ಬಡಗಿ ಕೃಷ್ಣಪ್ಪ ಅವರ ಸವಿ ನೆನಪಿಗಾಗಿ  ಎಲ್ ಬಿಕೆ ಟ್ರಸ್ಟ್ ನ ಬಿ. ವೀರಣ್ಣ, ಮೇಯರ್ ವಿನಾಯಕ ಪೈಲ್ವಾನ್ ಹಣ್ಣು ವಿತರಣೆ

ದಾವಣಗೆರೆ : ಎಲ್ ಬಿಕೆ ಟ್ರಸ್ಟ್ ಹಾಗೂ ಬಡಗಿ ಕೃಷ್ಣಪ್ಪ ಮನೆತನದಿಂದ ಪ್ರತಿ ವರ್ಷದಂತೆ ಈ ವರ್ಷವೂ ಬಡಗಿ ಕೃಷ್ಣಪ್ಪ ಅವರ 10ನೇ ವರ್ಷದ ಸವಿ ನೆನಪಿಗಾಗಿ ವಿಶೇಷ ಚೇತನ ಮಕ್ಕಳಿಗೆ ಸಿಹಿ ಮತ್ತು ಹಣ್ಣು ವಿತರಣೆ ಮೂಲಕ ಸಮಾಜ ಮುಖಿ ಸೇವಾ ಕಾರ್ಯ ಮಾಡಲಾಯಿತು.
ನಗರ ಪಾಲಿಕೆ ಮಹಾಪೌರರಾದ ವಿನಾಯಕ ಪೈಲ್ವಾನ್ ಅವರ ತಂದೆಯವರಾದ ಬಡಗಿ ಕೃಷ್ಣಪ್ಪ ಅವರ ಸವಿನೆನಪಿಗಾಗಿ ಭಾನುವಾರ ನಗರದ ದೇವರಾಜ್ ಅರಸ್ ಬಡಾವಣೆ ಬಿ ಬ್ಲಾಕ್ ಶಿವಾಲಿ ಟಾಕೀಸ್ ಹತ್ತಿರ ಇರುವ ಅಂಧ ಮಕ್ಕಳ ಸರ್ಕಾರಿ ಪಾಠಶಾಲೆಯಲ್ಲಿನ ಮಕ್ಕಳ ಕುಶಲೋಪರಿ ವಿಚಾರಿಸಿದ ಮಹಾಪೌರರಾದ ವಿನಾಯಕ ಪೈಲ್ವಾನ್ ಹಾಗೂ ಎಲ್ ಬಿಕೆ ಟ್ರಸ್ಟ್ ನ ಗೌರವಾಧ್ಯಕ್ಷರು, ಜಿಲ್ಲಾ ವಾಲ್ಮೀಕಿ ನಾಯಕ ಸಮಾಜದ ಅಧ್ಯಕ್ಷರಾದ ಬಿ. ವೀರಣ್ಣ ಸಿಹಿ ಜೊತೆಗೆ ಹಣ್ಣು ವಿತರಿಸಿದರು.
ಈ ವೇಳೆ ಬಿ. ವೀರಣ್ಣ ಮಾತನಾಡಿ, ಪ್ರತಿ ವರ್ಷವೂ ಬಡಗಿ ಕೃಷ್ಣಪ್ಪ ಅವರ ಸವಿ ನೆನಪಿಗಾಗಿ ವಿವಿಧ ಸಮಾಜ ಮುಖಿ ಕಾರ್ಯಗಳನ್ನು ಮಾಡುತ್ತಿದ್ದು, ಮುಂದಿನ ದಿನಗಳಲ್ಲೂ ಟ್ರಸ್ಟ್ ನಿಂದ ಮತ್ತಷ್ಟು ಸಮಾಜ ಮುಖಿ ಕಾರ್ಯಗಳನ್ನು ಕೈಗೊಳ್ಳಲಾಗುವುದು. ಈ ಟ್ರಸ್ಟ್ ನಿಂದ ಈಗಾಗಲೇ ಸಾಮೂಹಿಕ ವಿವಾಹ ಸೇರಿದಂತೆ ವಿವಿಧ ಸಮಾಜ ಸೇವಾ ಕಾರ್ಯಗಳನ್ನು ಮಾಡಲಾಗುತ್ತಿದೆ ಎಂದು ತಿಳಿಸಿದರು.
ಬಡಗಿ ಕೃಷ್ಣಪ್ಪ ಅವರ ಕೃಪಾಶಿರ್ವಾದದಿಂದ ನಮ್ಮ ಮನೆತನ ಬೆಳೆಗುತ್ತಿದ್ದು, ಎಲ್ ಬಿಕೆ ಟ್ರಸ್ಟ್ ಸಹ ಬೆಳೆವಣಿಗೆ ಕಾಣುತ್ತಿದೆ. ಬಡಗಿ ಕೃಷ್ಣಪ್ಪ ಅವರ ಮಗ ಮತ್ತು ನನ್ನ ಅಳಿಯರಾದ ವಿನಾಯಕ ಪೈಲ್ವಾನ್ ಪಾಲಿಕೆ ಸದಸ್ಯರಾಗಬೇಕೆಂಬ ಆಸೆ ಬಡಗಿ ಕೃಷ್ಣಪ್ಪ ಅವರಿಗಿತ್ತು. ಅದರಂತೆ ಇದೀಗ ವಿನಾಯಕ ಪೈಲ್ವಾನ್ ಮೇಯರ್ ಆಗಿದ್ದಾರೆ ಎಂದು ಹರುಷ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಟ್ರಸ್ಟ್ ಉಪಾಧ್ಯಕ್ಷ ಎನ್.ಎಂ. ಆಂಜನೇಯ ಗುರೂಜಿ, ಸರ್ಕಾರಿ ಅಂಧ ಮಕ್ಕಳ ಶಾಲೆಯ ಅಧ್ಯಕ್ಷ ಇ ವೈ ಪ್ರಿಯದರ್ಶಿನಿ, ರಾಘವೇಂದ್ರ ಬಿ.ಕೆ, ಸತೀಶ್, ಕುಮಾರ್, ಸಮಿವುಲ್ಲಾ, ಪರಶುರಾಮ್, ದಾಸಪ್ಪ, ಕಿಶೋರ್, ಬಕೇಶ್, ಮಹೇಶ್, ಬಸವರಾಜ್, ಅರುಣ್ ಸೇರಿದಂತೆ ಇತರರು ಇದ್ದರು.

Leave a Reply

Your email address will not be published. Required fields are marked *