Saturday, 17 Oct 2026
Breaking
ಎಸ್‌ಎಸ್‌ಕೆ ಸಮಾಜದ ದಸರಾ ಆಚರಣೆ ಅತ್ಯಂತ ವಿಶೇಷ ವಾಗಿದ್ದು ಭಕ್ತಿ, ಶ್ರದ್ಧೆ ಇತರಿಗೆ ಮಾರ್ಗದರ್ಶಿ ; ಶಾಸಕ ಹರೀಶ್  ಕನ್ನಡ ಸಾಹಿತ್ಯದಲ್ಲಿ ವೈಚಾರಿಕ, ಸಾಂಸ್ಕೃತಿಕ ಹಾಗೂ ಸಾಮಾಜಿಕ ಮೌಲ್ಯಗಳ ಸಮನ್ವಯವಿದೆ ; ಡಾ. ಎ.ಬಿ. ರಾಮಚಂದ್ರಪ್ಪ ಶಿಕ್ಷಣ ಸಂಸ್ಥೆ, ರಿಯಲ್ ಎಸ್ಟೇಟ್ ವ್ಯವಹಾರವಿಲ್ಲ ; ಸೇವೆ ಮಾಡುವ ಉದ್ದೇಶದಿಂದ ಚುನಾವಣೆಗೆ ಸ್ಪರ್ಧೆ: ಶಶಿ ಹುಲಿಕುಂಟೆ ಮಠ ಹರಿಹರ ಗಣೇಶೋತ್ಸವದ ಇತಿಹಾಸದಲ್ಲಿ ಹೊಸ ಅಧ್ಯಾಯ ; ಐತಿಹಾಸಿಕ ರಾಜಭೀದಿ ಉತ್ಸವಕ್ಕೆ ಹರಿಹರದಲ್ಲಿ ಮುನ್ನುಡಿ ದಾವಣಗೆರೆ ‘ಆರೋಗ್ಯ ಸಂಜೀವಿ’ ಕಾಯ್ದೆಹೊಳ್ಳಿ ; ನಿಜದ ಬಿಸಿಲವೃತ್ತ” ಜಿಲ್ಲಾ ಮಟ್ಟದ ಶಟಲ್ ಬ್ಯಾಡ್ಮಿಂಟನ್‌ನಲ್ಲಿ ಇಂದಿರಾಗಾಂಧಿ ವಸತಿ ಶಾಲೆ ವಿದ್ಯಾರ್ಥಿಗಳ ಸಾಧನೆ ಸಾಲ ಮರುಪಾವತಿಸುವಂತೆ ಗ್ರಾಹಕರಿಗೆ ಮನವಿ
Menu
Harihar News

ಫ್ಯಾಶನ್,ಅನುಕರಣೆ,ಆಕರ್ಷಣೆಗೊಳಗಾಗಿ ಮಾದಕ ವ್ಯಸನಿಗಳಾಗಬೇಡಿ ; ಡಿ.ವೈ.ಎಸ್.ಪಿ ಬಸವರಾಜ್

January 5, 2024 3 years ago 1 min read
ಹರಿಹರ : ಫ್ಯಾಶನ್,ಅನುಕರಣೆ,ಆಕರ್ಷಣೆಗೊಳಗಾಗಿ ಮಾದಕ ವ್ಯಸನಿಗಳಾಗಬೇಡಿ ಮತ್ತು ಅಮೂಲ್ಯವಾದ ಜೀವನವನ್ನು ಹಾಳು ಮಾಡಿಕೊಳ್ಳಬೇಡಿ ಎಂದು ದಾವಣಗೆರೆ ಜಿಲ್ಲಾ ಗ್ರಾಮಾಂತರ ಡಿ.ವೈ.ಎಸ್.ಪಿ ಬಸವರಾಜ್ ಯುವ ಮತ್ತು ವಿದ್ಯಾರ್ಥಿ ಸಮುದಾಯಕ್ಕೆ ಕಿವಿಮಾತು ಹೇಳಿದರು.
