ದಾವಣಗೆರೆ ವಿವಿಧ ಕಂಟೈನ್‍ಮೆಂಟ್ ವಲಯಗಳ ನೋಟಿಫಿಕೇಷನ್

ದಾವಣಗೆರೆ ಜು.14-ಜಿಲ್ಲೆಯಲ್ಲಿ ಕೊರೊನಾ ಪಾಸಿಟಿವ್ ವರದಿಯಾಗಿದ್ದ ಕೆಳಕಂಡ ರೋಗಿಗಳು ವಾಸಿಸುತ್ತಿದ್ದ ಪ್ರದೇಶಗಳನ್ನು ವಿಪತ್ತು ನಿರ್ವಹಣೆ ಕಾಯ್ದೆ 2005 ರ ಅಧಿಕೃತ ಜ್ಞಾಪನೆ ಅನ್ವಯ “ಕಂಟೈನ್‍ಮೆಂಟ್ ವಲಯ”ಗಳೆಂದು ಘೋಷಿಸಿ ಕ್ರಮ ಕೈಗೊಳ್ಳಲಾಗಿದೆ. ಜುಲೈ 9 ರಂದು ಕೋವಿಡ್ ಪಾಸಿಟಿವ್ ಆಗಿದ್ದ ರೋಗಿ ಸಂಖ್ಯೆ 35912 ಜಗಳೂರು ತಾಲ್ಲೂಕಿನ ಹೊಸಕೆರೆ, ರೋಗಿ ಸಂಖ್ಯೆ 35909 ಜಗಳೂರು ಕಲ್ಲೇಶ್ವರ ಲಾಡ್ಜ್ ಹತ್ತಿರ, ರೋಗಿ ಸಂಖ್ಯೆಗಳಾದ 35198, 35920 ಹರಿಹರ ತಾಲ್ಲೂಕಿನ ಗಂಗನರಸಿ, ರೋಗಿ ಸಂಖ್ಯೆ 30649 ಹರಿಹರ ತಾಲ್ಲೂಕಿನ ಎಳೆಹೊಳೆ, ರೋಗಿ ಸಂಖ್ಯೆಗಳಾದ 30664, 30665 ಹೊನ್ನಾಳಿ ತಾಲ್ಲೂಕಿನ ಹರಳಹಳ್ಳಿ, ರೋಗಿ ಸಂಖ್ಯೆ 30668 ಹೊನ್ನಾಳಿ ತಾಲ್ಲೂಕಿನ ಬಾಲರಾಜ್‍ಘಾಟ್. ರೋಗಿ ಸಂಖ್ಯೆ 30661, 30666, 30667, 30676 ಹೊನ್ನಾಳಿ ತಾಲ್ಲೂಕಿನ ಕೋಟೆ, ರೋಗಿ ಸಂಖ್ಯೆ 30679 ಟಿಎಂ ರಸ್ತೆ ಹೊನ್ನಾಳಿ, ರೋಗಿ ಸಂಖ್ಯೆ 30678 ದೊಡ್ಡಗಣ್ಣೇರಕೇರಿ ಹೊನ್ನಾಳಿ ಪಟ್ಟಣ, ರೋಗಿ ಸಂಖ್ಯೆ 30662, 30680 ಟಿಎಂ ರಸ್ತೆ ಗಾಯತ್ರಿ ಮೆಡಿಕಲ್ ಹೊನ್ನಾಳಿ ಪಟ್ಟಣ, ರೋಗಿ ಸಂಖ್ಯೆ 30663, 30681 ಸಂತೆ ಮೈದಾನ ಹೊನ್ನಾಳಿ ಪಟ್ಟಣ. ಜುಲೈ 10 ರಂದು ಪಾಸಿಟಿವ್ ಆಗಿದ್ದ ರೋಗಿ ಸಂಖ್ಯೆಗಳಾದ 33564, 35959 ಹರಿಹರ ತಾಲ್ಲೂಕಿನ ಹರ್ಲಾಪುರ, ರೋಗಿ ಸಂಖ್ಯೆಗಳಾದ 33560, 33570, 35961 ಜಗಳೂರು ತಾಲ್ಲೂಕಿನ ತೊರಣಗಟ್ಟಿ, ರೋಗಿ ಸಂಖ್ಯೆ 33557 ಹರಿಹರ ತಾಲ್ಲೂಕಿನ ಇಂದಿರಾನಗರ. ಜುಲೈ 11 ರಂದು ಪಾಸಿಟಿವ್ ಆಗಿದ್ದ ರೋಗಿ ಸಂಖ್ಯೆ 35922 ಚನ್ನಗಿರಿ ತಾಲ್ಲೂಕಿನ ಹಿರೇಕೊಗಲೂರು, ರೋಗಿ ಸಂಖ್ಯೆ 35945 ಚನ್ನಗಿರಿ ತಾಲ್ಲೂಕಿನ ದಿಗ್ಗೇನಹಳ್ಳಿ, ರೋಗಿ ಸಂಖ್ಯೆ 35974 ಜಗಳೂರು ತಾಲ್ಲೂಕಿನ ಬಿಳಿಚೋಡು. ರೋಗಿ ಸಂಖ್ಯೆ 30644 ಮಹಾದೇವಪುರ ಆರನೇಕಲ್ಲು ದಾವಣಗೆರೆ. ರೋಗಿ ಸಂಖ್ಯೆ 33556 ರಾಜೇಂದ್ರ ಬಡಾವಣೆ ದಾವಣಗೆರೆ. ರೋಗಿ ಸಂಖ್ಯೆ 33562, 36517 ದೊಡ್ಡಬಾತಿ. ರೋಗಿ ಸಂಖ್ಯೆ 35197 ಶಕ್ತಿನಗರ. ರೋಗಿ ಸಂಖ್ಯೆ 35938 ಹಾಗೂ ಜೂ.27 ರಂದು ಪಾಸಿಟಿವ್ ಆಗಿದ್ದ ರೋಗಿ ಸಂಖ್ಯೆ 11157 ಸರ್ ಮಿರ್ಜ ಇಸ್ಮಾಯಿಲ್ ನಗರ ಬೇತೂರು ರಸ್ತೆ ದಾವಣಗೆರೆ ಈ ಪ್ರದೇಶಗಳನ್ನು ಕಂಟೈನ್‍ಮೆಂಟ್ ವಲಯಗಳೆಂದು ಹಾಗೂ ಈ ಪ್ರದೇಶಗಳ 200 ಮೀಟರ್ ಸುತ್ತಲಿನ ಪ್ರದೇಶವನ್ನು ಬಫರ್ ಝೋನ್ ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ನಿಯಮಾನುಸಾರ ಆದೇಶಿಸಿದ್ದಾರೆ.

Leave a Reply

Your email address will not be published. Required fields are marked *