ಮುಂದಿನ 15 ದಿನ ಭದ್ರಾ ನೀರು ಹರಿಸಲು ಉಪಮುಖ್ಯಮಂತ್ರಿಗೆ ಶಾಸಕ ಹರೀಶ್ ಪತ್ರ

ಹರಿಹರ : ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಗೆ ಭದ್ರ ಜಲಾಶಯದ ಬಲದಂಡೆ ನಾಲೆಗೆ ನವೆಂಬರ್ ತಿಂಗಳು ಅಂತ್ಯದ ವರೆಗೆ ನೀರು ಹರಿಸುವಂತೆ ಶಾಸಕ ಬಿ.ಪಿ.ಹರೀಶ್ ಪತ್ರದ ಮೂಲಕ ಮನವಿ ಮಾಡಿದ್ದಾರೆ.
      ಪ್ರಸ್ತುತ ವರ್ಷದಲ್ಲಿ ಮುಂಗಾರು ಮಳೆ ಸಂಪೂರ್ಣ ವಿಫಲ ವಾಗಿದ್ದು,ಹಿಂಗಾರು ಮಳೆಯು ಸಹ ಬಾರದೇ ಇರುವ ಹಿನ್ನೆಲೆಯಲ್ಲಿ ರೈತರು ಕಂಗಾಲಾಗಿದ್ದಾರೆ.ದಾವಣಗೆರೆ ಜಿಲ್ಲೆಯ ಹಲವಾರು ಗ್ರಾಮದ ರೈತರು ಭತ್ತದ ಬೆಳೆ ನಾಟಿ ಮಾಡಿದ್ದು ಅವರೆಲ್ಲರಿಗೂ ನೀರಿನ ಅಬಾವ ಉಂಟಾಗಿದ್ದು ಇನ್ನೂ 15 ದಿನಗಳ ಕಾಲ ನೀರು ಹರಿಸುವಂತೆ ಮನವಿ ಮಾಡುತ್ತಿರುವದಾಗಿ ಪತ್ರದಲ್ಲಿ ತಿಳಿಸಿದ್ದಾರೆ.
    ಭದ್ರ ಅಚ್ಚುಕಟ್ಟು ಪ್ರದೇಶದ ರೈತರ ಹಿತದೃಷ್ಟಿಯಿಂದ ಉಪ ಮುಖ್ಯಮಂತ್ರಿ ಹಾಗೂ ಜಲಸಂಪನ್ಮೂಲ ಸಚಿವರಾದ ಡಿ.ಕೆ ಶಿವಕುಮಾರ್ ಗೆ ಪತ್ರ ಮೂಲಕ ವಿನಂತಿಸಿಕೊoಡು ದಾವಣಗೆರೆ, ಹರಿಹರ, ಹಾಗೂ ಮಲೆಬೆನ್ನೂರು ಭದ್ರ ಅಚ್ಚುಕಟ್ಟು ಪ್ರದೇಶದ ರೈತರು ಈಗಾಗಲೇ ಭತ್ತ ನಾಟಿ ಮಾಡಿ ಇನ್ನು 15 ದಿನಗಳಲ್ಲಿ ಕಟಾವು ಮಾಡುತ್ತಾರೆ. ಈ ಹಂತದಲ್ಲಿ ಕಾಳುಕಟ್ಟುವ ಸಂದರ್ಭ ವಾಗಿರುವುದರಿಂದ ಈ ಭಾಗದ ನಾಲಾವ್ಯಾಪ್ತಿಯ ರೈತರಿಗೆ 15 ದಿನಗಳ ನೀರಿನ ಅಗತ್ಯವಿರುತ್ತದೆ.
   ಆದ್ದರಿಂದ ತಾವುಗಳು ದಯಮಾಡಿ ಈ ಭಾಗದ ರೈತರ ಹಿತದೃಷ್ಟಿ ಯಿಂದ ನವೆಂಬರ್ ತಿಂಗಳ ಅಂತ್ಯದವರೆಗೆ ಭದ್ರಾ ಜಲಾಶಯ ದಿಂದ ನೀರು ಹರಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಲು ಪತ್ರದ ಮೂಲಕ ಮನವಿ ಮಾಡಿದ್ದಾರೆ.

Leave a Reply

Your email address will not be published. Required fields are marked *