Sunday, 18 Oct 2026
Breaking
ಎಸ್‌ಎಸ್‌ಕೆ ಸಮಾಜದ ದಸರಾ ಆಚರಣೆ ಅತ್ಯಂತ ವಿಶೇಷ ವಾಗಿದ್ದು ಭಕ್ತಿ, ಶ್ರದ್ಧೆ ಇತರಿಗೆ ಮಾರ್ಗದರ್ಶಿ ; ಶಾಸಕ ಹರೀಶ್  ಕನ್ನಡ ಸಾಹಿತ್ಯದಲ್ಲಿ ವೈಚಾರಿಕ, ಸಾಂಸ್ಕೃತಿಕ ಹಾಗೂ ಸಾಮಾಜಿಕ ಮೌಲ್ಯಗಳ ಸಮನ್ವಯವಿದೆ ; ಡಾ. ಎ.ಬಿ. ರಾಮಚಂದ್ರಪ್ಪ ಶಿಕ್ಷಣ ಸಂಸ್ಥೆ, ರಿಯಲ್ ಎಸ್ಟೇಟ್ ವ್ಯವಹಾರವಿಲ್ಲ ; ಸೇವೆ ಮಾಡುವ ಉದ್ದೇಶದಿಂದ ಚುನಾವಣೆಗೆ ಸ್ಪರ್ಧೆ: ಶಶಿ ಹುಲಿಕುಂಟೆ ಮಠ ಹರಿಹರ ಗಣೇಶೋತ್ಸವದ ಇತಿಹಾಸದಲ್ಲಿ ಹೊಸ ಅಧ್ಯಾಯ ; ಐತಿಹಾಸಿಕ ರಾಜಭೀದಿ ಉತ್ಸವಕ್ಕೆ ಹರಿಹರದಲ್ಲಿ ಮುನ್ನುಡಿ ದಾವಣಗೆರೆ ‘ಆರೋಗ್ಯ ಸಂಜೀವಿ’ ಕಾಯ್ದೆಹೊಳ್ಳಿ ; ನಿಜದ ಬಿಸಿಲವೃತ್ತ” ಜಿಲ್ಲಾ ಮಟ್ಟದ ಶಟಲ್ ಬ್ಯಾಡ್ಮಿಂಟನ್‌ನಲ್ಲಿ ಇಂದಿರಾಗಾಂಧಿ ವಸತಿ ಶಾಲೆ ವಿದ್ಯಾರ್ಥಿಗಳ ಸಾಧನೆ ಸಾಲ ಮರುಪಾವತಿಸುವಂತೆ ಗ್ರಾಹಕರಿಗೆ ಮನವಿ
Menu
Uncategorized

ಗ್ಯಾಂಗ್ ಸ್ಟಾರ್ ವಿಕಾಸ್ ದುಬೆ ಪೊಲೀಸರ ಎನ್ ಕೌಂಟರ್ ಗೆ ಬಲಿ

July 10, 2020 6 years ago 1 min read

ಗ್ಯಾಂಗ್ ಸ್ಟಾರ್ ವಿಕಾಸ್ ದುಬೆ ಉತ್ತರ ಪ್ರದೇಶದ ಕಾನ್ಪುರದಲ್ಲಿ ತನ್ನನ್ನು ಬಂಧಿಸಲು ಬಂದ ಪೊಲೀಸರ ಮೇಲೆ ಬೆಂಬಲಿಗರಿಂದ ದಾಳಿ ನಡೆಸಿ ಹತ್ಯೆ ಗೈದಿದ್ದ. ಈ ಘಟನೆ ನಡೆದ 6 ದಿನಗಳ ಬಳಿಕ ತಲೆಮರೆಸಿಕೊಂಡಿದ್ದ ವಿಕಾಸ್ ದುಬೆಯನ್ನು ಬಂದಿಸಿದ್ದರು ನಂತರ ಇಂದು ಪೊಲೀಸರ ಅಧೀನದಲ್ಲಿದ್ದ ವಿಕಾಸ್ ದುಬೆಯನ್ನು ಮಧ್ಯಪ್ರದೇಶದಿಂದ ಕಾನ್ಪುರಕ್ಕೆ ಕರೆತರಲಾಗುತ್ತಿತ್ತು. ಆ ವೇಳೆ ಸುರಿದ ಭಾರೀ ಮಳೆಗೆ ಅವರಿದ್ದ ವಾಹನ ಅಪಘಾತಕ್ಕೀಡಾಗಿದೆ. ಆಗ ವಿಕಾಸ್ ದುಬೆ ಗಾಯಗೊಂಡು ಬಿದ್ದ ಪೊಲೀಸರ ಬಳಿ ಇದ್ದ ಬಂದೂಕವನ್ನು ಕಿತ್ತುಕೊಂಡು ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿದ್ದಾನೆ. ಆ ವೇಳೆ ವಿಕಾಸ್ ದುಬೆಯನ್ನು ಪೊಲೀಸರು ಎನ್ ಕೌಂಟರ್ ಮಾಡಿದ್ದಾರೆ ಎನ್ನಲಾಗಿದೆ.

Share: