ಶಾಸಕ ಸೋಮಶೇಖರರೆಡ್ಡಿ ಮನವಿಗೆ ಸಕರಾತ್ಮಕವಾಗಿ ಸ್ಪಂದಿಸಿದ ಜಿಂದಾಲ್ 2 ಸಾವಿರ ಬೆಡ್‍ಗಳ ಕೋವಿಡ್ ಕೇರ್ ಸೆಂಟರ್ ಸ್ಥಾಪಿಸಿ

ಬಳ್ಳಾರಿ,ಆ.13,ಬಳ್ಳಾರಿ ಜಿಲ್ಲೆಯಲ್ಲಿ ಕೊರೊನಾ ಸೊಂಕಿತರ ಸಂಖ್ಯೆ ದಿನೇದಿನೇ ಹೆಚ್ಚಾಗುತ್ತಿದ್ದು,ಪರಿಸ್ಥಿತಿ ಬಿಗಡಾಯಿಸುತ್ತಿದೆ. ಇಂತಹ ಸಂದರ್ಭದಲ್ಲಿ ಜಿಲ್ಲೆಯ ನಾಗರಿಕರ ಹಿತದೃಷ್ಟಿಯಿಂದ ಜಿಂದಾಲ್ ಕಾರಖಾನೆಯು ಬಳ್ಳಾರಿಯಲ್ಲಿ 2 ಸಾವಿರ ಬೆಡ್‍ಗಳ ಕೋವಿಡ್ ಕೇರ್ ಸೆಂಟರ್ ಸ್ಥಾಪಿಸಿ ಅನುಕೂಲ ಮಾಡಿಕೊಡಬೇಕು ಎಂದು ಬಳ್ಳಾರಿ ನಗರ ಶಾಸಕ ಜಿ.ಸೋಮಶೇಖರರೆಡ್ಡಿ ಅವರು ಮನವಿ ಮಾಡಿದ್ದಾರೆ.


ಜಿಂದಾಲ್‍ನಲ್ಲಿ ವ್ಯವಸ್ಥಾಪಕ ನಿರ್ದೇಶಕ ವಿನೋದ ನೋವೆಲ್ ಅವರನ್ನು ಗುರುವಾರ ಬೆಳಗ್ಗೆ ಭೇಟಿಯಾಗಿ ಜಿಲ್ಲೆಯ ಕೊರೊನಾ ಸ್ಥಿತಿಗತಿ, ತಾವು ಈ ಸಂದರ್ಭದಲ್ಲಿ ನೆರವಿಗೆ ಧಾವಿಸಬೇಕಾದ ಅಗತ್ಯತೆ ಕುರಿತು ಶಾಸಕ ಸೋಮಶೇಖರರೆಡ್ಡಿ ಅವರು ಎಳೆಎಳೆಯಾಗಿ ವಿವರಿಸಿದರು.
ಈ ಭಯನಾತ್ಮಕ ಪರಿಸ್ಥಿತಿಯಲ್ಲಿ ಕೊರೊನಾ ಸೊಂಕಿತರಿಗೆ ಬೆಡ್‍ಗಳ ವ್ಯವಸ್ಥೆ ಮಾಡುವುದೇ ಅತ್ಯಂತ ದೊಡ್ಡ ಸವಾಲಾಗಿದೆ ಎಂಬುದನ್ನು ಸಹ ಶಾಸಕ ಸೋಮಶೇಖರರೆಡ್ಡಿ ಅವರು ವಿವರಿಸಿದರು.
ಶಾಸಕರ ಮನವಿಗೆ ಅತ್ಯಂತ ಸಕರಾತ್ಮಕವಾಗಿ ಸ್ಪಂದಿಸಿರುವ ಜಿಂದಾಲ್ ಬಳ್ಳಾರಿ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿರುವ ಕ್ರೀಡಾ ಕಾಂಪ್ಲೆಕ್ಸ್‍ನಲ್ಲಿ ಬೆಡ್‍ಗಳ ವ್ಯವಸ್ಥೆ ಮಾಡಿ ಕೋವಿಡ್‍ಕೇರ್ ಸೆಂಟರ್ ಸ್ಥಾಪಿಸುವುದಕ್ಕೆ ಅಗತ್ಯ ಸಹಕಾರ ಮಾಡುವುದಾಗಿ ತಿಳಿಸಿದೆ.
ಈ ಸಂದರ್ಭದಲ್ಲಿ ಬುಡಾ ಅಧ್ಯಕ್ಷ‌‌ ದಮ್ಮೂರು ಶೇಖರ್, ರಾಯಚೂರು ಬಳ್ಳಾರಿ ಹಾಗೂ ಕೊಪ್ಪಳ ಹಾಲು ಒಕ್ಕೂಟದ ನಿರ್ದೇಶಕರಾದ ವೀರಶೇಖರ್ ರೆಡ್ಡಿ ಹಾಗೂ ಜಿಂದಾಲ್ ಅಧಿಕಾರಿಗಳು ಇದ್ದರು.

Leave a Reply

Your email address will not be published. Required fields are marked *