ಮನರಂಜನೆ
ಬಾಹುಬಲಿ 2,ಕೆಜಿಎಫ್ 2 ದಾಖಲೆಗಳನ್ನು ಉಡೀಸ್ ಮಾಡಿದ ‘ಪಠಾಣ್’ ಶಾರುಖ್ ಖಾನ್ ಸಿನಿಮಾವೇ ನಂ.1
Mumbai: True Media Kannada Mar-08: ‘ಬಾದ್ಷಾ’ ಶಾರುಖ್ ಖಾನ್ ಅವರ ‘ಪಠಾಣ್’ ಸಿನಿಮಾವು ವಿಶ್ವಾದ್ಯಂತ ಸಾವಿರಾರು ಕೋಟಿ ರೂಪಾಯಿಗಳನ್ನು ಕಲೆ ಹಾಕಿ ದೊಡ್ಡ ದಾಖಲೆಯನ್ನೇ ಮಾಡಿದೆ. ಇದೀಗ ಈ ಸಿನಿಮಾವು ಭಾರತದಲ್ಲಿ ದಾಖಲೆಯ ಗಳಿಕೆ ಮಾಡಿದೆ. ಪ್ರಭಾಸ್, ರಾಣಾ ದಗ್ಗುಬಾಟಿ ಅಭಿನಯದ ‘ಬಾಹುಬಲಿ 2’ ಮತ್ತು ‘ರಾಕಿಂಗ್ ಸ್ಟಾರ್’ ಯಶ್ ಅವರ ‘ಕೆಜಿಎಫ್: ಚಾಪ್ಟರ್ 2’ ಸಿನಿಮಾಗಳ ದಾಖಲೆಯನ್ನು ಕೂಡ ‘ಪಠಾಣ್’ ಬ್ರೇಕ್ ಆಗಿದೆ,
ಈವರೆಗೂ ಅತೀ ಹೆಚ್ಚು ಕಲೆಕ್ಷನ್ ಮಾಡಿದ ಹಿಂದಿ ಸಿನಿಮಾ ಎಂಬ ಖ್ಯಾತಿ ‘ಬಾಹುಬಲಿ 2’ ಸಿನಿಮಾಗೆ ಇತ್ತು. ಆ ಸಿನಿಮಾವು ಒಟ್ಟು 510.99 ಕೋಟಿ ರೂಪಾಯಿಗಳನ್ನು ಗಳಿಸಿ, ಮೊದಲ ಸ್ಥಾನದಲ್ಲಿತ್ತು. ಆನಂತರದ ಸ್ಥಾನವನ್ನು ಯಶ್ ನಟನೆಯ ‘ಕೆಜಿಎಫ್: ಚಾಪ್ಟರ್ 2’ ಸಿನಿಮಾ ಆಕ್ರಮಿಸಿಕೊಂಡಿತ್ತು. ಆ ಸಿನಿಮಾದ ಹಿಂದಿ ವರ್ಷನ್ ಗಳಿಕೆಯೂ 434.70 ಕೋಟಿ ರೂಪಾಯಿಗಳಾಗಿತ್ತು. ಇದೀಗ ಶಾರುಖ್ ಖಾನ್ ಅವರ ‘ಪಠಾಣ್’ ಸಿನಿಮಾವು 528 ಕೋಟಿ ರೂ. ಗಳಿಸಿ ಎಲ್ಲ ದಾಖಲೆಗಳನ್ನು ಧೂಳೀಪಟ ಮಾಡಿದೆ.
