Friday, 16 Oct 2026
Breaking
ಎಸ್‌ಎಸ್‌ಕೆ ಸಮಾಜದ ದಸರಾ ಆಚರಣೆ ಅತ್ಯಂತ ವಿಶೇಷ ವಾಗಿದ್ದು ಭಕ್ತಿ, ಶ್ರದ್ಧೆ ಇತರಿಗೆ ಮಾರ್ಗದರ್ಶಿ ; ಶಾಸಕ ಹರೀಶ್  ಕನ್ನಡ ಸಾಹಿತ್ಯದಲ್ಲಿ ವೈಚಾರಿಕ, ಸಾಂಸ್ಕೃತಿಕ ಹಾಗೂ ಸಾಮಾಜಿಕ ಮೌಲ್ಯಗಳ ಸಮನ್ವಯವಿದೆ ; ಡಾ. ಎ.ಬಿ. ರಾಮಚಂದ್ರಪ್ಪ ಶಿಕ್ಷಣ ಸಂಸ್ಥೆ, ರಿಯಲ್ ಎಸ್ಟೇಟ್ ವ್ಯವಹಾರವಿಲ್ಲ ; ಸೇವೆ ಮಾಡುವ ಉದ್ದೇಶದಿಂದ ಚುನಾವಣೆಗೆ ಸ್ಪರ್ಧೆ: ಶಶಿ ಹುಲಿಕುಂಟೆ ಮಠ ಹರಿಹರ ಗಣೇಶೋತ್ಸವದ ಇತಿಹಾಸದಲ್ಲಿ ಹೊಸ ಅಧ್ಯಾಯ ; ಐತಿಹಾಸಿಕ ರಾಜಭೀದಿ ಉತ್ಸವಕ್ಕೆ ಹರಿಹರದಲ್ಲಿ ಮುನ್ನುಡಿ ದಾವಣಗೆರೆ ‘ಆರೋಗ್ಯ ಸಂಜೀವಿ’ ಕಾಯ್ದೆಹೊಳ್ಳಿ ; ನಿಜದ ಬಿಸಿಲವೃತ್ತ” ಜಿಲ್ಲಾ ಮಟ್ಟದ ಶಟಲ್ ಬ್ಯಾಡ್ಮಿಂಟನ್‌ನಲ್ಲಿ ಇಂದಿರಾಗಾಂಧಿ ವಸತಿ ಶಾಲೆ ವಿದ್ಯಾರ್ಥಿಗಳ ಸಾಧನೆ ಸಾಲ ಮರುಪಾವತಿಸುವಂತೆ ಗ್ರಾಹಕರಿಗೆ ಮನವಿ
Menu
Harihar News

ಟಿಪ್ಪು ಸುಲ್ತಾನ್ 273 ನೇ ಜಯಂತಿ ಆಚರಣೆ, ಸಾರ್ವಜನಿಕ ಆಸ್ಪತ್ರೆ ಒಳ ರೋಗಿಗಳಿಗೆ ಹಾಲು ಹಣ್ಣು ವಿತರಣೆ

November 13, 2023 3 years ago 1 min read
ಹರಿಹರ : ಟಿಪ್ಪು ಸುಲ್ತಾನ್ ಸೇನೆ ರಾಜ್ಯ ಸಮಿತಿಯ ಹರಿಹರ ಘಟಕದ ವತಿಯಿಂದ ಕರ್ನಾಟಕದ ಹುಲಿ ಖ್ಯಾತಿ ಟಿಪ್ಪು ಸುಲ್ತಾನ್ ರ 273 ನೆಯ ಜಯಂತಿಯ ಪ್ರಯುಕ್ತ ಶುಕ್ರವಾರ ಬೆಳಗ್ಗೆ ಹಳೆ ಪಿ.ಬಿ. ರಸ್ತೆಯಲ್ಲಿನ  ನಾಡ ಬಂದ್ ಷಾ ವಾಲಿ ದರ್ಗಾದಲ್ಲಿ ಟಿಪ್ಪುಸುಲ್ತಾನ್ ಹೆಸರಿನಲ್ಲಿ ಪ್ರಾರ್ಥನೆ (ಓದಿಕಿ) ಸಲ್ಲಿಸಿ ನಂತರ ನಗರದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯ ಒಳ ರೋಗಿಗಳಿಗೆ ಹಾಲು,ಹಣ್ಣು, ಬ್ರೆಡ್ ಗಳನ್ನು ವಿತರಣೆ ಮಾಡಲಾಯಿತು.
    ಈ ಸಮಯದಲ್ಲಿ ಸೇನೆಯ ಅಧ್ಯಕ್ಷ ಸಿಕಂದರ್ ಷಾ ಧರ್ವೇಷ್, ನಗರಸಭೆಯ ಸದಸ್ಯರಾದ ಬಿ ಅಲ್ತಾಫ್, ಮದ್ದಿಮನ್ಸೂರ್, ಕಾರ್ಯಾಧ್ಯಕ್ಷ ಯಮನೂರ, ಪ್ರಧಾನ ಕಾರ್ಯದರ್ಶಿ ಮೊಹಮ್ಮದ್ ಯೂಸುಫ್, ಉಪಾಧ್ಯಕ್ಷ ಅಲಿ ಅಕ್ಬರ್, ಖಜಾಂಜಿ ಜುಬೇರ್ ಅಹಮದ್,ಸಹ ಕಾರ್ಯದರ್ಶಿ ಸಮೀವುಲ್ಲಾ,ನಸ್ರುಲ್ಲಾ ಕಿಲ್ಲೆದಾರ್, ನಿರ್ದೇಶಕರಗಳಾದ ಹಬೀಬ್ ವುಲ್ಲ, ಮುಬಾರಕ್,ಮೆಹಬೂಬ್ ಅಲಿ, ಸೈಯದ್ ಇಸ್ಮಾಯಿಲ್, ಅಮಾನುಲ್ಲಾ ಸೇರಿದಂತೆ ಸೇನೆಯ ಪದಾಧಿಕಾರಿಗಳು ಮತ್ತು ಅಭಿಮಾನಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
*Please Subscribe True Media Knnada*
Share: