ಹರಿಹರದ ಅಂಜುಮನ್-ಎ-ಇಸ್ಲಾಂ ಆಡಳಿತ ಮಂಡಳಿಗೆ ಚುನಾವಣೆಗೆ ಅಧಿಸೂಚನೆ

  1. ಹರಿಹರದ ಅಂಜುಮನ್-ಎ-ಇಸ್ಲಾಂ ಆಡಳಿತ ಮಂಡಳಿಗೆ ಅ.6ರಂದು ಚುನಾವಣೆ ನಡೆಸಲು ಅಧಿಸೂಚನೆ ಹೊರಡಿಸಿ. ಚುನಾವಣಾ ವೇಳೆ ಪಟ್ಟಿ ಪ್ರಕಟಿಸಿದೆ.  ಅ 7 ರಿಂದ 16 ರವರಗೆ ನಾಮಪತ್ರ ಸಲ್ಲಿಸಲು ಅವಕಾಶವಿದೆ. ಅ 17 ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದೆ.  ಅ 18 ರಂದು ನಾಮಪತ್ರ ಹಿಂಪಡೆಯುವ ಮತ್ತು ಚಿನ್ಹೆಗಳ ವಿತರಣೆ ಮತ್ತು ಅಧಿಕೃತ ಅಭ್ಯರ್ಥಿಗಳ ಪಟ್ಟಿಗಳ ಪ್ರಕಟಣೆ ಮಾಡಲಾಗುವುದು. ಹರಿಹರ ನಗರದ ಈದ್ಗಾ ಮೈದಾನದಲ್ಲಿರುವ ಅಂಜುಮನ್-ಎ-ಇಸ್ಲಾಂ ಶಾಲೆಯಲ್ಲಿ ದಿನಾಂಕ 28-10-2023 ರಂದು ಬೆಳಿಗ್ಗೆ 08:00 ರಿಂದ ಮಧ್ಯಾಹ್ನ 03:00 ಘಂಟೆಯವರೆಗೆ ಸಂಜೆ 04:00 ಗಂಟೆಯಿಂದ ಮತ ಎಣಿಕೆ ನಂತರ ಫಲಿತಾಂಶ ಪ್ರಕಟಣೆಗೊಳ್ಳಲಿದೆ ಎಂದು ಜಿಲ್ಲಾ ವಕ್ಪ್ ಅಧಿಕಾರಿ ಹಾಗೂ ಅಂಜುಮನ್ -ಎ- ಇಸ್ಲಾಂ ಚುನಾವಣಾಧಿಕಾರಿ ಸೈಯದ್ ಮೊಅಜ಼ಂ ಪಾಷ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
    ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳು ಮತ್ತು ಅವರ ಪರವಾಗಿ ಯಾವುದೇ ಪೋಸ್ಟರ್, ಬ್ಯಾನರ್, ಫ಼್ಲೆಕ್ಸ್
    ಇತರೆ ಕಟ್ಟುವಂತಿಲ್ಲ ಮತ್ತು ಗೋಡೆ ಬರಹ ಮಾಡುವಂತಿಲ್ಲ. ಪೋಸ್ಟರ್, ಬ್ಯಾನರ್, ಫ಼್ಲೆಕ್ಸ್, ಮತ್ತು ಗೋಡೆ ಬರಹ ಕಂಡುಬಂದಲ್ಲಿ ಚುನಾವಣಾ ನೀತಿ ಸಂಹಿತಿ ಉಲ್ಲಂಘನೆ ಪ್ರಕಾರ ಕಾನೂನಿನ ರೀತ್ಯ್ ಕ್ರಮ ಕೈಗೊಳ್ಳಲಾಗುವುದು ಎಚ್ಚರಿಸಿದ್ದಾರೆ.

Leave a Reply

Your email address will not be published. Required fields are marked *