ಹರಿಹರ ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ಡಿ.ಕೆ.ಶಿವಕುಮಾರ್ ಪದಗ್ರಹಣ ಕಾರ್ಯಕ್ರವನ್ನು ವಿಕ್ಷಣೆ

ಹರಿಹರ-Jul-02, ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ನೂತನ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್ ಅವರ ನೇತೃತ್ವದಲ್ಲಿ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲಿದೆ ಎಂದು ನಗರಸಭೆ ಸದಸ್ಯ ಮಹಬುಬ ಬಾಷ ಭವಿಷ್ಯ ನುಡಿದರು.
ಗುರುವಾರ ಹರಿಹರ ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ನಗರದ ಅಂಜುಮನ್ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಳ್ಳಲಾಗಿದ್ದ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾಗಿ ಡಿ.ಕೆ.ಶಿವಕುಮಾರ್ ಅವರು ಪದಗ್ರಹಣ ಕಾರ್ಯಕ್ರಮದ ನಿಯಮಿತ ಪಕ್ಷದ ಕಾರ್ಯಕರ್ತರು ಹಾಗೂ ಪಧಾದಿಕಾರಿಗಳು ಟಿ.ವಿ ಮೂಲಕ ಪದಗ್ರಹಣ ಕಾರ್ಯಕ್ರವನ್ನು ವಿಕ್ಷಣೆ ಮಾಡಿ ನಂತರ ಶಪಥ ಮಾಡಿ  ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದಲ್ಲಿ ರಾಜ್ಯಾಧ್ಯಕ್ಷರಾಗಿ ಅಧಿಕಾರ ಸ್ವೀಕರಿಸುವುದು ಸಂಪ್ರದಾಯವಾಗಿದೆ ನಮ್ಮಗೆ ಈ ಮಹಾಮಾರಿ ಕೊರೋನಾ ವೈರಾನು ವೇಗದಲ್ಲಿ ಹರಡುತ್ತಿರುವ ಹಿನ್ನಲ್ಲೆಯಲ್ಲಿ ನಾವುಗಳು ಸಮಾಜಿಕ ಅಂತ್ರ ಹಾಗೂ ಸರ್ಕಾರದ ಆದೇಶ ಕಾಪಾಡಿಕೊಂಡು ಈ ಕಾರ್ಯಕ್ರಮವನ್ನು ಮಾಡಲಾಗಿದೆ ಎಂದರು, ನಂತರ ಮಾತನಾಡಿದ ಬ್ಲಾಕ್ ಕಾಂಗ್ರೇಸ್ ತಾಲ್ಲೂಕ ಉಪಾಧ್ಯಕ್ಷ ಬಾಲರಾಜ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಈ ಸಂದರ್ಭದಲ್ಲಿ ಡಿ.ಕೆ.ಶಿವಕುಮಾರ್ ತಂತ್ರಜ್ಞಾನದ ಸಂಪೂರ್ಣ ಸದುಪಯೋಗ ಪಡೆಸಿಕೊಂಡಿರುವುದು ಶ್ಲಾಘನೀಯ. ದೇಶ ತೀರ ಸಂಕಷ್ಟ ಪರಿಸ್ಥಿತಿ ಎದುರಿಸುತ್ತಿದೆ. ಆರ್ಥಿಕವಾಗಿ ದೇಶ ಸಂಕಷ್ಟದಲ್ಲಿದೆ. ಕೋವಿಡ್ ಸಂದರ್ಭದಲ್ಲಿ ಕೆಪಿಸಿಸಿ, ತೊಂದರೆಗೊಳಗಾದ ಜನರಿಗೆ ಸಹಾಯ ಹಸ್ತ ಚಾಚಿರುವುದು ಮೆಚ್ಚುಗೆಗೆ ಕಾರಣವಾಗಿದೆ ಎಂದು ಹೇಳಿದರು. ನಗರಸಭೆ ಸದಸ್ಯ ಎಂ.ಎಸ್.ಬಾಬುಲಾಲ ಮಾತನಾಡಿ ಈಗಿನ ಸಂದರ್ಭದಲ್ಲಿ ಚಾಲೆಂಜ್ ಗಳನ್ನು ಎದುರಿಸಲು ಡಿ.ಕೆ.ಶಿವಕುಮಾರ್ ಪಕ್ಷ ಮುನ್ನಡೆಸಲು ಸೂಕ್ತ ವ್ಯಕ್ತಿ ಎನ್ನುವುದು ನಮ್ಮ ಪಕ್ಷದ ಎಲ್ಲಾ ಕಾರ್ಯಕರ್ತರಿಗೆ ಅರಿವಿದೆ. ಎನ್ ಎಸ್.ಯು.ಐ ನಿಂದ ನಿರಂತರ ಹೋರಾಟ ಮಾಡುತ್ತಾ ಈ ಹಂತಕ್ಕೆ ಬಂದು ನಿಂತಿದ್ದಾರೆ. ಅವರು ಡೈನಾಮಿಕ್ ಲೀಡರ್ ಆಗಿದ್ದಾರೆ. ಅನೇಕ ಯೋಜನೆಗಳನ್ನು ಹಾಕಿ ಪಕ್ಷ ನಡೆಸುವ ಚಾಣಾಕ್ಷತೆ ಹೊಂದಿದ್ದಾರೆ. ಚಾಲೆಂಜ್ ಗಳನ್ನು ಎದುರಿಸುವ ಶಕ್ತಿ ಅವರಿಗಿದೆ.ಎಂದು ಹೇಳಿದರು.
ಈ ವೇಳೆಯಲ್ಲಿ ಮುಖಂಡರಾದ ದಾದಾಪೀರ್ ಬಾನ್ನುವಳ್ಳಿ,ಅಬ್ದುಲ್ ರಹಿಮಾನ್,ಅಬುಸಾಲೇಹಾ,ಸೈಯದ್ ಇಫ್ತೆಖಾರ್,ಶಾಬುಧ್ಧೀನ್, ತಾಹೀರ್ ಸೇರಿದಂತೆ ಪಕ್ಷದ ಪಧಾಧಿಕಾರಿಗಳು ಹಾಗೂ ಕಾರ್ಯಕರ್ತರು ಪಾಲ್ಗೋಡಿದ್ದರು.

Leave a Reply

Your email address will not be published. Required fields are marked *