ಏ-14-2021, www.truemediakannada.in-ರಾಜ್ಯದಲ್ಲಿ ಕರೋನಾ ಅಟ್ಟಹಾಸ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ, ಸದ್ಯ ಇದು ಆತಂಕಕ್ಕೆ ಕಾರಣವಾಗಿದ್ದು, ಹೀಗಾಗಿ ಸದ್ಯ ಹಲವು ಜಿಲ್ಲೆಗಳಲ್ಲಿ ನೈಟ್ ಕರ್ಫೂ ಜಾರಿಯಾಗಿದೆ. ಕಠಿಣ ನಿಯಮಗಳನ್ನು ಹೇರಿದ್ದರೂ ಕಟ್ಟುನಿಟ್ಟಾಗಿ ಪಾಲನೆ ಆಗುತ್ತಿಲ್ಲ ಹೀಗಾಗಿ ಮತ್ತೆ ಲಾಕ್ ಡೌನ್ ಬಗ್ಗೆ ಚರ್ಚೆಗಳು ನಡೆಯುತ್ತಿವೆ ಈ ಕುರಿತು ಕರೋನಾ ಟಾಸ್ಕ್ ಫೋರ್ಸ್ ಸದಸ್ಯರ ಜೊತೆ ಆರೋಗ್ಯ ಸಚಿವ ಡಾ. ಕೆ ಸುಧಾಕರ್ ಸಭೆ ನಡೆಸಿದರು. ಈ ಸಂದರ್ಭದಲ್ಲಿ ಲಾಕ್ ಡೌನ್ ಬಗ್ಗೆಯೂ ಚರ್ಚೆ ನಡೆದಿದೆ ರಾಜ್ಯದಲ್ಲಿ ಲಾಕ್ ಡೌನ್ ಅನಿವಾರ್ಯ ಎಂದು ಕರೋನಾ ಟಾಸ್ಕ್ ಪೋರ್ಸ್ ಹಲವು ಸಲಹೆಗಳನ್ನು ನೀಡಿದೆ, ಆದರೆ ಲಾಕ್ ಡೌನ್ ಪ್ರಸ್ತಾಪಕ್ಕೆ ಸಚಿವ ಸುಧಾಕರ್ ಒಪ್ಪಿಗೆ ನೀಡಿಲ್ಲ ಸಿ.ಎಂ ಜೊತೆ ಮತ್ತೊಮ್ಮೆ ಚರ್ಚೆ ಮಾಡಿ ಈ ಕುರಿತು ನಿರ್ಧಾರ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ ಎಂದು ತಿಳಿದು ಬಂದಿದೆ, ಹೀಗಾಗಿ ಲಾಕ್ ಡೌನ್ ಕುರಿತು ಸಿಎಂ ಯಡಿಯೂರಪ್ಪ ಅವರೇ ನಿರ್ಧಾರ ಕೈಗೊಳ್ಳಬೇಕಿದೆ ಒಟ್ಟಾರೆ ವಿದ್ಯಮಾನಗಳು ರಾಜ್ಯದಲ್ಲಿ ಮತ್ತೊಮ್ಮೆ ಲಾಕ್ ಡೌನ್ ಮರುಕಳಿಸಬಹುದೇ ಎನ್ನುವ ಪ್ರಶ್ನೆ ಮೂಡಿಸುವಂತಿದೆ? ಆದರೆ ಇತ್ತೀಚೆಗೆ ಹಲವು ಬಾರಿ ಮಾತನಾಡಿರುವ ಸಿ.ಎಂ ಲಾಕ್ ಡೌನ್ ಮಾಡುವ ಮಾತೇ ಇಲ್ಲ ಎಂದಿದ್ದರು ಆದರೆ ಈಗ ಹಿಂದಿನಂತೆ ಕರೋನಾ ಸೋಂಕಿತರ ಸಂಖ್ಯೆ ಕಡಿಮೆಯಾಗುತ್ತಿಲ್ಲ, ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಏರಿಕೆ ಕಾಣುತ್ತಿದೆ ಈ ಪರಿಸ್ಥಿತಿಯಲ್ಲಿ ಸಿ.ಎಂ ಮನಸ್ಥಿತಿ ಬದಲಾಯಿಸುತ್ತಾರೆಯೇ ಎಂಬುದು ಕಾದು ನೋಡಬೇಕಿದೆ.

