Friday, 16 Oct 2026
Breaking
ಕನ್ನಡ ಸಾಹಿತ್ಯದಲ್ಲಿ ವೈಚಾರಿಕ, ಸಾಂಸ್ಕೃತಿಕ ಹಾಗೂ ಸಾಮಾಜಿಕ ಮೌಲ್ಯಗಳ ಸಮನ್ವಯವಿದೆ ; ಡಾ. ಎ.ಬಿ. ರಾಮಚಂದ್ರಪ್ಪ ಶಿಕ್ಷಣ ಸಂಸ್ಥೆ, ರಿಯಲ್ ಎಸ್ಟೇಟ್ ವ್ಯವಹಾರವಿಲ್ಲ ; ಸೇವೆ ಮಾಡುವ ಉದ್ದೇಶದಿಂದ ಚುನಾವಣೆಗೆ ಸ್ಪರ್ಧೆ: ಶಶಿ ಹುಲಿಕುಂಟೆ ಮಠ ಹರಿಹರ ಗಣೇಶೋತ್ಸವದ ಇತಿಹಾಸದಲ್ಲಿ ಹೊಸ ಅಧ್ಯಾಯ ; ಐತಿಹಾಸಿಕ ರಾಜಭೀದಿ ಉತ್ಸವಕ್ಕೆ ಹರಿಹರದಲ್ಲಿ ಮುನ್ನುಡಿ ದಾವಣಗೆರೆ ‘ಆರೋಗ್ಯ ಸಂಜೀವಿ’ ಕಾಯ್ದೆಹೊಳ್ಳಿ ; ನಿಜದ ಬಿಸಿಲವೃತ್ತ” ಜಿಲ್ಲಾ ಮಟ್ಟದ ಶಟಲ್ ಬ್ಯಾಡ್ಮಿಂಟನ್‌ನಲ್ಲಿ ಇಂದಿರಾಗಾಂಧಿ ವಸತಿ ಶಾಲೆ ವಿದ್ಯಾರ್ಥಿಗಳ ಸಾಧನೆ ಸಾಲ ಮರುಪಾವತಿಸುವಂತೆ ಗ್ರಾಹಕರಿಗೆ ಮನವಿ ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ತಂಬಾಕು ಮಾರಾಟ: ದಾಳಿ,ದಂಡ ವಿಧಿಸಿದ ಅಧಿಕಾರಿಗಳು
Menu
ಹರಿಹರ

ಜಮಾಅತೆ ಇಸ್ಲಾಮಿ ಹಿಂದ್ ಕಾರ್ಯದರ್ಶಿ ಮಹಮ್ಮದ್ ಕುಂಞ ಹೇಳಿಕೆ: ಪ್ರವಾದಿ ಮುಹಮ್ಮದ್ ಮಾನವ ಕುಲದ ದಾರ್ಶನಿಕ

