Harihar News
ಶ್ರೀ ಧರ್ಮಸ್ಥಳ ಸಂಸ್ಥೆಯಿಂದ ಸ್ವ ಉದ್ಯೋಗ ಪ್ರೇರಣ ಶಿಬಿರದ ಯಶಸ್ವಿ ಆಯೋಜನೆ
ಹರಿಹರ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಂದ ನಗರದ ಜೈಭೀಮ ನಗರ ಕಾರ್ಯಕ್ಷೇತ್ರದಲ್ಲಿನ ದೀಪ ಜ್ಞಾನವಿಕಾಸ ಕೇಂದ್ರದಲ್ಲಿ ಸ್ವ ಉದ್ಯೋಗ ಪ್ರೇರಣಾ ಶಿಬಿರ ಕಾರ್ಯಕ್ರಮವನ್ನು ಆಯೋಜನೆೆ ಮಾಡಲಾಗಿತ್ತು.
ಕಾರ್ಯಕ್ರಮದಲ್ಲಿ ಹಿರಿಯ ಕ್ಷೇತ್ರ ಯೋಜನಾಧಿಕಾರಿ ಗಣಪತಿ ಮಾಳಂಜಿ ಕಾರ್ಯಕ್ರಮದಲ್ಲಿ ದೀಪ ಬೆಳಗಿಸುವ ಮೂಲಕ ಚಾಲನೆ ನೀಡಿ ಮಾತನಾಡಿದ ಅವರು, ಸ್ವ ಉದ್ಯೋಗ ಮಾಡಲು ಮಹಿಳೆ ಯರಲ್ಲಿ ಆತ್ಮವಿಶ್ವಾಸದ ಜೊತೆಗೆ ಪೂರಕವಾದ ಜ್ಞಾನದ ಜೊತೆ ಅದನ್ನು ಅರಿತುಕೊಳ್ಳುವುದು ಅಷ್ಟೇ ಮುಖ್ಯವಾಗಿರುತ್ತದೆ.
ಜ್ಞಾನವಿಕಾಸ ಕಾರ್ಯಕ್ರಮದಲ್ಲಿ ಅಗರಬತ್ತಿ ಮತ್ತು ಫಿನಾಯಿಲ್ ಸೇರಿದಂತೆ ಅನೇಕ ಸ್ವ ಉದ್ದೋಗದ ಬಗ್ಗೆ ತಿಳುವಳಿಕೆಯನ್ನು ಮತ್ತು ತರಬೇತಿಯನ್ನು ಕೊಡುವ ನಿಟ್ಟಿನಲ್ಲಿ ಸ್ವ ಉದ್ಯೋಗ ಪ್ರೇರಣಾ ಶಿಬಿರದಲ್ಲಿ ತರಬೇತಿಯನ್ನು ತಾವೆಲ್ಲರೂ ಪಡೆದುಕೊoಡು ಪ್ರತಿಯೊಬ್ಬ ಮಹಿಳೆಯರು ಸ್ವಂತ ದುಡಿಮೆಯ ಸ್ವಉದ್ಯೋಗ ವನ್ನು ಅಳವಡಿಸಿಕೊಳ್ಳಬೇಕೆಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದಂತಹ ಶ್ರೀಮತಿ ಶ್ವೇತ ರವರು ಮಾತನಾಡಿ ಮಹಿಳೆಯರು ಸ್ವ ಉದ್ಯೋಗ ಮಾಡುವುದರಿಂದ ಮಹಿಳೆಯರ ಸ್ವಾವಲಂಬನೆ ಜೀವನವನ್ನು ನಡೆಸಬಹುದೆಂದು ತಿಳಿಸಿ, ಸಾಧನೆ ಮಾಡಿದ ಹಲವಾರು ಮಹಿಳೆಯರ ನಿದರ್ಶನ ತಿಳಿಸುವ ಮೂಲಕ ಸದಸ್ಯರಿಗೆ ಮನಸಿದ್ದರೆ ಮಾರ್ಗವಿದ್ದು ಸ್ವಉದ್ಯೋಗವನ್ನು ಪ್ರತಿಯೊಬ್ಬರು ಅಳವಡಿಸಿಕೊಳ್ಳಲು ಪೂರಕವಾದ ಜ್ಞಾನವನ್ನು ಹೊಂದಿರ ಬೇಕೆಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಕುಶಾಲ ಅಗರಬತ್ತಿ ಘಟಕದ ಶಾಂತ ಕುಶಾಲ್, ಅರ್ಚನಾರವರು ಅಗರಬತ್ತಿ ಮತ್ತು ಫಿನಾಯಿಲ್ ತಯಾರಿಕೆಯ ಬಗ್ಗೆ ಸದಸ್ಯರಿಗೆ ಸ್ವ ಉದ್ಯೋಗದ ತರಬೇತಿಯನ್ನು ನೀಡಿದರು.
ಸೇವಾ ಪ್ರತಿನಿಧಿ ಸುಧಾ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮ ದಲ್ಲಿ ಪ್ರಾರ್ಥನೆಯನ್ನು ಮಮತಾ ಹಾಗು ಸಂಗಡಿಗರು ಮಾಡಿದರೆ, ಸ್ವಾಗತವನ್ನು ಜ್ಞಾನ ವಿಕಾಸ್ ಸಮನ್ವಧಿಕಾರಿ ಭಾರತಿ ನಡೆಸಿ ಕೊಟ್ಟರು, ಬಂದ ಅತಿಥಿಗಳಿಗೆ ದನ್ಯವಾದವನ್ನು ಮೇಲಿಚಾರಕಿ ದುರ್ಗಾಭವಾನಿ ಮಾಡಿದರು. ಸೇವಾಪ್ರತಿನಿಧಿ ಸುಧಾ ಅಧ್ಯಕ್ಷತೆ ಅಂಜಲಿ ಮತ್ತು ಘಟಕ ಹಿರಿಯ ಕ್ಷೇತ್ರ ಯೋಜನಾಧಿಕಾರಿ ಗಣಪತಿ ಮಾಳಂಜಿ, ಉಪನ್ಯಾಸಕರಾದ ಶ್ರೀಮತಿ ಶ್ವೇತಾ ಸೇರಿದಂತೆ ಗ್ರಾಮ ಅಭಿವೃದ್ಧಿ ಯೋಜನೆದ ಹಲವಾರು ಸದಸ್ಯರುಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

