ಸಂತ್ರಸ್ತ ಮಹಿಳೆಗೆ ಮೂಲಭೂತ ಸೌಲಭ್ಯ ಕಲ್ಪಿಸಲು ನ್ಯಾಯಾಧೀಶ ಮಹಾದೇವ್ ಕಾನಟ್ಟಿ ಸೂಚನೆ

ಹರಿಹರ  : ಸಂತ್ರಸ್ತ ಮಹಿಳೆಗೆ ಮೂಲಭೂತ ಸೌಲಭ್ಯ ಕಲ್ಪಿಸುವಂತೆ ಪ್ರಥಮ ದರ್ಜೆ ಸಿವಿಲ್ ಜಡ್ಜ್ ಹಾಗು ಹರಿಹರ ತಾಲೂಕುಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನ್ಯಾ.ಮಹಾದೇವ್  ಕಾನಟ್ಟಿ ಅಧಿಕಾರಿಗಳಿಗೆ ಸೂಚನೆ ನೀಡಿದರು.
     ಸಾರ್ವಜನಿಕ ಆಸ್ಪತ್ರೆಗೆ ಶುಕ್ರವಾರ ಭೇಟಿಗೆoದು ಆಗಮಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಾಲೂಕಿನ ಕುಣೆ ಬೇಳಕೆರೆ ಗ್ರಾಮದ ನಿವಾಸಿ ಗಿರಿಜಮ್ಮ ಕೋo ಶಿವಪ್ಪ ಎಂಬ ವಯೋವೃದ್ಧ ಮಹಿಳೆಯು ಮೂಲಭೂತ ಸೌಲಭ್ಯ ವಂಚಿತಳಾಗಿ ತುಂಬಾ ತೊಂದರೆಯಲ್ಲಿರುವ ಬಗ್ಗೆ ಮಾಧ್ಯಮಗಳಲ್ಲಿ ಪ್ರಸಾರ ಮತ್ತು ಪತ್ರಿಕೆಗಳಲ್ಲಿ ಪ್ರಕಟಗೊಂಡ ಹಿನ್ನೆಲೆಯಲ್ಲಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸೂಚನೆಯ ಮೇರೆಗೆ ಪರಿಶೀಲನೆಗೆ ಆಗಮಿಸಿದ್ದೇನೆ.
      ವಾರ್ಡ್ ನಲ್ಲಿದ್ದ ಸಂತ್ರಸ್ತೆ ಗಿರಿಜಮ್ಮನನ್ನು ಈ ವಿಚಾರವಾಗಿ ಮಾತನಾಡಿಸಿದ್ದೇನೆ ಆಕೆಗೆ ಬರಬೇಕಾಗಿದ್ದ ವೃದ್ಧಾಪ್ಯ ವೇತನ ಕೆಲ ತಿಂಗಳಿಂದ ಬಂದಿರುವುದಿಲ್ಲ ಹಾಗು ತನಗೆ ವಾಸಿಸಲು ತನ್ನದೇ ಆದ ಸ್ವಂತ ಮನೆ ಇರುವುದಿಲ್ಲ. ಬಸ್ ಸ್ಟ್ಯಾಂಡ್, ಗ್ರಾಮ ಪಂಚಾಯತಿ ಬಳಿ ವಾಸ್ತವ ಮಾಡುತ್ತಿರುವ ಬಗ್ಗೆ ಮಾಹಿತಿ ನೀಡಿದ ಕಾರಣ ಜೊತೆಯಲ್ಲಿದ್ದ ತಹಶೀಲ್ದಾರ್ ರವರಿಗೆ ವಸತಿ ಸೌಲಭ್ಯ ಕಲ್ಪಿಸಲು ಸೂಚನೆ ನೀಡದ್ದೇನೆ.
     ಆಕೆಯ ಆರೋಗ್ಯದ ಬಗ್ಗೆ ಮುಖ್ಯ ಆಡಳಿತ ವೈದ್ಯಾಧಿಕಾರಿ ಡಾ.ಎಲ್. ಹನುಮಾನಾಯಕರವರಿಂದ ಮಾಹಿತಿಯನ್ನು ಸಹ ಪಡೆದಿದ್ದೇನೆ ಆರೋಗ್ಯದ ದೃಷ್ಟಿಯಿಂದ ಆಕೆಯ ಕಾಲುಗಳ ಮಂಡಿ ನೋವಿದ್ದು ಮಂದಿಯ ಎಲುಬನ್ನು ಬದಲಿಸಬೇಕಾಗಿರುವ ಕಾರಣಕ್ಕೆ ತಜ್ಞರ ಸಲಹೆ ಹಾಗು ಹೆಚ್ಚಿನ ಚಿಕಿತ್ಸೆಗಾಗಿ ದಾವಣಗೆರೆಯ ಜಿಲ್ಲಾ ಆಸ್ಪತ್ರೆಗೆ ತಕ್ಷಣ ರವಾನಿಸುವಂತೆ ತಿಳಿಸಿದ್ದೇನೆ.
