ಹರಿಹರ ಪಕ್ಷವನ್ನು ಬಲಪಡಿಸಿ ಗೆಲ್ಲಿಸಿ ಪಕ್ಷದಲ್ಲಿ ಬೇರ ಅಧಿಕಾರಕ್ಕೆ ಹೋರಾಟ ಮಾಡಬಹುದು ಪಕ್ಷಕ್ಕೆ ಮೋಸ ಮಾಡಿದರೆ ಏನು ಸಿಗುತ್ತದೆ ಎಂದು ವಿಧಾನ ಪರಿಷತ್ತಿನ ಆಗ್ನೇಯ ಶಿಕ್ಷಕರ ಕ್ಷೇತ್ರದ ಅಭ್ಯರ್ಥಿ ಡಿ.ಟಿ.ಶ್ರೀನಿವಾಸ್ ಅಭಿಪ್ರಾಯ
ಹರಿಹರ 12/01/2024:- ಪಕ್ಷವನ್ನು ಬಲಪಡಿಸಿ ಗೆಲ್ಲಿಸಿ ಪಕ್ಷದಲ್ಲಿ ಬೇರ ಅಧಿಕಾರಕ್ಕೆ ಹೋರಾಟ ಮಾಡಬಹುದು ಪಕ್ಷಕ್ಕೆ ಮೋಸ ಮಾಡಿದರೆ ಏನು ಸಿಗುತ್ತದೆ ಎಂದು ವಿಧಾನ ಪರಿಷತ್ತಿನ ಆಗ್ನೇಯ ಶಿಕ್ಷಕರ ಕ್ಷೇತ್ರದ ಅಭ್ಯರ್ಥಿ ಡಿ.ಟಿ.ಶ್ರೀನಿವಾಸ್ ಅಭಿಪ್ರಾಯ ಪಟ್ಟಿದ್ದಾರೆ ಅವರು ಇಂದು ಹರಿಹರ ನಗರದ ವಿವಿಧ ಶಾಲೆಗಳಿಗೆ ಭೇಟಿ ನೀಡಿ ನಂತರ ಹರಿಹರ ನಗರದ ಬ್ಲಾಕ್ ಕಾಂಗ್ರೆಸ್ ಕಚೇರಿ ಯಲ್ಲಿ ಪಕ್ಷದ ಮುಖಂಡ ರಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು ಕಾಂಗ್ರೆಸ್ ಪಕ್ಷದ ಈ ಕ್ಷೇತ್ರದಲ್ಲಿ ಒಮ್ಮಯೊ ಗೆಲ್ಲಲಿಲ್ಲಾ ಅದರೆ ಈ ಬಾರಿ ಗೆಲ್ಲುತ್ತದೆ ಕಾರಣ ಪಕ್ಷ ಸರ್ಕಾರಿ ನೌಕರರಿಗೆ ಒಲ್ಡ್ ಪಿಂಚಣಿ ಸೇರಿದಂತೆ ಅನೇಕ ಸೌಲಭ್ಯ ಒದಗಿಸಲು ಬದ್ಧವಾಗಿದೆ ಕಾಂಗ್ರೆಸ್ ಪಕ್ಷದ ಯೋಜನೆ ಗಳು ಪಕ್ಷದ ಕಾರ್ಯಕರ್ತರು ಪ್ರಚಾರ ಮಾಡಬೇಕು ಅದು ತಮ್ಮ ತಮ್ಮ ಮನೆ ಯಿಂದ ಪ್ರಾರಂಭ ಮಾಡಿ ಪಕ್ಷವನ್ನು ನಾವು ಬಲಪಡಿಸಿ ಪಕ್ಷ ನಮ್ಮನ್ನು ರಕ್ಷಣೆ ನೀಡುತ್ತದೆ ಸಮಾಜಿ ನ್ಯಾಯ ಕಾಂಗ್ರೆಸ್ ನಿಂದ ಮಾತ್ರ ಸಾಧ್ಯ ಎಂದ ಅವರು ಹರಿಹರದಲ್ಲಿ ನಂದಿಗಾವಿ ಶ್ರೀನಿವಾಸ ನವರ ಸೋಲು ಅಗಬಾರದಿತ್ತು ಇದು ಪಕ್ಷಕ್ಕೆ ಹಾಗೂ ಕಾರ್ಯಕರ್ತರಿಗೆ ನಷ್ಟ ಎಂದರು
