ಹರಿಹರ ಜ 9 ಜಿಲ್ಲೆಯ ಸಾರ್ವಜನಿಕರು ಕಳೆದುಕೊಂಡ ಸುಮಾರು 75 ಪತ್ತೆಹಚ್ಚಿ, ಮೊಬೈಲ್‌ಗಳನ್ನು ಮಾಲೀಕರಿಗೆ ನೀಡುವುದರ ಮೂಲಕ ಹರಿಹರದ ಜನತೆಗೆ ಮೆಚ್ಚಿಗೆ ಪಾತ್ರರಾಗಿರುವ ನಗರ ಠಾಣೆ ಇನ್ಸ್ಪೆಕ್ಟರ್ ಎಸ್ ದೇವಾನಂದ್
ಈ ವೇಳೆ ಸಂಜೆವಾಣಿಯೊಂದಿಗೆ ಮಾತನಾಡಿ
ಹಿಂದೆ ಮೊಬೈಲ್ ಕಳೆದುಕೊಂಡವರಿಗೆ ಮೊಬೈಲ್ ಫೋನ್ ಮರಳಿ ಸಿಗುವುದೇ ಕಷ್ಟ ಆಗಿತ್ತು ಆದರೆ ಈ ವಿಶೇಷವಾದ ಪೋರ್ಟಲ್ ನಿಂದ ಪೊಲೀಸರು ಮೊಬೈಲ್ ಗಳನ್ನ ಟ್ರೇಸ್ ಮಾಡಿ ವಾರಸುದಾರರಿಗೆ ಹಿಂತಿರುಗಿಸುತ್ತಿದ್ದಾರೆ. ಒಂದು ವೇಳೆ ಯಾವುದಾದರೂ ಮೊಬೈಲ್ ಕಳ್ಳತನವಾದರೆ ಅಥವಾ ಕಳೆದು ಹೋದರೆ ಅದರ ವಾರಸುದಾರರು ತಕ್ಷಣ CEIR ಪೋರ್ಟಲ್ ನಲ್ಲಿ ಮೊಬೈಲ್ ಮಾಹಿತಿಯನ್ನು ದಾಖಲಿಸಬೇಕು. ಅವರಿಗೆ ಅದು ಸಾಧ್ಯವಾಗದಿದ್ದಲ್ಲಿ ಹತ್ತಿರದ ಪೊಲೀಸ್ ಠಾಣೆಗೆ ಬಂದು ದೂರನ್ನು ನೀಡಬೇಕು. ಅದನ್ನು ಹುಡುಕಿ ಕೊಡುವುದರ ಜೊತೆಗೆ ಅದು ಯಾವುದೇ ಅಪರಾಧ ಕೃತ್ಯಗಳಿಗೆ ಬಳಸಿಕೊಳ್ಳದಂತೆ ನೋಡಿಕೊಳ್ಳುವುದು ನಮ್ಮ ಪೊಲೀಸ್ ಇಲಾಖೆಯ ಜವಾಬ್ದಾರಿ ಎಂದು ಸಾರ್ವಜನಿಕರಿಗೆ ಮಾಹಿತಿ ನೀಡಿದ್ದರು
ಉತ್ತಮ ಮಳೆ, ಬೆಳೆ ಆಗದೆ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಕೆಲ ಸಮಾಜಘಾತುÜಕ, ವಿಕೃತ, ಹೀನ ಮನಸ್ಸಿನ ವ್ಯಕ್ತಿಗಳು, ಗುಂಪುಗಳು ಕಳ್ಳತನ, ದರೋಡೆಗೆ ಇಳಿದಿದ್ದು, ಸಾಮಾನ್ಯ ಜನರು ಕಷ್ಟಪಟ್ಟು ಕೂಡಿಟ್ಟ ಹಣ, ಒಡವೆ, ವಾಹನ ಸೇರಿದಂತೆ ಇತರ ಸಂಪತ್ತನ್ನು ದೋಚಿಕೊಂಡು ಹೋಗುತ್ತಿದ್ದಾರೆ. ಹಾಗಾಗಿ, ಸಾರ್ವಜನಿಕರು ಮನೆಯಲ್ಲಿ ಹೆಚ್ಚಿನ ನಗದು, ಬಂಗಾರ, ಬೆಳ್ಳಿಯನ್ನು ಇಟ್ಟುಕೊಳ್ಳದೆ ಬ್ಯಾಂಕ್‌ನಲ್ಲಿ ಲಾಕರ್ ತೆಗೆದು ಇಡಬೇಕು. ಮನೆಯ ಹೊರಗಡೆ ನಿಲ್ಲಿಸುವ ವಾಹನಗಳಿಗೆ ಚೈನ್ ಮೂಲಕ ಕಟ್ಟಬೇಕು ಪ್ರತಿಯೊಬ್ಬರು ಜಾಗೃತರಾಗಬೇಕು ಅಪರಾಧ ಪ್ರಕರಣ ತಡೆಗಟ್ಟುವುದಕ್ಕೆ ಪೋಲಿಸ್ ಇಲಾಖೆಯೊಂದಿಗೆ ನಾಗರಿಕರು ಕೈಜೋಡಿಸಿದಾಗ ಅಪರಾಧ ಮುಕ್ತ ಸಮಾಜ ಮಾಡುವುದಕ್ಕೆ ಸಾಧ್ಯವಾಗುತ್ತದೆ ಎಂದರು
ಇಲ್ಲಿಯವರೆಗೂ ಸುಮಾರು 75 ಮೊಬೈಲುಗಳನ್ನು ಕಳೆದುಕೊಂಡ ವಾರಸುದಾರರಿಗೆ ನೀಡಿದ್ದಾರೆ
ಈ ಸಂದರ್ಭದಲ್ಲಿ ಅಪರಾಧ ವಿಭಾಗದ ಪೊಲೀಸ್ ಅಧಿಕಾರಿ ರವಿ. ಕಂದಾಯ ಇಲಾಖೆಯ ಗ್ರಾಮ ಆಡಳಿತ ಅಧಿಕಾರಿ ಎಚ್‍ಜಿ ಹೇಮಂತ್ ಕುಮಾರ್. ಆಸಿಫ್. ಮೊಬೈಲ್ ವಾರಸುದಾರರು ಇಲಾಖೆ ಸಿಬ್ಬಂದಿ ವರ್ಗ ಇದ್ದರು