August 31, 2026 2 months ago 1 min read

ಹರಿಹರ: True Media Kannada ಜ್ಞಾನ, ವಿಜ್ಞಾನ, ತಂತ್ರಜ್ಞಾನ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಅಗಾಧವಾದ ಪ್ರಗತಿ ಸಾಧಿಸುತ್ತಾ ಜಗತ್ತು
ಒಂದು ಗ್ರಾಮ ಎಂಬ ಪರಿಕಲ್ಪನೆ ಬರುತ್ತಿದ್ದರೂ, ಇದೇ ಜಗತ್ತಿನಲ್ಲಿ ಜಾತಿ, ಧರ್ಮ, ವರ್ಣ, ಲಿಂಗದ ಹೆಸರಲ್ಲಿ
ಸಂಘರ್ಷ, ಧ್ವೇಷ, ಶೋಷಣೆ ನಡೆಯುತ್ತಿರುವುದು ವಿಪರ್ಯಾಸ ಎಂದು ಜಮಾಅತೆ ಇಸ್ಲಾಮಿ ಹಿಂದ್ ರಾಜ್ಯ
ಕಾರ್ಯದರ್ಶಿ ಮಹಮ್ಮದ್ ಕುಂಞ ಹೇಳಿದರು.
ನಗರದ ಕಾಟ್ವೆ ಭವನದಲ್ಲಿ ಜಮಾಅತೆ ಇಸ್ಲಾಮಿ ಹಿಂದ್ ಹಾಗೂ ರಾಬಿತಾ-ಎ-ಮಿಲ್ಲತ್ ಸಂಸ್ಥೆ ಆಶ್ರಯದಲ್ಲಿ
ಭಾನುವಾರ ನಡೆದ ‘ಕ್ರಾಂತಿಯ ಜ್ಯೋತಿ ಪ್ರವಾದಿ ಮುಹಮ್ಮದ್ ಸೀರತ್ ಅಭಿಮಾನ-2026’ ಸಮಾರಂಭ ಉದ್ಘಾಟಿಸಿ
ಅವರು ಮಾತನಾಡಿದರು.
ಸಮಾಜದಲ್ಲಿ ಸತ್ಯಕ್ಕಿಂತ, ಸುಳ್ಳು ವಿಜೃಂಬಿಸಿ ಕರುಣೆ, ಪ್ರೀತಿ, ವಾತ್ಸಲ್ಯದ ಭಾವನೆಗಳು ಇಲ್ಲದಂತಾಗಿದೆ.
ಮನಸ್ಸು ಮಲಿನವಾಗಿ ಕರುಣೆ ಎಂಬದು ಬತ್ತಿ ಹೋಗಿದೆ. ಒಬ್ಬ ವ್ಯಕ್ತಿ ಇನ್ನೊಬ್ಬ ಅಪರಿಚಿತ ವ್ಯಕ್ತಿಯನ್ನು
ಎದುರಾದರೆ ಭಯ, ಭೀತಿ ಉಂಟಾಗುವ ವಾತಾವರಣವಿದೆ ಎಂದರು.
ಜಗತ್ತಿನ ಎಲ್ಲಾ ನಿವಾಸಿಗಳು ಸೃಷ್ಟಿಕರ್ತನ ಸೃಷ್ಟಿ, ಒಂದೆ ಸಂತಾನದವರು, ಅವರೆಲ್ಲರನ್ನು ಸನ್ಮಾರ್ಗದಲ್ಲಿ
ಸಾಗುವಂತಾಗಬೇಕೆಂಬ ವಿಶಾಲ ಸಂಕಲ್ಪದಿಂದ ಪ್ರವಾದಿ ಮೊಹಮ್ಮದ್ ಅವರು ಪ್ರೇರೇಪಿಸಿದರು. ಹೆಣ್ಣು ಮಗು
ಹುಟ್ಟಿದಾಗ ಜೀವಂತ ಹೂಳುತ್ತಿದ್ದ ಅರಬ್ ದೇಶದ ಪರಿಸರದಲ್ಲಿ ಬದಲಾವಣೆಯ ಗಾಳಿ ಬೀಸಿದರು. ಅಂತಹ
ದಾರ್ಶನಿಕರ ಸಂದೇಶವನ್ನು ಮತ್ತೆ ಸ್ಮರಿಸುವ ಕೆಲಸವನ್ನು ಜಮಾಅತೆ ಇಸ್ಲಾಮಿ ಹಿಂದ್ ದೇಶಾದ್ಯಂತ ಈ ಅಭಿಯಾನದ
ಮೂಲಕ ಮಾಡುತ್ತಿದೆ ಎಂದರು.
ಸಾನಿಧ್ಯವಹಿಸಿದ್ದ ದಾವಣಗೆರೆ ಮುರುಘರಾಜೇಂದ್ರ ವಿರಕ್ತ ಮಠದ ಬಸವಪ್ರಭು ಶ್ರೀಗಳು ಮಾತನಾಡಿ, ಜಾತಿ,