ತುಮಕೂರು, ಚಿತ್ರದುರ್ಗ, ದಾವಣಗೆರೆ, ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳ 45 ವಿಧಾನಸಭಾ ಕ್ಷೇತ್ರಗಳು ಆಗ್ನೇಯ ಶಿಕ್ಷಕರ ಕ್ಷೇತ್ರದ ವ್ಯಾಪ್ತಿಗೆ ಬರಲಿವೆ. ಶಿಕ್ಷಣ ಸಂಸ್ಥೆ ನಡೆಸುತ್ತಾ ಬಂದಿದ್ದು, ಶಿಕ್ಷಕರ ಕಷ್ಟ ಸುಖಗಳನ್ನು ಅರಿತಿದ್ದೇನೆ. ಶಿಕ್ಷಕ ಮತದಾರರು ಈ ಬಾರಿ ಬದಲಾವಣೆ ಬಯಸಿದ್ದಾರೆ’ ಎಂದು ಶ್ರೀನಿವಾಸ್ ಹೇಳಿದರು.
ಕಳೆದ ಬಾರಿ ಆಗ್ನೇಯ ಪದವೀಧರ ಕ್ಷೇತ್ರದಿಂದ ಸ್ಪರ್ಧಿಸಿ ಸೋತಿದ್ದೇನೆ. ಕ್ಷೇತ್ರ ದೊಡ್ಡದಿದ್ದ ಕಾರಣ ಮತದಾರರನ್ನು ತಲುಪಲು ಸಾಧ್ಯವಾಗಲಿಲ್ಲ. ಈ ಬಾರಿ ಶಿಕ್ಷಕರು ಮತದಾರರಾಗಿದ್ದು, ಸಂಖ್ಯೆ ಕಡಿಮೆ ಇದೆ. ಹಾಗಾಗಿ ಶಿಕ್ಷಕರನ್ನು ನೇರವಾಗಿ ಭೇಟಿಯಾಗಿ ಮತ ಕೇಳುತ್ತೇನೆ. ಈಗಾಗಲೇ ಪ್ರವಾಸ ಆರಂಭಿಸಿರುವುದರಿಂದ ಸಹಕಾರಿಯಾಗಲಿದೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅದ್ಯಕ್ಷ ರಾದ ಎಲ್.ಬಿ.ಹನುಮಂತಪ್ಪ. ಎಂ.ಬಿ.ಅಬಿದ್ ಅಲಿ, ಮುಖಂಡರಾದ ಸತೀಶ್ ನಂದಿಗಾವಿ, ನಗರಸಭೆ ಸದಸ್ಯ ಬಾಬು ಲಾಲ್, ಶಾಹಿನಾ ದಾದಾಪಿರ್,ಸಂತೋಷ ನೋಟದ,ಉಮ್ಮರ್ , ಇಸ್ಮಾಯಿಲ್ ಆಶ್ರಯ ಸಮಿತಿ ಸದಸ್ಯ ಶಂಭು ಮಹರವಾಡೆ. ಅರೋಗ್ಯ ರಕ್ಷ ಸಮಿತಿ ಸದಸ್ಯ ಹಬೀಬ್ ,ಖುದ್ದುಸು,ವಿಜಯ, ಪ್ರಕಾಶ್ ಇಬ್ರಾಹಿಂ ಅರ್ ಇದ್ದರೂ
