ಹಸನ್ಮುಖಿ, ಹಾಗೂ ಪ್ರತಿಭಾವಂತ ನಟ ಸುಶಾಂತ್ ಸಿಂಗ್ ರಜಪೂತ್ ಕಣ್ಮರೆಯಾಗಿ ಇಂದಿಗೆ ಒಂದು ತಿಂಗಳು. ಅವರ ಸಾವು ಮೂಡಿಸಿರುವ ಆಘಾತದಿಂದ ಹೊರಬರಲು ಇನ್ನೂ ಅನೇಕರಿಗೆ ಸಾಧ್ಯವಾಗಿಲ್ಲ. ಅವರ ಆತ್ಮಹತ್ಯೆ ಪ್ರಕರಣ ಸುತ್ತ ಎದ್ದಿರುವ ಅನುಮಾನಗಳು, ಬಾಲಿವುಡ್‌ನ ಸ್ವಜನಪಕ್ಷಪಾತದ ವಿರುದ್ಧ ನಡೆಯುತ್ತಿರುವ ಚರ್ಚೆಗಳು ಮತ್ತೊಂದು ಹಂತದಲ್ಲಿದೆ.
ಈ ನಡುವೆ ಸುಶಾಂತ್ ಅವರ ಮಾಜಿ ಪ್ರೇಯಸಿ ಅಂಕಿತಾ ಲೋಖಂಡೆ ಮತ್ತು ಗೆಳತಿ ರಿಯಾ ಚಕ್ರಬೊರ್ತಿ ಯಾವುದೇ ಹೇಳಿಕೆ ನೀಡದೆ ಇರುವುದು ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿತ್ತು. ಸುಶಾಂತ್ ನಿಧನರಾಗಿ ಒಂದು ತಿಂಗಳ ಬಳಿಕ ಅಂಕಿತಾ ಕೊನೆಗೂ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ .
ಸುಶಾಂತ್ ಸಿಂಗ್ ಸಾವಿಗೆ ಸಲ್ಮಾನ್ ಖಾನ್ ಪರೋಕ್ಷ ಕಾರಣ?
ಮನೆಯ ದೇವರಕೋಣೆಯಲ್ಲಿ ಹೂವುಗಳಿಂದ ಅಲಂಕರಿಸಿದ ಸಣ್ಣದೊಂದು ಹಣತೆ ಹಚ್ಚಿಟ್ಟು ಸುಶಾಂತ್‌ಗೆ ಗೌರವ ಸಲ್ಲಿಸಿರುವ ಅಂಕಿತಾ ‘ದೇವರ ಮಗ’ ಎಂದು ಕ್ಯಾಪ್ಷನ್ ನೀಡಿದ್ದಾರೆ.
ಸುಶಾಂತ್ ಸಿಂಗ್‌ನದ್ದು ಕೊಲೆಯಾ? ಚಿತ್ರಗಳು ಕೊಡುತ್ತಿವೆ ಸುಳಿವು?
ಜುಲೈ 13ರಂದು ಅಂಕಿತಾ ಸಾಮಾಜಿಕ ಜಾಲತಾಣದಲ್ಲಿ ಕೊನೆಯ ಬಾರಿಗೆ ವಿಡಿಯೋವೊಂದನ್ನು ಪ್ರಕಟಿಸಿದ್ದರು. ನಂತರ ಸುಶಾಂತ್ ಸಾವಿನ ಕುರಿತು ಅವರು ಒಂದೂ ಹೇಳಿಕೆ ನೀಡದೆ ಸಾಮಾಜಿಕ ಜಾಲತಾಣದಿಂದ ದೂರ ಉಳಿದಿದ್ದರು.