ಧರ್ಮ, ಪಂಗಡವನ್ನು ಹರಿತವಾದ ಚಾಕುವಿನಿಂದ ಕತ್ತರಿಸುವವರೆ ಹೆಚ್ಚಾಗಿರುವ ಈ ವಾತಾವರಣದಲ್ಲಿ ಎಲ್ಲರ ನಡುವೆ
ಸಾಮರಸ್ಯ ಮೂಡಿಸಲು ಸೂಜಿಯಂತೆ ಕೆಲಸ ಮಾಡುವವರು ಬೇಕಾಗಿದ್ದಾರೆ. ಪ್ರವಾದಿ ಮೊಹಮ್ಮದರು ಜಗತ್ತಿನ ಶ್ರೇಷ್ಠ
ದಾರ್ಶನಿಕರಲ್ಲಿ ಒಬ್ಬರಾಗಿದ್ದರು ಎಂದರು.
ಫಾ. ಎಸ್.ಜೆ. ಜೀವನ್ ಮಾತನಾಡಿ, ಪ್ರವಾದಿ ಮುಹಮ್ಮದ್, ಯೇಸು ಕ್ರಿಸ್ತ, ಬುಧ್ದ, ಬಸವಣ್ಣರಂತಹ
ದಾರ್ಶನಿಕರ ಕುರಿತು ಯುವಜನತೆಗೆ ಪರಿಚಯಿಸಬೇಕು, ಸಂಪತ್ತು ಗಳಿಸುವ ಸಾಮರ್ಥ್ಯ ಬೆಳೆಸುವುದರ ಜೊತೆಗೆ
ಮಕ್ಕಳಲ್ಲಿ ಮಾನವೀಯ ಮೌಲ್ಯಗಳನ್ನು ಬಿತ್ತುವ ಜವಾಬ್ದಾರಿ ಪೋಷಕರದ್ದಾಗಿದೆ ಎಂದರು.
ಮಾಜಿ ಶಾಸಕ ಎಸ್.ರಾಮಪ್ಪ, ತಾಲ್ಲೂಕು ಪಂಚ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ನಂದಿಗಾವಿ
ಶ್ರೀನಿವಾಸ್, ಮರಾಠ ಸಮುದಾಯಗಳ ಅಭಿವೃದ್ಧಿ ನಿಗಮದ ಅಧ್ಯಕ್ಷ ಜಿ.ಎಚ್. ಮರಿಯೋಜಿರಾವ್, ವೈದ್ಯ ಗುಲಾಂ
ನಬಿ, ಜಮಾಅತೆ ಇಸ್ಲಾಮಿ ಹಿಂದ್ ಹರಿಹರ ಘಟಕದ ಅಧ್ಯಕ್ಷ ಅಬ್ದುಲ್ ಖಯ್ಯೂಂ ಎಕ್ಕೆಗೊಂದಿ, ರಾಬಿತಾ-ಎ-ಮಿಲತ್
ಸಂಸ್ಥೆ ಅಧ್ಯಕ್ಷ ಸೈಯದ್ ಮುನೀರ್, ಮಂಜುನಾಥ್ ಗುರೂಜಿ ಮಾತನಾಡಿದರು.
ಸಮಾರಂಭದಲ್ಲಿ ಪ್ರವಾದಿ ಮುಹಮ್ಮದರ ಕನ್ನಡ ಭಾಷಾ ಪುಸ್ತಕವನ್ನು ಗಣ್ಯರು ಬಿಡುಗಡೆಗೊಳಿಸಿದರು.
ಕಾರ್ಮಿಕ ಮುಖಂಡ ಎಚ್.ಕೆ. ಕೊಟ್ರಪ್ಪ ಅಧ್ಯಕ್ಷತೆಯನ್ನು ವಹಿಸಿದ್ದರು. ಪ್ರಾರ್ಥನೆ ಮೌಲನಾ ಕಬೀರ್ ಪ್ರಾರ್ಥಿಸಿದರು,
ಪರಸ್ಪರ ಸಂಸ್ಥೆ ಸಂಚಾಲಕ ಎ.ರಿಯಾಜ್ ಅಹ್ಮದ್ ನಿರೂಪಿಸಿದರು.

ಹರಿಹರದ ಕಾಟ್ವೆ ಭವನದಲ್ಲಿ ಭಾನುವಾರ ನಡೆದ ‘ಕ್ರಾಂತಿಯ ಜ್ಯೋತಿ ಪ್ರವಾದಿ ಮುಹಮ್ಮದ್ ಸೀರತ್
ಅಭಿಮಾನ-2026’ ಸಮಾರಂಭದಲ್ಲಿ ಪ್ರವಾದಿ ಮುಹಮ್ಮದರ ಪರಿಚಯದ ಪುಸ್ತಕಗಳನ್ನು ಗಣ್ಯರು ಬಿಡುಗಡೆ
ಮಾಡಿದರು. ಬಸವಪ್ರಭು ಶ್ರೀ, ಮಹಮ್ಮದ್ ಕುಂಞ ಹಾಗೂ ಇತರರು ಇದ್ದರು.

Share: