾತನಾಡಿದರು.
ಇದೇ ಸಂದರ್ಭದಲ್ಲಿ ಗ್ರಾಮದ ಅಭಿವೃದ್ಧಿಗೆ ಸಂಬಂಧಿಸಿದಂತೆ ಗ್ರಾಮಸ್ಥರಿಂದ ಶಾಸಕರು ಮನವಿ ಪತ್ರವನ್ನು ಸ್ವೀಕರಿಸಿದರು.
ಜಿಲ್ಲೆಯಲ್ಲಿ 865 ಚಿಕ್ಕ ಚಿಕ್ಕ ಜಲ ಮೂಲಗಳನ್ನು ಗುರುತಿಸಲಾಗಿದ್ದು ಕುಂಟೆ, ಗೋಕಟ್ಟೆ, ಕಟ್ಟೆ, ಕೆರೆ, ಕಲ್ಯಾಣಿ ಇವುಗಳನ್ನ ಗುರುತಿಸಿ ಸ್ವಚ್ಚಗೊಳಿಸಿ “ಕ್ಯಾಚ್ ದಿ ರೈನ್” ವೆನ್ ಇಟೀಸ್, ವೇರ್ ಇಟ್ ಈಸ್, ತತ್ವದೊಂದಿಗೆ ಕೇಂದ್ರ ಸರ್ಕಾರದ ಪ್ರಸ್ತುತ ಯೋಜನೆಯಾಗಿದ್ದು ಮಳೆ ನೀರನ್ನು ಆದಷ್ಟು ಜಲಮೂಲಗಳನ್ನು ಶುಚಿಗೊಳಿಸಿ ಹಿಡಿದಿಟ್ಟುಕೊಲ್ಲುವುದೇ ಈ ಕಾರ್ಯಕ್ರಮದ ಉದ್ದೇಶವಾಗಿದ್ದು ನಮಗೆ ಮತ್ತು ನಮ್ಮ ಮುಂದಿನ ಪೀಳಿಗೆಯವರ ಉತ್ತಮ ಜೀವನಕ್ಕೆ ದಾರಿ ಕಲ್ಪಿಸಬೇಕು, ಈಗಾಗಲೇ ಜಿಲ್ಲೆ ಎಲ್ಲಾ ತಾಲ್ಲೂಕುಗಳಲ್ಲಿ ಆಯಾ ಶಾಸಕರ ಅಧ್ಯಕ್ಷತೆಯಲ್ಲಿ ಈ ಕಾರ್ಯಕ್ರಮವು ಉದ್ಘಾಟನೆ ಮಾಡಲಾಗಿದ್ದು ಜಿಲ್ಲಾ ಮಟ್ಟದಲ್ಲಿ ಇದೇ ಮೊದಲ ಬಾರಿಗೆ ಶಾಸಕರು ಮತ್ತು ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ಉದ್ಘಾಟನೆ ಮಾಡಲಾಗಿದೆ ಎಂದು ಜಿಲ್ಲಾ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಎಂ.ಎಲ್ ವೈಶಾಲಿಯವರು ಹೇಳಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತಿ ಸದಸ್ಯ ಕೆ.ಈ ಕಾಂತೇಶ್, ತಾಲ್ಲೂಕು ಪಂಚಾಯತಿ ಅಧ್ಯಕ್ಷೆ ಗೀತಾ ಜಯಶೇಖರ್, ತಾಲ್ಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ಕಲ್ಲಣ್ಣ, ತಾಲ್ಲೂಕು ಪಂಚಾಯತಿ ಸದಸ್ಯೆ ವನಜಾಕ್ಷಿ ಸುರೇಶ್, ಪಿ.ಡಿ.ಓ ಹಾಲೇಶ್, ಸಿ.ಪಿ.ಓ ಉಮಾ ಸದಾಶಿವ, ಪಿಳ್ಳಂಗೆರೆ ಗ್ರಾಮ ಪಂಚಾಯತಿ ಅಧ್ಯಕ್ಷೆ ಎಂ.ಕೆ. ನಿರ್ಮಲಾ ಉಪಸ್ಥಿತರಿದ್ದರು.

Share: