ಸಂತ ಅಲೋಶಿಯಸ್ ಕಾಲೇಜಿಗೆ ದ್ವಿತೀಯ ಪಿಯುಸಿಯಲ್ಲಿ ಶೇಕಡ 97,6 ಫಲಿತಾಂಶ

ಹರಿಹರ ಜುಲೈ 14 ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ನಗರದ ಸಂತ ಅಲೋಶಿಯಸ್ ಪಿಯು ಕಾಲೇಜು ಶೇಕಡ 97.6 ರಷ್ಟು ಫಲಿತಾಂಶ ಪಡೆದಿದೆ,
ವಿಜ್ಞಾನ ಹಾಗೂ ವಾಣಿಜ್ಯ ವಿಭಾಗದ ಒಟ್ಟು 84 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು 10 ಉನ್ನತಶ್ರೇಣಿ, 51 ಪ್ರಥಮ ಶ್ರೇಣಿ, 17 ದ್ವಿತೀಯ ಶ್ರೇಣಿ, 5 ತೃತಿಯ ಶ್ರೇಣಿ ತೇರ್ಗಡೆ ಹೊಂದಿರುತ್ತಾರೆ
ಶೇಕಡ 100ರಷ್ಟು ಫಲಿತಾಂಶ ಪಡೆದ ವಿಷಯಗಳು, ರಸಾಯನಶಾಸ್ತ್ರ, ಗಣಿತ, ಜೀವಶಾಸ್ತ್ರ, ಗಣಕ ವಿಜ್ಞಾನ, ಇತಿಹಾಸ, ಅರ್ಥಶಾಸ್ತ್ರ, ಲೆಕ್ಕಶಾಸ್ತ್ರ, ವ್ಯವಹಾರ ಅಧ್ಯಯನ, ಹಿಂದಿ ಹಾಗೂ ಉರ್ದು
ವಾಣಿಜ್ಯ ವಿಭಾಗದಲ್ಲಿ.
ಕುಮಾರಿ ಪದ್ಮಿನಿ ಆರ್ ಪಿ-549
ಕುಮಾರಿ ಸಹನಾ ಕೆಬಿ-533
ಕುಮಾರಿ ಬಿಬಿ ಸಾನಿಯಾ-516
ವಿಜ್ಞಾನ ವಿಭಾಗದಲ್ಲಿ,
ಕುಮಾರಿ ಸಿಂಧು ಎಂ-545
ಕುಮಾರಿ ಪ್ರಿಯಾಂಕ ಎಂಎಚ್-506
ಕುಮಾರ್ ಡಿಕ್ಸನ್ ಲೂವಿಸ್-505
ಪರೀಕ್ಷೆಯಲ್ಲಿ ಉತ್ತೀರ್ಣರಾದ ಎಲ್ಲ ವಿದ್ಯಾರ್ಥಿಗಳಿಗೂ ಕಾಲೇಜಿನ ಆಡಳಿತ ಮಂಡಳಿ ಪರವಾಗಿ ಮುಖ್ಯಸ್ಥರಾದ ಫಾದರ್ ಎರಿಕ್ ಮತಾಯಸ್, ಫಾದರ್ ಪ್ರದೀಪ್ ಸಿಕ್ವೇರಾ, ಪ್ರಾಂಶುಪಾಲರಾದ ಶ್ರೀ ಸನ್ನಿ ಗೂಡಿನೊ ಹಾಗೂ ಬೋಧಕ ಬೋಧಕೇತರ ಸಿಬ್ಬಂದಿ ಅವರು ಅಭಿನಂದನೆ ಸಲ್ಲಿಸಿದ್ದಾರೆ

Leave a Reply

Your email address will not be published. Required fields are marked *