   ಶುಕ್ರವಾರ ದಾವಣಗೆರೆ ಜಿಲ್ಲಾ ಪೊಲೀಸ್, ಹರಿಹರ ವೃತ್ತ ಹಾಗು ಪೊಲೀಸ್ ಠಾಣೆಗಳ ವತಿಯಿಂದ ಅಪರಾಧ ತಡೆ ಮಾಸಾಚರಣೆ ಮತ್ತು ಮಾದಕ ವಸ್ತುಗಳ ಬಗ್ಗೆ ಜಾಗೃತೆಯನ್ನು ಮೂಡಿಸಲು  ನಗರದಲ್ಲಿ ಹಮ್ಮಿಕೊಂಡಿದ್ದ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಇಂದಿನ ದಿನಮಾನಗಳಲ್ಲಿ ಮಾದಕ ವಸ್ತುಗಳನ್ನು ಬಳಸು ವವರ ಪ್ರಮಾಣ ಅಧಿಕವಾಗುತ್ತಿದೆ.ಪ್ಯಾಶನ್,ಅನುಕರಣೆ, ಆಕರ್ಷಣೆಗೊಳಗಾಗಿ ಯುವ ಸಮೂಹ ದಾರಿ ತಪ್ಪುತ್ತಿದೆ. ಆದ್ದರಿಂದ ಯುವಕರು ಮತ್ತು ವಿದ್ಯಾರ್ಥಿಗಳು ವ್ಯಸನಮುಕ್ತರಾಗಿ ಆತ್ಮವಿಶ್ವಾಸದ ಬದುಕಿಗೆ ಕಾಲಿಡಬೇಕು ಎಂದರು.
    ಸಾಮಾಜದ ಮೇಲೆ ಕೆಟ್ಟ ಪರಿಣಾಮ ಉಂಟಾಗುತ್ತದೆ.ಇದಕ್ಕೆ ಸಾಧ್ಯವಾದ್ದ ವ್ಯಸನಿಗಳ ಮನಸ್ಸು ಪರಿವರ್ತನೆ ಮಾಡಿಕೊಂಡು ಹೊರ ಬರಬೇಕಿದೆ ಯುವ ಸಮುದಾಯದ ಮಾದಕ ವ್ಯಸನಿಗಳ ದಾಸನಾಗಿ ತನ್ನ ಉಜ್ವಲ ಭವಿಷ್ಯ ರೂಪಿಸಿಕೊಳ್ಳುವ ಪ್ರಯತ್ನದಲ್ಲಿ ತನ್ನ ಜೀವನವನ್ನು ತಾನೇ ಅಂತ್ಯಗೊಳಿಸಿಕೊಳ್ಳುವುದರ ಮೂಲಕ ಸಮಾಜಕ್ಕೆ ಮಾರಕವಾಗುವುದು ಅತ್ಯಂತ ದುರಾದೃಷ್ಟಕರ, ಆದ್ದರಿಂದ ಯುವ ಸಮುದಾಯದ ಮಾದಕ ವಸ್ತು ತ್ಯಜಿಸುವ ಮೂಲಕ ಸಾಮಾಜಿಕ ಜೀವನಕ್ಕೆ ಮುನ್ನುಡಿ ಬರೆಯಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
     ಜಾಥಾದಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಎಚ್. ವಿರೂಪಾಕ್ಷಪ್ಪ ಮಾತನಾಡಿ ಮಾದಕದ್ರವ್ಯ ಸೇವನೆಯಿಂದ ವ್ಯಕ್ತಿಯ ದೈಹಿಕ, ಮಾನಸಿಕ, ಅಥವಾ ಮಾನಸಿಕ ನಡವಳಿಕೆಯ ಸ್ಥಿತಿಯನ್ನು ಬದಲಾಯಿಸುವ ಮೂಲಕ ಆರೋಗ್ಯದ ಮೇಲೆ ದುಷ್ಪರಿಣಾಮಗಳು, ಮಾದಕದ್ರವ್ಯ ಸೇವನೆ ಮತ್ತು ನಡವಳಿಕೆಯ ಮೇಲೆ ಪರಿಣಾಮ ಬೀರುವ ಒಂದು ಸ್ಥಿತಿಯಾಗಿದೆ.ಆಲ್ಕೋಹಾಲ್, ಗಾಂಜಾ ಮತ್ತು ನಿಕೋಟಿನ್ ಔಷಧಿಗಳ ಸೇವನೆಯು ಮಾದಕ ಎಂದು ಪರಿಗಣಿಸಲ್ಪಡುವ ವಸ್ತುಗಳ ಉದಾಹರಣೆಯಾಗಿದೆ ಮಾದಕ ವ್ಯಸನವು ನಿರಂತರವಾಗಿದೆ, ಮರುಕಳಿಸುವ ಮಿದುಳಿನ ಸ್ಥಿತಿ, ಗೀಳಿನ ಮಾದಕ ವ್ಯಸನ ಮತ್ತು ಬಳಕೆಯಿಂದ ಗುರುತಿಸಲಾಗಿದೆ ಎಂದು ವಿವರವಾಗಿ ತಿಳಿಸಿದರು.
     ಇದೇ ವೇಳೆ ನಗರ ಪೊಲೀಸ್ ಇನ್ಸ್ಪೆಕ್ಟರ್ ಎಸ್.ದೇವಾನಂದ್ ಮಾತನಾಡಿ, ಮಾದಕ ಕೈ ವಸ್ತ್ರಗಳ ಸೇವನೆಯಿಂದ ಮನುಷ್ಯ ಆನೇಕ ದೈಹಿಕ ಹಾಗೂ ಮಾನಸಿಕ ತೆ ಕಾಯಿಲೆಗೆ ಒಳಗಾಗಿ ತನ್ನ ಜೀವನವನ್ನೆ ಕಳೆದುಕೊಳ್ಳುತ್ತಾನೆ ಹಾಗೂ ಆರ್ಥಿಕವಾಗಿ ದೀವಾಳಿ ಕೂಡ ಆಗುತ್ತಾನೆ. ಇದರಿಂದ ಕುಟುಂಬ ಹಾಗೂ ಭವಿಷ್ಯ ರೂಪಿಸುವ ವಿದ್ಯಾರ್ಥಿ ಜೀವನದ ಅಮೂಲ್ಯ ಸಮಯವನ್ನು ದುಶ್ಚಟಗಳಿಗೆ ಬಲಿಯಾಗಿ ಆರೋಗ್ಯ, ಸಮಯ ಹಾಳು ಮಾಡಿ ಕೊಳ್ಳುವ ಬಗ್ಗೆ ಎಚ್ಚರಿಕೆ ವಹಿಸಬೇಕು.
     ವಿದ್ಯಾರ್ಥಿಗಳು ಯುವ ಸಮೂಹ ಕೇವಲ ಆಕರ್ಷಣೆಗಾಗಿ ತಮ್ಮ ಜೀವನವನ್ನು ಹಾಳು ಮಾಡಿಕೊಳ್ಳುವ ಬದಲಿಗೆ ಒಳ್ಳೆಯ ಪುಸ್ತಕಗಳನ್ನು ಓದುವ ಮೂಲಕ, ಧ್ಯಾನ,ಯೋಗ ಮುಂತಾದ ವ್ಯಾಯಾಮಗಳನ್ನು ಮಾಡುವ ಮೂಲಕ ಋಣಾತ್ಮಕ ಪರಿಣಾಮ ಗಳಿಂದ ದೂರವಿದ್ದು,ಯುವ ಸಮುದಾಯ ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಸಹಕರಿಸಬೇಕು ಎಂದು ಹೇಳಿದರು.
    ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಆವರಣದಲ್ಲಿ ಡಿ ವೈ ಎಸ್ ಪಿ ಬಸವರಾಜ್ ಹಸಿರು ನಿಶಾನೆ ತೋರಿಸುವ ಮೂಲಕ ಆರಂಭವಾದ ಜಾಗೃತಿ ಜಾಥಾವು ಶಿವಮೊಗ್ಗ ರಸ್ತೆಯ ಮೂಲಕ ಹಾದು ಕಿತ್ತೂರು ಚೆನ್ನಮ್ಮ ವೃತ್ತದ ಬಳಿ ಆಗಮಿಸಿ ಮುಖ್ಯ ರಸ್ತೆಯ ಮೂಲಕ ಮಹಾತ್ಮ ಗಾಂಧಿ ವೃತಕ್ಕೆ ಬಂದು ಸ್ವಲ್ಪ ಹೊತ್ತು ಮಾನವ ಸರಪಳಿ ನಿರ್ಮಿಸಿ,ದುಶ್ಚಟಗಳನ್ನು ತ್ಯಜಿಸುವ, ಮಾದಕ ವಸ್ತುಗಳ ವಿರುದ್ಧ ಬಿತ್ತಿಪತ್ರ ಗಳನ್ನು ಕೈಯಲ್ಲಿ ಹಿಡಿದುಕೊಂಡು ವ್ಯಸನದ ಅಪಾಯಗಳ ಬಗ್ಗೆ ಘೋಷಣೆ ಕೂಗಲಾಯಿತು.
    ಜಾಥಾದಲ್ಲಿ ಹರಿಹರ ಗ್ರಾಮಾಂತರ ಸಿಪಿಐ ಸುರೇಶ್ ಸಗರಿ, ದಾವಣಗೆರೆ ಗ್ರಾಮೀಣ ಪೊಲೀಸ್ ಇನ್ಸ್ಪೆಕ್ಟರ್ ಕಿರಣ್ ಕುಮಾರ್, ಮಾಯಕೊಂಡ ಸಿಪಿಐ ನಾಗರಾಜ್, ಹರಿಹರ ನಗರ ಠಾಣೆ ಪಿಎಸ್ಐ ಶ್ರೀಪಥಿ ಗಿನ್ನಿ, ಎಸ್.ಪಿ.ಚಿದಾನಂದಪ್ಪ, ಗ್ರಾಮಾಂತರ ಪಿಎಸ್ಐ ಅರವಿಂದ್, ಮಲೆಬೆನ್ನೂರು ಪಿಎಸ್ಐ ಪ್ರಭು ಕೆಳಗಿನ ಮನಿ ಮತ್ತು ಪ್ರವೀಣ್ ಓಲೆಕಾರ್, ಸರ್ಕಾರಿ ಪ್ರಥಮ ವಿಜಯ ಕಾಲೇಜಿನ ಬಿ.ಕೆ.ಮಂಜುನಾಥ್,ಜಿ.ಎಸ್.ಸುರೇಶ್, ಚಂದ್ರಶೇಖರ್, ತಿಪ್ಪೇಸ್ವಾಮಿ,ಕುಮಾರ್ ಸೇರಿದಂತೆ ಹರಿಹರ ಮತ್ತು ಮಲೆಬೆನ್ನೂರು ಪೊಲೀಸ್ ಠಾಣೆ ಅಧಿಕಾರಿಗಳು, ಸಿಬ್ಬಂದಿಗಳು, ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಮಾನ್ಯತಾ ರೆಸಿಡೆನ್ಸಿಯಲ್ ಕಾಲೇಜು, ಚಂದ್ರ ಗುಪ್ತ ಮೌರ್ಯ ಕಾಲೇಜಿನ 500 ಕ್ಕೂ ಹೆಚ್ಚಿನ ವಿದ್ಯಾರ್ಥಿ- ವಿದ್ಯಾರ್ಥಿನಿಯರು ಭಾಗವಹಿಸಿದ್ದರು
Share: