ಬಳ್ಳಾರಿ,ಆ.3, ಬಳ್ಳಾರಿ ನಗರ ಪ್ರಾಧಿಕಾರದ ವ್ಯಾಪ್ತಿಯಲ್ಲಿ ಎಲ್ಲ ವಾರ್ಡ್ ಗಳಲ್ಲಿನ 2010ರಿಂದ ಇಲ್ಲಿಯವರೆಗಿನ ಸರ್ವೆಸ್ಕೆಚ್ ಗಳನ್ನು ಮಾಹಿತಿ ವಿವರ ಒದಗಿಸುವಂತೆ ಬುಡಾ ಅಧ್ಯಕ್ಷ ದಮ್ಮೂರು ಶೇಖರ್ ಸೂಚಿಸಿದರು.
ನಗರದ ಬುಡಾ ಕಚೇರಿಯಲ್ಲಿ ಸೋಮವಾರ ನಡೆದ ಸಭೆಯಲ್ಲಿ ಭೂ ದಾಖಲೆಗಳ ಉಪನಿರ್ದೇಶಕರಿಗೆ ಸೂಚಿಸಿದರು.
ಬಳ್ಳಾರಿ ನಗರಾಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿಯಲ್ಲಿ ಬರುವ ಎಲ್ಲಾ ವಾರ್ಡ್ ಗಳನ್ನು ಪರಿಶೀಲಿಸಿ, ಪ್ರತಿ ಟಿ.ಎಸ್ ನಂಬರ್ ನಲ್ಲಿ 5000 ಚ.ಅ ಮೇಲೆ ಉಪ-ವಿಭಜನೆಗಳನ್ನು ತಯಾರಿಸಿರುವ ಸರ್ವೇ ಸ್ಕೆಚ್ ಗಳ ಮಾಹಿತಿ 2010ರಿಂದ ಇದುವರೆಗೆ ಒದಗಿಸಬೇಕು ಎಂದು ಅವರು ತಿಳಿಸಿದರು.
ಅಕ್ರಮಗಳ ತಡೆಗಟ್ಟುವ ನಿಟ್ಟಿನಲ್ಲಿ ಸರ್ವೆ ಸ್ಕೇಚ್ ಗಳ ಮಾಹಿತಿ ಅನುಕೂಲವಾಗಲಿದೆ ಎಂದರು.
ಸರ್ವೆ ಸ್ಕೆಚ್ ಗಳ ಮಾಹಿತಿ ಒದಗಿಸಿ-ಬುಡಾ ಅಧ್ಯಕ್ಷ ದಮ್ಮೂರು ಶೇಖರ್
