ಹರಿಹರ ಅಂಜುಮನ್ ಸದಸ್ಯರಿಂದ ಮಾನ್ಯ ಜಿಲ್ಲಾಧಿಕಾರಿಗಳಿಗೆ ಭೇಟಿ, ಮೂಲ ಸೌಕರ್ಯ ಮತ್ತು ವಿಜ್ಞಾನ ಪ್ರಯೋಗಾಲಯಕ್ಕೆ ಮನವಿ ಸಲ್ಲಿಕೆ.
ಹರಿಹರ: ನಗರಸಭೆ ವತಿಯಿಂದ ಸ್ವಚ್ಚತಾ ಅಭಿಯಾನ ಅಡಿಯಲ್ಲಿ ಹರಿಹರ ಅಂಜುಮನ್ ಶಾಲೆ ಮತ್ತು ಕಾಲೇಜಿಗೆ ಮೂಲ ಸೌಕರ್ಯ ಮತ್ತು ಶಾಲೆಯಲ್ಲಿ ಶೌಚಾಲಯವನ್ನು ನಿರ್ಮಿಸಲು, ವಿಜ್ಞಾನ ಪ್ರಯೋಗಾಲಯಕ್ಕೆ ಸಾಮಾಗ್ರಿಗಳನ್ನು ಒದಗಿಸಲು ನೂತನವಾಗಿ ಆಯ್ಕೆಯಾದ ಹರಿಹರ ಅಂಜುಮನ್ ಎ ಇಸ್ಲಾಮ್ ನ ಪಧಾಧಿಕಾರಿಗಳು ಇಂದು ದಾವಣಗೆರೆ ಮಾನ್ಯ ಜಿಲ್ಲಾಧಿಕಾರಿ ವೆಂಕಟೇಶ್ ಎಂ.ವಿ ಮತ್ತು ಹರಿಹರ ನಗರಸಭೆ ಆಯುಕ್ತರಾದ ಬಸವರಾಜ್ ಎಗೂರು ರವರಿಗೆ ಭೇಟಿ ಮಾಡಿ ಮನವಿ ಸಲ್ಲಿಸಿದರು,
ಈ ಸಂಸ್ಥೆಯು ಅಲ್ಪಸಂಖ್ಯಾರ ಸಂಸ್ಥೆಯಾಗಿದ್ದು 1968ರಲ್ಲಿ ಪ್ರಾರಂಭವಾಗಿರುತ್ತದೆ, ಈ ಸಂಸ್ಥೆಯು 1982 ರಿಂದ ಬಡ ವಿದ್ಯಾರ್ಥಿಗಳಿಗೆ ಪ್ರಾಥಮಿಕ, ಪ್ರೌಢ ಮತ್ತು ಪದವಿ ಪೂರ್ವ ಶಿಕ್ಷಣವನ್ನು ವಿದ್ಯಾರ್ಥಿಗಳಿಗೆ ನೀಡುತ್ತಾ ಬಂದಿದೆ, ಸದರಿ ಸಂಸ್ಥೆ ಅಡಿಯಲ್ಲಿ ಒಟ್ಟು ಸುಮಾರು 800ಕ್ಕೂ ಹೆಚ್ಚಯ ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿರುತ್ತಾರೆ, ಹೀಗಾಗಿ ಮೂಲ ಸೌಕರ್ಯ ಒದಗಿಸಲು ಮನವಿ ಸಲ್ಲಿಸಲಾಯಿತು.
ಈ ವೇಳೆಯಲ್ಲಿ ಸಂಸ್ಥೆ ಕಾರ್ಯದರ್ಶಿ ಆಸೀಫ್ ಜುನೇದಿ, ಸಹಕಾರ್ಯದರ್ಶಿ ಎಸ್ ಎಂ ಸಾಧಿಕ್ ವುಲ್ಲಾ, ಸದಸ್ಯರಾದ ಆರ್ ಸಿ ಜಾವೀದ್,ರೋಶನ್ ಜಮೀರ್,ಅಷ್ಪಾಕ್ ಮತ್ತಿತರಿದ್ದರು
