ಹರಿಹರ : ನಗರದಲ್ಲಿ ಇತ್ತೀಚಿಗೆ ಕಳ್ಳರ ಹಾವಳಿಯಂತೂ ಹೆಚ್ಚಾಗಿದೆ. ಪ್ರತಿದಿನ ಬಡಾವಣೆಗಳಲ್ಲಿ ಕಳ್ಳತನವಾಗುತ್ತಿಲಿವೆ. ನಗರದ ಪ್ರತಿಶ್ಠಿತ ಬಡವಾಣೆ ಕೇಶವ ನಗರದಲ್ಲಿ ಇತ್ತೀಚಿಗೆ 2 ವೀಲ್ಹರ್ ವಾಹನವು ಮನೆಯ ಗೇಟ್ ಒಳಗೆ ಇದ್ದದನ್ನು ಕೂಡ ಕಳ್ಳತನ ಮಾಡಿಕೊಂಡು ಹೋಗಿದ್ದಾರೆ ಹಾಗೂ ಗುತ್ತೂರು ಕಾಲೋನಿ ಪಡಿತರ ಅಂಗಡಿಯ ಪಕ್ಕದ ಅಂಗಡಿ ಯೊಂದರಲ್ಲಿ ಲ್ಯಾಪ್‌ಟಾಪ್ ಕಳ್ಳತನ ಹಾಗೂ ಮೊಬೈಲ್ ಕೂಡ ಕಳೆದು ಹೋಗಿದೆ ಎನ್ನಲಾಗಿದೆ.
ಹರಿಹರ ನಗರದಲ್ಲಿ ಇತ್ತೀಚಿಗೆ ಕಳ್ಳರ ಹಾವಳಿ ಹೆಚ್ಚಾಗಿದೆ
ಹೀಗೆ ಹಲವಾರು ಬಡಾವಣೆಗಳಲ್ಲಿ ಸಣ್ಣಪುಟ್ಟ ಕಳ್ಳತನಗಳು ಆಗುತ್ತಿದ್ದರೂ ಕೂಡ ಅಪರಾದ ವಿಭಾಗದ ಪೊಲೀಸರು, ಯಾವುದೇ ರೀತಿಯ ಕ್ರಮವನ್ನು ಜಾರಿಗೊಳಿಸಿಲ್ಲ ಎಂದು ತಿಳಿದು ಬಂದಿದೆ. ಹಾಗೇ ಪೊಲೀಸರ ನಿರ್ಲಕ್ಷತನದಿಂದ ನಗರದಲ್ಲಿ ಕಳ್ಳತನಗಳು ಆಗುತ್ತಲಿವೆ. ಅಧಕಾರಿಗಳು ಕರ್ತವ್ಯದಲ್ಲಿ ಇದ್ದರೊ, ಇಲ್ಲವೋ ಎಂಬುವುದೇ ಗೊತ್ತಾಗುತ್ತಿಲ್ಲ.
