ಹರಿಹರದ ಗಾಂಧಿ ಸರ್ಕಲ್ ನಲ್ಲಿ ಟ್ರಾಫಿಕ್ ಕಿರಿ ಕಿರಿ

ಹರಿಹರ 13 ಭಾನುವಾರ : ಶುಕ್ರವಾರದಂದು ಬೆಳಿಗ್ಗೆ 11ರ ಸುಮಾರಿಗೆ ಗಾಂಧಿ ಸರ್ಕಲ್ ನಿಂದ ಎ.ಕೆ. ಕಾಲೋನಿಯವರೆಗೆ ಟಾಫಿಕ್ಕೋ, ಟಾಫಿಕ್ಕು. ಸುಮಾರು 1 ರಿಂದ 2 ಗಂಟೆಗಳ ಕಾಲ ವಾಹನಗಳು ಹೋಗುವುದಕ್ಕೂ, ಬರುವುದಕ್ಕೂ ಹರಸಾಹಸ ಮಾಡಿದಂತೆ ಆಗಿದೆ. ಒಂದು ಕಡೆ ನೋದಿರೆ, ರಸ್ತೆಯ ಬದಿಯಲ್ಲಿ, ಕಬ್ಬಿನ ರಾಶಿ ಬಿದ್ದು ಅದನ್ನು ಯಾರು ಬದಿಗೆ ಯಾವ ಮಹಾನುಭಾವರು ಇರಲಿಲ್ಲ.
ಇನ್ನೊಂದು ಕಡೆ ನೋಡಿದರೆ, ಹುಲ್ಲಿನ ಟ್ಯಾಕ್ಟರ್ ತುಂಬಿಕೊಂಡು ಆ ಟ್ರಾಕ್ಟರಿಗೆ, ಹೋಗಲಿಕ್ಕೆ ರಸ್ತೆಯನ್ನು ಬೀಡದೆ ಪರದಾಡುವ ಪರಸ್ಥಿತಿ ಉಂಟು ಮಾಡಿತು.
ವಾಹನಗಳಿಂತೋ, ರಸ್ತೆಯ ತುಂಬಾ ತುಂಬಿಕೊಂಡು ಆ ಕಡೆ, ಈ ಕಡೆ ಸರಿಯದೇ ದಿಕ್ಕು ತೋಚದಂತೆ ಆಯಿತು. ಈ ಸಂದರ್ಭದಲ್ಲಿ ಪೊಲೀಸರಂತೂ ಯಾರು ಸ್ಥಳಕ್ಕೆ ಬರಲಿಲ್ಲ.
ಪೊಲೀಸ್ ಠಾಣೆ ಎದುರು ಟ್ರಾಫಿಕ್ ಜಾಮ್
ಆಗಿದ್ದರೂ ಸಹ ಕಣ್ಣಾರೆ ಕಂಡರೂ ಯಾರು ಕೂಡ ಟ್ರಾಫಿಕ್ ಜಾಮ್ ಆಗಿರುವುದನ್ನು ಸರಿಪಡಿಸಲು ಬಂದಿಲ್ಲ., ಪೊಲೀಸರು ಇದ್ದರೊ ಇಲ್ಲವೊ ಎಂಬುದೇ ಗುತ್ತಾಗುತ್ತಿಲ್ಲ.
ಕಷ್ಟಪಟ್ಟು ಜನರೇ, ನಿಧಾನವಾಗಿ ವಾಹನಗಳನ್ನು ಸರಿ ಮಾಡಿಕೊಂಡು ಹೋದರು. ಆದರೆ, ಪೊಲೀಸ್ ಇಲಾಖೆಯ ಅಧಿಕಾರಿಗಳಾಗಲೀ, ಸಿಬ್ಬಂದಿಗಳಾಗಲಿ, ಸ್ಥಳಕ್ಕೆ ಬರದೇ ಇರುವುದು. ಆಶ್ಚರ್ಯಕರ ಸಂಗತಿಯಾಗಿತ್ತು.
ಪೊಲೀಸರಿಗೆ ವಾಹನ ಚಾಲಕರಂತೂ ಇಡೀ ಶಾಪವನ್ನು ಹಾಕುತ್ತಿದ್ದರು.

 

Leave a Reply

Your email address will not be published. Required fields are marked *