ಮನರಂಜನೆ
ಪುಷ್ಪ 2 ಸಿನಿಮಾ ರಿಲೀಸ್ಗೂ ಮುನ್ನ 1000 ಕೋಟಿ ಕಲೆಕ್ಷನ್! ಥಿಯೇಟ್ರಿಕಲ್ ರೈಟ್ಸ್ಗೆ ಡಿಮ್ಯಾಂಡ್
ಮಾ.8-True Media Kannada-ಅಲ್ಲು ಅರ್ಜುನ್ ಅಭಿನಯದ ಪುಷ್ಪ ಸಿನಿಮಾ ದೇಶದಾದ್ಯಂತ ಭರ್ಜರಿ ಕಲೆಕ್ಷನ್ ಮಾಡಿ ದಾಖಲೆ ಮಾಡಿತ್ತು. ಬಾಲಿವುಡ್ ಅಂಗಳದಲ್ಲೂ ಭಾರೀ ಸದ್ದು ಮಾಡಿದ್ದ ಪುಷ್ಪ ಸಿನಿಮಾ ಬಳಿಕ ಅಲ್ಲು ಅರ್ಜುನ್ ರೇಂಜ್ ಕೂಡ ಬದಲಾಗಿದೆ. ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಮಿಂಚುತ್ತಿದ್ದಾರೆ ಅಲ್ಲು ಅರ್ಜುನ್. ಪುಷ್ಪ 2 ಸಿನಿಮಾ ಶೂಟಿಂಗ್ ನಡೆಯುತ್ತಿದ್ದು, ರಿಲೀಸ್ಗೂ ಮುನ್ನವೇ ಭಾರೀ ಸೌಂಡ್ ಕೇಳಿಸುತ್ತಿದೆ.
ಪುಷ್ಪ 2 ಸಿನಿಮಾವನ್ನು ತೆಲುಗು, ತಮಿಳು, ಕನ್ನಡ, ಮಲಯಾಳಂ ಹಾಗೂ ಹಿಂದಿಯಲ್ಲಿ ರಿಲೀಸ್ ಮಾಡಲು ಚಿತ್ರತಂಡ ನಿರ್ಧರಿಸಿದೆ. ಏಕಾಕಾಲದಲ್ಲಿ ದೇಶ-ವಿದೇಶಗಳಲ್ಲಿ ಪುಷ್ಪ 2 ಚಿತ್ರ ರಿಲೀಸ್ ಆಗಲಿದೆ ಎನ್ನುವ ಮಾತುಗಳು ಕೂಡ ಕೇಳಿ ಬರುತ್ತಿದೆ
