ದಾವಣಗೆರೆ ಜಿಲ್ಲೆಯ ಸಂಘ ಸಂಸ್ಥೆಗಳ ನವೀಕರಣಕ್ಕೆ ಕಡೆಯ

ದಾವಣಗೆರೆ ಜು.30, ಕರ್ನಾಟಕ ಸಂಘಗಳ ಅಧಿನಿಯಮ 1960ರಡಿಯಲ್ಲಿ ನೋಂದಣಿಗೊಂಡು 5 ವರ್ಷಗಳಿಗೂ ಮೇಲ್ಪಟ್ಟು ನವೀಕರಣಗೊಳ್ಳದೇ ಇರುವ ಸಂಘ ಸಂಸ್ಥೆಗಳಿಗೆ ನವೀಕರಣಕ್ಕಾಗಿ ಕಡೆಯ ಒಂದು ಅವಕಾಶ ನೀಡಲಾಗಿದೆ. ಜಿಲ್ಲಾ ವ್ಯಾಪ್ತಿಯಲ್ಲಿನ ಸಂಘ ಸಂಸ್ಥೆಗಳು ಪ್ರತಿ ವರ್ಷಕ್ಕೆ ರೂ.500/-ರಂತೆ ದಂಡ ಪಾವತಿಸಿ ಮತ್ತು ಅವಶ್ಯ ದಾಖಲೆಗಳನ್ನು ಸಲ್ಲಿಸಿ ಡಿ.31 ರೊಳಗೆ ನವೀಕರಣ ಮಾಡಿಸಿಕೊಳ್ಳಬಹುದಾಗಿರುತ್ತದೆ. ತಪ್ಪಿದಲ್ಲಿ ನೋಂದಣಿ ರದ್ದು ಮಾಡಲಾಗುವುದು. ಕೋವಿಡ್-19 ಪ್ರಯುಕ್ತ ವಾರ್ಷಿಕ ಸಭೆ ನಡೆಸಲು ಡಿ.31 ರವರಗೆ ಕಾಲಾವಧಿ ವಿಸ್ತರಿಸಲಾಗಿದೆ ಎಂದು ಜಿಲ್ಲಾ ಸಂಘಗಳ ನೋಂದಣಾಧಿಕಾರಿಗಳು ಹಾಗೂ ಸಹಕಾರ ಸಂಘಗಳ ಉಪನಿಬಂಧಕರಾದ ಬಿ.ಜಯಪ್ರಕಾಶ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *