ಸಾಹಸಸಿಂಹ ವಿಷ್ಣುವರ್ಧನ್ 14ನೇ ಪುಣ್ಯಸ್ಮರಣೆ: ರೋಗಿಗಳಿಗೆ ಹಣ್ಣು ಬಿಸ್ಕತ್ತು ವಿತರಣೆ
- ಹರಿಹರ: ಡಾ.ವಿಷ್ಣುವರ್ಧನ್ ಅವರ 14ನೇ ಪುಣ್ಯಸ್ಮರಣೆ ಪ್ರಯುಕ್ತ ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿರುವ ರೋಗಿಗಳಿಗೆ ನಕ್ಷತ್ರ ಟಿವಿ ಬಳಗ ಹಾಗೂ ಅಭಿಮಾನಿಗಳಿಂದ ಹಣ್ಣು, ಬಿಸ್ಕತ್ತು ವಿತರಿಸಲಾಯಿತು.
ಕನ್ನಡದ ಮೇರುನಟ ಸಾಹಸಸಿಂಹ ಡಾ.ವಿಷ್ಣುವರ್ಧನ್ ಅವರ 14ನೇ ಪುಣ್ಯಸ್ಮರಣೆಯನ್ನು ಇಂದಿರಾನಗರದ ಉದ್ಯಾನವನದಲ್ಲಿರುವ ಡಾ.ವಿಷ್ಣುವರ್ಧನ್ ಅವರ ಪ್ರತಿಮೆಗೆ ಪೂಜೆ ಸಲ್ಲಿಸುವ ಮೂಲಕ ಆಚರಣೆ ಮಾಡಲಾಯಿತು. ನಂತರ ಉದ್ಯಾನ ವನದಲ್ಲಿ ವಾಯು ವಿಹಾರಕ್ಕೆಂದು ಆಗಮಿಸಿದ್ದ ಹಿರಿಯ ನಾಗರಿಕರು, ಯುವಕ ಯುವತಿಯರು ಮತ್ತು ಶಾಲಾ ಮಕ್ಕಳಿಗೆ ಹಣ್ಣು ವಿತರಣೆ ಮಾಡಲಾಯಿತು.
ನಂತರ ದಾಮೋದರ ಮಂಜುನಾಥ ಪೈ ಸ್ಮಾರಕ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯ 50ಕ್ಕೂ ಹೆಚ್ಚು ಒಳ ರೋಗಿಗಳಿಗೆ ಅವರ ಆರೋಗ್ಯ ವಿಚಾರಿಸಿ, ಡಾ.ವಿಷ್ಣುವರ್ಧನವರ ಪುಣ್ಯಸ್ಮರಣೆಯ ಬಗ್ಗೆ ತಿಳಿಸಿ, ಹಣ್ಣು ಮತ್ತು ಬಿಸ್ಕತ್ತನ್ನು ವಿತರಿಸಿ ಬೇಗನೆ ಗುಣಮುಖರಾಗುವಂತೆ ಆತ್ಮಸ್ಥೈರ್ಯ ತುಂಬಲಾಯಿತು. ಸರತಿ ಸಾಲಿನಲ್ಲಿ ನಿಂತಿದ್ದ ಸುಮಾರು 200ಕ್ಕೂ ಹೊರ ರೋಗಿಗಳಿಗೆ ಹಾಗೂ ಆಸಪತ್ರೆಯ ಡಿ ವರ್ಗದ ಸಿಬ್ಬಂದಿಗಳಿಗೂ ಸಹ ಹಣ್ಣು, ಬಿಸ್ಕತ್ತು ವಿತರಣೆ ಮಾಡಲಾಯಿತು.
ಈ ಸಮಯದಲ್ಲಿ ಡಾ. ನಾಗರಾಜ, ದಿನೇಶ್, ಗೀತಾ, ಉಪನ್ಯಾಸಕ ಹೆಚ್.ಎಂ.ಗುರುಬಸವರಾಜಯ್ಯ, ನಕ್ಷತ್ರ ಟಿವಿಯ ಮಾಲೀಕರಾದ ಕೃಷ್ಣ ಪಿ.ರಾಜೋಳಿ, ಎನ್.ಇ.ಸುರೇಶ್, ಎಂ.ಬಿ. ಅತೀಶ್, ಹೆಚ್.ಬಿ.ಗಣೇಶ್ ಸೇರಿದಂತೆ ವಿಷ್ಣುವರ್ಧನವರ ಬಹಳಷ್ಟು ಅಭಿಮಾನಿಗಳು ಉಪಸ್ಥಿತರಿದ್ದರು.