      ಮಾಧ್ಯಮ ಮತ್ತು ಪತ್ರಿಕೆಗಳಲ್ಲಿ ತಿಳಿಸಿರುವಂತೆ ಆಕೆಯ ವೃದ್ಧಾಪ್ಯ ವೇತನ ತಡವಾಗಿದೆ ಅಥವಾ ಕೊಟ್ಟಿಲ್ಲ ಎನ್ನುವುದು ಸತ್ಯಕ್ಕೆ ದೂರವಾದ ಸಂಗತಿ ಈಗಾಗಲೇ ಆಕೆಗೆ ಜನವರಿ 2000 ದಿಂದ ನವಂಬರ್ 2023ರ ವರೆಗೆ ಸತತವಾಗಿ ವೃದ್ಧಪ್ಯ ವೇತನ ಪಾವತಿ ಆಗಿರುತ್ತದೆ. ಡಿಸೆಂಬರ್ 2023 ವೇತನವು ಕೆಲ ದಿನಗಳ ತಡವಾಗಿದೆ ಇದು ಬಿಟ್ಟರೆ ವೃದ್ಧಾಪ್ಯ ವೇತನದಿಂದ ಆಕೆಗೆ ತೊಂದರೆ ಆಗಿಲ್ಲ ಎಂದು ತಿಳಿಸಿದರು.
     ಇದೇ ವೇಳೆ ತಹಸೀಲ್ದಾರ್ ಗುರುಬಸವರಾಜಯ್ಯ ಮಾತನಾಡಿ ಮಾಧ್ಯಮ ಹಾಗೂ ಪತ್ರಿಕೆಗಳಲ್ಲಿ ಗಿರಿಜಮ್ಮ ಗೆ ವೃದ್ಧಾಪ್ಯವೇತನ ಸಂದಾಯವಾಗಿಲ್ಲ ಎಂದು ಬಿಂಬಿಸಲಾಗುತ್ತಿದೆ. ಆದರೆ ನಮ್ಮ ಕಚೇರಿಯಿಂದ ಯಾವುದೇ ರೀತಿಯ ತಡವಾಗಿರುವುದಿಲ್ಲ ಜನವರಿ 2018 ನವಂಬರ್ 2023ರ ವರೆಗೆ ವೃದ್ಧಾಪ್ಯ ವೇತನ ಆಕೆಗೆ ತಲುಪಿರುತ್ತದೆ ಡಿಸೆಂಬರ್ 2023 ರ ಒಂದು ತಿಂಗಳ ವೇತನ ಮಾತ್ರ ತಡವಾಗಿದೆ. ಮಾಧ್ಯಮ ಮತ್ತು ಪತ್ರಿಕೆಗಳವರು ವರದಿಯನ್ನು  ಸಂಪೂರ್ಣ ತಿಳಿದು ಮಾಡಬೇಕು ಎಂದು ಹೇಳಿದರು.
    ಆಸ್ಪತ್ರೆಯ ಮುಖ್ಯ ಆಡಳಿತ ವೈದ್ಯಾಧಿಕಾರಿ ಡಾ.ಎಲ್.ಹನುಮಾ ನಾಯಕ್ ಮಾತನಾಡಿ ಗಿರಿಜಮ್ಮನನ್ನು ನಮ್ಮ ಆಸ್ಪತ್ರೆಗೆ ಕರೆ ತಂದಾಗಿನಿಂದಲೂ ಅವರನ್ನು ಅತ್ಯಂತ ಕಾಳಜಿಯಿಂದ ಗಮನಿಸಿ ಚಿಕಿತ್ಸೆ ನೀಡಲಾಗುತ್ತಿದೆ.ಆಕೆಗೆ ಕಾಲಿನ ಮಂಡಿಯ ನೋವಿದ್ದು ಮಂಡಿ ಚಿಪ್ಪಿನ ಎಲುಬುಗಳನ್ನು ಬದಲಿಸ ಬೇಕಾಗಿರುವುದರಿಂದ ತಜ್ಞರಿಂದ ಸಲಹೆ ಪಡೆದು ದಾವಣಗೆರೆ ಜಿಲ್ಲಾ ಆಸ್ಪತ್ರೆಗೆ ರವಾನಿಸ ಲಾಗುವುದು ಎಂಬ ಮಾಹಿತಿಯನ್ನು ನೀಡಿದರು.
     ಈ ಸಮಯದಲ್ಲಿ ವಕೀಲರ ಸಂಘದ ಅಧ್ಯಕ್ಷ ಬಿ.ಆನಂದ್, ಉಪಾಧ್ಯಕ್ಷೇ ಶುಭ, ಕಾರ್ಯದರ್ಶಿ ಎಂ.ನಾಗರಾಜ್, ಸಹ ಕಾರ್ಯ ದರ್ಶಿ ಪಿ.ಸಿ.ಪ್ರಕಾಶ್, ನಿಕಟ ಪೂರ್ವ ಅಧ್ಯಕ್ಷ ಪಿ.ರುದ್ರಗೌಡ, ವಕೀಲರಗಳಾದ ಜಿ.ಬಿ.ರಮೇಶ್, ಮಾರುತಿ ಬೇಡರ್, ನಟರಾಜ್, ಬಾಲಾಜಿ, ಮಾಲತೇಶ್, ಆಸ್ಪತ್ರೆಯ ವೈದ್ಯರಾದ ಡಾ.ವಿಕ್ರಂ,ಹಿರಿಯ ಆರೋಗ್ಯ ನಿರೀಕ್ಷಕ ಎಂ.ಉಮ್ಮಣ್ಣ ಸೇರಿದಂತೆ ಆಸ್ಪತ್ರೆಯ ಸಿಬ್ಬಂದಿಗಳು ಕೆಲ ವಕೀಲರುಗಳು ಉಪಸಿತರಿದ್ದರು.

Leave a Reply

Your email address will not be published. Required fields are marked *