ಗೃಹರಕ್ಷಕ ಸೇವೆ ಸಲ್ಲಿಸಲು ಅರ್ಜಿ ಆಹ್ವಾನ

ಶಿವಮೊಗ್ಗ, ಜನವರಿ-05  : ಶಿವಮೊಗ್ಗ ಜಿಲ್ಲೆಯ ಗೃಹರಕ್ಷಕ ದಳದ ವಿವಿಧ ತಾಲೂಕುಗಳಲ್ಲಿ 150 ಗೃಹರಕ್ಷಕ ಸದಸ್ಯರ ಸ್ಥಾನಗಳು ಖಾಲಿಯಿದ್ದು, ನಿಷ್ಕಾಮ ಸೇವೆ ತತ್ವದ ಅಡಿಯಲ್ಲಿ ಸೇವೆ ಸಲ್ಲಿಸಲು ಸಿದ್ಧರಿರುವ 19 ವರ್ಷ ಮೇಲ್ಪಟ್ಟ ಎಸ್.ಎಸ್.ಎಲ್.ಸಿ. ಪಾಸಾಗಿರುವ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.
ನಿಗಧಿತ ನಮೂನೆ ಆರ್ಜಿಯನ್ನು ಸಂಬಂಧ ಪಟ್ಟ ಘಟಕಗಳಲ್ಲಿ ಪಡೆದು, ಭರ್ತಿ ಮಾಡಿದ ಅರ್ಜಿಯನ್ನು ದಿ: 07/01/2021 ರೊಳಗಾಗಿ ಸಲ್ಲಿಸುವಂತೆ ಜಿಲ್ಲಾ ಸಮಾದೇಷ್ಟ ಎಸ್. ಶಿವಕುಮಾರ್ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಗೃಹರಕ್ಷಕ ದಳ, ದ್ರೌಪದಮ್ಮ ವೃತ್ತದ ಹತ್ತಿರ, ಗೋಪಾಳಗೌಡ ಬಡಾವಣೆ, ಇ ಬ್ಲಾಕ್, 3ನೇ ತಿರುವು, ಶಿವಮೊಗ್ಗ, ದೂ.ಸಂ.:08182-255630 ನ್ನು ಸಂಪರ್ಕಿಸುವುದು.

Leave a Reply

Your email address will not be published. Required fields are marked *