ಬೆಂಗಳೂರು : ಕೊರೊನಾ ಲಾಕ್ ಡೌನ್ ಸಮಯದಲ್ಲಿ ಹಲವು ಸಂಸ್ಥೆ/ಕಂಪನಿಯಲ್ಲಿ ಉದ್ಯೋಗಿಗಳು ತಮ್ಮ ಕೆಲಸ ಕಳೆದುಕೊಂಡಿದ್ದಾರೆ, ಇಂತಹ ಸಂಕಷ್ಟದ ಸಮಯದಲ್ಲಿ ಎಂಕಾಂ ಎಂಬಿಎ ಪದವೀಧರರಿಗೆ ಸಿಹಿಸುದ್ದಿ ಇಲ್ಲಿದೆ.
ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರ ವಿಜ್ಞಾನಗಳ ಸಂಸ್ಥೆ ( ನಿಮ್ಹಾನ್ಸ್ ) ನಲ್ಲಿ ಪ್ರೊಜೆಕ್ಟ್ ಕೋ ಅರ್ಡಿನೇಟರ್ ಹುದ್ದೆ ಭರ್ತಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ವಿದ್ಯಾರ್ಹತೆ:-
ಶೇ.60 ಅಂಕಗಳ ಜೊತೆ ಎಂಕಾಂ ಎಂಬಿಎ ಪೂರೈಸಿದ ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಕಂಪ್ಯೂಟರ್ ಸಾಪ್ಟ್ವೇರ್ ಹಾಗೂ ಕನ್ನಡ, ಇಂಗ್ಲೀಷ್, ಹಿಂದಿ ಭಾಷಾ ಜ್ಞಾನ ಹೊಂದಿರಬೇಕು. ಗರಿಷ್ಟ ವಯೋಮಿತಿ 30 ವರ್ಷ ವಯೋಮಿತಿ ನಿಗದಿಪಡಿಸಲಾಗಿದ್ದು, ಸಂಬಳ ತಿಂಗಳಿಗೆ 25 ಸಾವಿರ ರೂ ನೀಡಲಾಗುತ್ತದೆ.
ಹೆಚ್ಚಿನ ಮಾಹಿತಿಗಾಗಿ:-
https://nimhans.ac.in ಸಂಪರ್ಕಿಸಬಹುದು. ಸಂಪೂರ್ಣ ವಿವರಗಳನ್ನೊಳಗೊಂಡ ಅರ್ಜಿಯನ್ನು chsnimhans@gmail.com ಗೆ ಕಳುಹಿಸಬಹುದಾಗಿದೆ,
